ಬೆಂಗಳೂರು
ಎಐಸಿಸಿ ಅಧ್ಯಕ್ಷರೇ ಬೇಲ್ ಮೇಲೆ ಹೊರಗಿದ್ದಾರೆ.ನ್ಯಾಷನಲ್ ಹೆರಾಲ್ಡ್ ಅನ್ನೇ ಲಪಟಾಯಿಸಿದ್ದಾರೆ. ಹೀಗಾಗಿ ನಿಮ್ಮ ಬಿಟ್ಟಿ ಉಪದೇಶ ನಮಗೆ ಬೇಕಿಲ್ಲ ಎಂದು ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ಇಂದಿಲ್ಲಿ ಸಚಿವ ಡಿಕೆಶಿಗೆ ಟಾಂಗ್ ನೀಡಿದ್ದಾರೆ.
ಸಚಿವ ಪುಟ್ಟರಂಗ ಶೆಟ್ಟಿ ಪಿಎ ಬಳಿ ಸಿಕ್ಕ ಹಣದ ಪ್ರಕರಣ ಸಂಬಂಧ ನಾವೇನು ಚೆಕ್ ಮೂಲಕ ಹಣ ಪಡೆದಿಲ್ಲ ಎಂದು ಯಡಿಯೂರಪ್ಪ ಅವರ ಬಗ್ಗೆ ಪರೋಕ್ಷವಾಗಿ ವ್ಯಂಗ್ಯವಾಡಿದ್ದ ಡಿಕೆಶಿಗೆ ಅವರು ಈ ಟಾಂಗ್ ನೀಡಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,ಚೆಕ್ ಮೂಲಕ ಹಣ ಪಡೆದು ಜೈಲಿಗೆ ಹೋಗಿ ಬಂದವರು ಎಂದು ಆರೋಪಿಸಿದ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಗರಂ ಆದ ಅವರು.ಬಹುಶಃ ರಾಹುಲ್ ಗಾಂಧಿ ಹಾಗು ಸೋನಿಯಾ ಗಾಂಧಿ ನ್ಯಾಷನಲ್ ಹೆರಾಲ್ಡ್ ಹಗರಣದಲ್ಲಿ ಚೆಕ್ ಮೂಲಕ ಹಣ ಪಡೆದಿದ್ದಲ್ಲ ಸಂಸ್ಥೆಯನ್ನೇ ಲಪಟಾಯಿಸಿದ್ದಾರೆ ಅದರ ಬಗ್ಗೆ ಡಿಕೆಶಿ ಪ್ರಸ್ತಾಪಿಸಿರಬೇಕು ಎಂದರು.
ನಮ್ಮ ಕುಟುಂಬದ ವಿರುದ್ಧ ಇರುವ ಆರೋಪಗಳ ಕುರಿತು ಜಗತ್ತು ಏನ ಬೇಕಾದರೂ ಅನುಮಾನ ಪಡಬಹುದು ಆದರೆ ಹಿಂದೆ ಸಿದ್ದರಾಮಯ್ಯ ಸರ್ಕಾರವೇ ಇತ್ತು ಅವರೇ ತನಿಖೆ ಮಾಡಿಸಿದ್ದಾರೆ,ಇನ್ನೂ ಕೂಡ ತನಿಖೆ ನಡೆಯುತ್ತಿದೆ ಇದಕ್ಕೆ ನಮಗೆ ಅಭ್ಯಂತರ ಇಲ್ಲ ,ಹಾಗಾಗಿ ಬೇರೆ ಯಾವುದೇ ಪ್ರಕರಣದೊಂದಿಗೆ ನಮ್ಮನ್ನು ಕಿಂಕ್ ಮಾಡುವ ಅಗತ್ಯ ಇಲ್ಲ, ನಮಗೂ ಅದಕ್ಕು ಸಂಬಂಧವಿಲ್ಲ,ಅವರದ್ದೇ ಹಗರಣ ಬೇಕಾದಷ್ಟಿದೆ, ಅವರದ್ದೇ ರಾಷ್ಟ್ರೀಯ ಅಧ್ಯಕ್ಷರು ಬೇಲ್ ಮೇಲಿದ್ದಾರೆ ಹಾಗಾಗಿ ಅವರು ಯಾವುದೇ ಬಿಟ್ಟಿ ಉಪದೇಶ ನಮಗ ಕೊಡಬೇಕಿಲ್ಲ ಅದರ ಅವಶ್ಯಕತೆಯೂ ನಮಗಿಲ್ಲ ಟೀಕಾಪ್ರಹಾರ ನಡೆಸಿದರು.
ಸಿಎಂ ಕುಮಾರಸ್ವಾಮಿ ಇದೀಗ ಯು ಟರ್ನ್ ಹೊಡೆದಿದ್ದಾರೆ,ಹಿಂದೆ ತಯುಲ ಬೆಲೆ ಹೆಚ್ಚಾದಾಗ ಮೋದಿ ವಿರುದ್ಧ ಇವರೇ ಪ್ರತಿಭಟನೆ ಮಾಡಿದ್ದರು ಭಾರತ್ ಬಂದ್ ಮಾಡಿದ್ದರು ಆದರೆ ಇದೀಗ ತೈಲದ ತೆರಿಗೆ ಹೆಚ್ಚಳ ಮಾಡಿದ್ದು ಏಕೆ? ರಾಜ್ಯ ಸರ್ಕಾರದ ಈ ನಿಲುವು ವಿರೋಧಿಸಿ ನಾಳೆ ರಾಜ್ಯಾಧ್ಯಂತ ಹೋರಾಟ ನಡೆಸಿ ತೈಲದ ಮೇಕಿನ ತೆರಿಗೆ ಎರಿಕೆ ಹಿಂಪಡೆಯುವಂತೆ ಆಗ್ರಹಿಸಲಾಗುತ್ತದೆ ಎಂದರು.
ಚುನಾವಣೆ ವೇಳೆ ಕುಮಾರಸ್ವಾಮಿ ಪೊಳ್ಳು ಭರವಸೆ ನೀಡಿದ್ದರು ಅದನ್ನು ಈಡೇರಿಸಲು ಸಾಧ್ಯವಾಗದೆ ಜನರ ಮೇಲೆ ಬರೆ ಎಳೆಯುತ್ತಿದ್ದಾರೆ .
ರಾಜ್ಯದ ಆರ್ಥಿಕ ಪರಿಸ್ಥಿರಿ ಹದಗೆಟ್ಡಿದೆ ಕೂಡಲೇ ಈ ಬಗ್ಗೆ ಶ್ವೇತ ಪತ್ರ ಹೊರಡಿಸಬೇಕು,ಹಿಂದೆ ಸಮ್ಮಿಶ್ರ ಸರ್ಕಾರದ ವೇಳೆ ಧರಂ ಸಿಂಗ್ ಸಿಎಂ ಆದಾಗ ಸರ್ಕಾರದ ಆಗುಹೋಗುಗಳ ಕುರಿತು,ಜನರ ಸಮಸ್ಯೆಗಳ ಕುರುತು ಪ್ರತಿ ತಿಂಗಳು ಪತ್ರ ಬರೆದು ಎಚ್ಚರಿಕೆ ನೀಡುತ್ತಿದ್ದ ದೇವೇಗೌಡರು ಈಗ ಸರ್ಕಾರ ರಚನೆಯಾಗಿ 7 ತಿಂಗಳಾದರೂ ಸುಮ್ಮನೆ ಕುಳಿತಿದ್ದಾರೆ.ಈಗಲಾದರೂ ಒಂದು ಪತ್ರ ಬರೆದು ಜನರ ಮೇಲೆ ಬರೆ ಹಾಕುತ್ತಿರುವ ಕುರಿತು ಎಚ್ಚರಿಕೆ ನೀಡುವಂತೆ ಮನವಿ ಮಾಡಿದರು.
ರೈತರ ಸಾಲಮನ್ನಾ ವಿಚಾರದಲ್ಲಿ ಗೊಂದಲವಿದೆ, ಸರ್ಕಾರ ರಚನೆಯಾಗಿ 6 ತಿಂಗಳು ಕಳೆದರೂ ಯುವಕರಿಗೆ ಉದ್ಯೋಗ ಸೃಷ್ಟಿಯಾಗಿಲ್ಲ.ಸರ್ಕಾರದಲ್ಲಿ ಉದ್ಯೋಗ ಸೃಷ್ಟಿ ಸಲುವಾಗಿ ಹೈ ಲೇವಲ್ ಕಮಿಟಿ ಸಭೆ ಆಗಿಲ್ಲ.ರಾಜ್ಯದ ಆಡಳಿತವೇ ಕುಸಿದು ಹೋಗಿದೆ.ರೇವಣ್ಣ ಮತ್ತು ದಿನೇಶ್ ಗುಂಡೂರಾವ್ ಪರಸ್ಪರ ಹೇಳಿಕೆ ನೋಡಿದರೆ ಸರ್ಕಾರದ ವರ್ತನೆ ಗೊತ್ತಾಗುತ್ತದೆ.
ಸಚಿವ ಪುಟ್ಟರಂಗ ಶೆಟ್ಟಿ
ಪ್ರಕರಣದಲ್ಲಿ ಗುಂಡೂರಾವ್ ನೀಡಿದ ಹೇಳಿಕೆ ಅಧಿಕಾರ ನೆತ್ತಿಗೆ ಏರಿದ ಹೇಳಿಕೆಯಾಗಿದೆ. ಕಾಂಗ್ರೆಸ್ ನಲ್ಲಿ ಅಧಿಕಾರದ ಧರ್ಪ ಹೇಗಿದೆ ಅನ್ನೋದಕ್ಕೆ ಗುಂಡೂರಾವ್ ಹೇಳಿಕೆ ಸಾಕ್ಷಿ ಎಂದರು.
ತಕ್ಷಣ ಸಿಎಂ ಕುಮಾರಸ್ವಾಮಿ ಸಚಿವ ಪುಟ್ಟರಂಗ ಶೆಟ್ಟಿ ರಾಜೀನಾಮೆ ಪಡೆಯಬೇಕು.ಪುಟ್ಟರಂಗಶೆಟ್ಟಿಯವರ ಅಕ್ರಮ ಹಣ ಜಪ್ತಿ ಪ್ರಕರಣದಲ್ಲಿ ಸಿಕ್ಕಿರೋದು ಕೇವಲ ಅಡ್ವಾನ್ಸ್ ಮಾತ್ರ ಇರಬೇಕು ಇನ್ನೂ ಪೂರ್ಣ ಹಣ ಎಷ್ಟು ಕೋಟಿ ಇದೆಯೋ ಯಾರಿಗೆ ಗೊತ್ತು,ಹಣ ಎಷ್ಟಾದರೂ ಲಂಚ ಲಂಚವೇ, ಲಂಚ ಪಡೆದು ಪುಟ್ಟರಂಗಶೆಟ್ಟಿ ಹಿಂದುಳಿದ ವರ್ಗಗಳಿಗೆ ಅವಮಾನ ಮಾಡಿದ್ದಾರೆ ಅಲ್ಲದೆ ಈಗ ಈ ಪ್ರಕರಣ ಎಸಿಬಿ ಕೊಟ್ಟಿದ್ದಾರೆ.ತಮಗೆ ಬೇಕಾದವರ ರಕ್ಷಣೆಗೆ ಇರುವ ಸಂಸ್ಥೆ ಎಸಿಬಿ ಸಿದ್ದರಾಮಯ್ಯ ಸರ್ಕಾರ ತಮ್ಮವರ ರಕ್ಷಣೆಗೆ ಈ ಸಂಸ್ಥೆಯನ್ನು ಹುಟ್ಟು ಹಾಕಿತ್ತು ಈಗ ಸಮ್ಮಿಶ್ರ ಸರ್ಕಾರದಲ್ಲೂ ಅದನ್ನು ಮಂದುವರೆಸಿದ್ದಾರೆ ಎಂದು ಆರೋಪಿಸಿದರು.
ಹಾಗಾಗಿ ಈ ಎಸಿಬಿ ತನಿಖೆಯಿಂದ ಏನೂ ಪ್ರಯೋಜನವಿಲ್ಲ.ಮೇಲ್ನೋಟಕ್ಕೆ ಪ್ರಕರಣ ಸಾಬೀತಾಗಿದೆ.ಹಾಗಾಗಿ ಸಿಎಂ ಹೆಚ್ಡಿಕೆ ಪುಟ್ಟರಂಗಶೆಟ್ಟಿಯವರ ರಾಜೀನಾಮೆ ಪಡೆಯಬೇಕು ಇಲ್ಲದಿದ್ದಲ್ಲಿ ರಾಜೀನಾಮೆವರೆಗೂ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಾನುಬಟಿಕೆಟ್ ಆಕಾಂಕ್ಷಿಯಲ್ಲ, ನಾನು ಸ್ಪರ್ಧಿಸುವುದಿಲ್ಲ.ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡುತ್ತೇವೆ.ಈಗಾಗಲೇ ಯುವ ಮೋರ್ಚಾ ರಾಜ್ಯಾಧ್ಯಕ್ಷ ಪ್ರತಾಪ್ ಸಿಂಹ,ನಳೀನ್ ಕುಮಾರ್ ಕಟೀಲ್ ಸೇರಿದಂತೆ ಹಲವು ಯುವಕರು ಹಾಲಿ ಸಂಸದರಾಗಿದ್ದಾರೆ. ಬಹುತೇಕರು ಮತ್ತೆ ಸ್ಪರ್ಧಿಸುತ್ತಾರೆ.ಯುವ ಮೋರ್ಚಾಗೆ ಎಷ್ಟು ಸ್ಥಾನಗಳನ್ಮು ನೀಡಬೇಕು ಎಂಬುದನ್ನು ನಮ್ಮ ರಾಷ್ಟ್ರೀಯ ವರಿಷ್ಟರು ನಿರ್ಧರಿಸುತ್ತಾರೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ