ಎಸ್‌ಡಿಪಿಐ ಗೂ ನಮಗೂ ಯಾವುದೇ ಸಂಬಂಧವಿಲ್ಲ : ಮುಸ್ಲಿಂ ಧಾರ್ಮಿಕ ಮುಖಂಡರು

ಬೆಂಗಳೂರು

     ದಿ ಸೋಷಿಯಲ್ ಡೆಮಾಕ್ರಿಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ನಮಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಅಲ್ಪಸಂಖ್ಯಾತ ಮುಸ್ಲಿಂ ಹಿರಿಯ ಮುಖಂಡರುಗಳು, ಧಾರ್ಮಿಕ ನಾಯಕರುಗಳು ಜನ ಪ್ರತಿನಿಧಿಗಳು ಸ್ಪಷ್ಟನೆ ನೀಡಿದ್ದಾರೆ ಎಂದು ನಗರದ ಪೊಲೀಸ್ ಆಯುಕ್ತ ಭಾಸ್ಕರ್‌ರಾವ್ ಅವರು ತಿಳಿಸಿದ್ದಾರೆ.

     ಎಸ್‌ಡಿಪಿಐನ ಅಪರಾಧ ಕೃತ್ಯಗಳು, ಕೋಮು ಗಲಭೆ ಸೃಷ್ಟಿಸುವ ಯತ್ನದ ಬಗ್ಗೆ ಅಲ್ಪಸಂಖ್ಯಾತ ಮುಸ್ಲಿಂ ಹಿರಿಯ ಮುಖಂಡರುಗಳು, ಧಾರ್ಮಿಕ ನಾಯಕರುಗಳು ಜನ ಪ್ರತಿನಿಧಿಗಳ ಜೊತೆ ಚರ್ಚೆ ನಡೆಸಲಾಗಿದ್ದು ಎಲ್ಲರೂ ಎಸ್‌ಡಿಪಿಐ ಕೃತ್ಯಗಳಿಂದ ನಮಗೂ ಕೆಟ್ಟ ಹೆಸರು ಬರಲಿದ್ದು, ಕೂಡಲೇ ಅವರನ್ನು ಅದರ ಮೇಲೆ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾರೆ ಎಂದು ತಿಳಿಸಿದರು.

     ವರುಣ್ ಕೊಲೆಯತ್ನ ಕೃತ್ಯದಲ್ಲಿ ಆರೋಪಿಗಳನ್ನು ಬಂಧಿಸಲು ಮುಸ್ಲಿಂ ನಾಯಕರುಗಳು ನಮಗೆ ಸಂಪೂರ್ಣ ಬೆಂಬಲ ನೀಡಿದ್ದರಲ್ಲದೆ ತನಿಖೆಗೆ ಸಹಕಾರ ಕೂಡ ನೀಡಿದ್ದಾರೆ. ಅವರ ಸಹಕಾರವಿಲ್ಲದಿದ್ದರೆ ಆರೋಪಿಗಳನ್ನು ಪತ್ತೆ ಹಚ್ಚುವುದು ಕಷ್ಟವಾಗುತ್ತಿತ್ತು ಎಂದು ಹೇಳಿದರು.

ನಗರ ಸುರಕ್ಷಿತ

     ಎಸ್‌ಡಿಪಿಐ ಕಾರ್ಯಕರ್ತರು ನಡೆಸಿದ ಮಾರಣಾಂತಿಕ ಹಲ್ಲೆಯನ್ನು ಪತ್ತೆ ಹಚ್ಚಲು ನಗರದ ನಾಗರಿಕರೂ ಕೂಡ ತಾವು ಅಳವಡಿಸಿಕೊಂಡಿರುವ ಸಿಸಿಟಿವಿ ಪುಟೇಜ್‌ಗಳನ್ನು ನೀಡಿ ತಮಗೆ ದೊರೆತಿರುವ ಮಾಹಿತಿಯನ್ನು ನೀಡಿದ್ದರಿಂದ ಆರೋಪಿಗಳನ್ನು ಪತ್ತೆ ಹಚ್ಚುವುದು ಸುಲಭವಾಯಿತು. ಇದಕ್ಕಾಗಿ ನಾಗರಿಕರಿಗೆ ಕೃತಜ್ಞನಾಗಿದ್ದೇನೆ ಎಂದು ಅವರು ತಿಳಿಸಿದರು.

    ನಗರದೆಲ್ಲೆಡೆ ಸಿಸಿ ಟಿವಿ ಕ್ಯಾಮರಾಗಳ ಕಣ್ಗಾವಲಿದೆ. ಅದು 19ಸಾವಿರಕ್ಕೂ ಹೆಚ್ಚು ಪೊಲೀಸರು ಕೋಮು ಗಲಭೆ ಸೃಷ್ಟಿಸುವ ಉಗ್ರಗಾಮಿ ಚಟುವಟಿಕೆಗಳನ್ನು ನಡೆಸುವವರ ಮೇಲೆ ಹದ್ದಿನ ಕಣ್ಣಿಡಲಿದ್ದು, ಯಾರು ನಮ್ಮಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು.

     ನಗರ ಪೊಲೀಸರು ಕೈಗೊಂಡಿರುವ ಹಲವು ಕ್ರಮಗಳಿಂದ ಬೆಂಗಳೂರು ಸುರಕ್ಷಿತ ನಗರವೆನಿಸಿದೆ. ಅದನ್ನು ಮತ್ತಷ್ಟು ತಂತ್ರಜ್ಞಾನವನ್ನು ಬಳಸಿ ಯಾವುದೇ ಕೋಮು ಗಲಭೆ ಸೃಷ್ಟಿಸುವುದನ್ನು ಹತ್ತಿಕ್ಕಿ ಉಗ್ರಗಾಮಿ ಚಟುವಟಿಕೆಗಳು ತಲೆ ಎತ್ತದಂತೆ ನೋಡಿಕೊಳ್ಳಲಾಗುವುದು ಎಂದು ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link