ಸೂತಕದ ಸಮಯದಲ್ಲಿ ಚುನಾವಣೇ ಎದುರಿಸುವ ದುರ್ವಿಧಿ ನಮ್ಮದು : ಕುಮಾರಸ್ವಾಮಿ

ಬೆಂಗಳೂರು :

    ಶಿರಾದಲ್ಲಿ ನಾವು ಸೂತಕದ ಮನೆಯಲ್ಲಿದ್ದೇವೆ. ಹೀಗಿದ್ದೂ ಚುನಾವಣೆ ಎದುರಿಸಬೇಕಿರುವುದು ದುರ್ವಿಧಿ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

    ಶಿರಾ ಉಪಚುನಾವಣೆ ಕುರಿತಂತೆ ಟ್ವೀಟ್ ಮಾಡಿರುವ ಹೆಚ್.ಡಿ.ಕುಮಾರಸ್ವಾಮಿ, ಶಿರಾದಲ್ಲಿ ನಾವು ಸೂತಕದ ಮನೆಯಲ್ಲಿದ್ದೇವೆ. ಹೀಗಿದ್ದೂ ಚುನಾವಣೆ ಎದುರಿಸಬೇಕಿರುವುದು ದುರ್ವಿಧಿ. ನಾವು ಅನಿವಾರ್ಯವಾಗಿ ಎದುರಿಸಬೇಕಾದ ನೋವಿನ ಚುನಾವಣೆ ಇದು. ಇತರರು ಇದನ್ನು ಪ್ರತಿಷ್ಠೆಯಾಗಿ ಪರಿಗಣಿಸಿದ್ದಾರೆ. ಅವರಿಗೆ ಇದು ಲಾಭ-ನಷ್ಟದ ವಿಚಾರ. ಆದರೆ ನಾವು ಇಲ್ಲಿ ನಮ್ಮ ನೋವಿಗೆ ಗೆಲುವಿನ ಮೂಲಕ ಪರಿಹಾರ ಹುಡುಕ ಬಯಸುತ್ತೇವೆ ಎಂದು ಹೇಳಿದ್ದಾರೆ.

    ಶಿರಾ ನಾವು ಗೆದ್ದ ಕ್ಷೇತ್ರವೂ ಹೌದು, ಆಪರೇಷನ್ ಕಮಲ ಮೆಟ್ಟಿ ಉಳಿಸಿಕೊಂಡ ಕ್ಷೇತ್ರವೂ ಹೌದು. ಸತ್ಯಣ್ಣ ಇಲ್ಲಿ ಗೆದ್ದಿದ್ದರು. ಬಿಜೆಪಿಯವರ ಆಮಿಷಕ್ಕೆ ಆಕರ್ಷಿತರಾಗದೇ ಕ್ಷೇತ್ರವನ್ನು ಜೆಡಿಎಸ್ಗೇ ಉಳಿಸಿಕೊಟ್ಟಿದ್ದರು. ಸತ್ಯಣ್ಣ ಇದ್ದಿದ್ದರೆ ಈ ಕ್ಷೇತ್ರ ನಮ್ಮಲ್ಲೇ ಇರುತ್ತಿತ್ತು. ನ್ಯಾಯಬದ್ಧವಾಗಿ ಶಿರಾ ನಾವೇ ಗೆಲ್ಲಬೇಕಾದ ಕ್ಷೇತ್ರ ಎಂದು ಟ್ವೀಟ್ ಮಾಡಿದ್ದಾರೆ.

    ಶಿರಾ ಮತ್ತು ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆ ದಿನಾಂಕ ನಿಗದಿಯಾಗಿದೆ. ಶಿರಾ ನಮ್ಮದೇ ಕ್ಷೇತ್ರ. ರಾಜರಾಜೇಶ್ವರಿ ನಗರವೂ ಜೆಡಿಎಸ್ ಪ್ರಾಬಲ್ಯವಿರುವ ಕ್ಷೇತ್ರ. ಎರಡೂ ಕ್ಷೇತ್ರಗಳಲ್ಲೂ ಜೆಡಿಎಸ್ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸ ಅಚಲವಾಗಿದೆ. ಸೂಕ್ತ, ನ್ಯಾಯ ಸಮ್ಮತ ಅಭ್ಯರ್ಥಿಗಳನ್ನು ಶೀಘ್ರವೇ ಪಕ್ಷ ಘೋಷಿಸುತ್ತದೆ ಎಂದು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ