ಚೆಕ್ ಪಡೆದ 25 ಮಂದಿಯಲ್ಲಿ ನಮಗೆ ಏಕೆ ಶಿಕ್ಷೆ

ಹುಳಿಯಾರು:

      ಹುಳಿಯಾರು ಗ್ರಾಪಂನಲ್ಲಿ ಸದಸ್ಯರು, ನೌಕರರು ಸೇರಿದಂತೆ ಬರೋಬ್ಬರಿ 25 ಮಂದಿ ತಮ್ಮ ಹೆಸರಿಗೆ ಚೆಕ್ ಪಡೆದಿದ್ದಾರೆ. ತನಿಖೆಯಲ್ಲಿ ಇದು ಸಾಬೀತಾಗಿ ನೋಟಿಸ್ ಸಹ ಜಾರಿಯಾಗಿತ್ತು. ಆದರೆ ಇವರಲ್ಲಿ ನಮಗೆ ಮಾತ್ರ ಸದಸ್ಯತ್ವ ರದ್ದು ಶಿಕ್ಷೆ ಏಕೆ ಎಂದು ಗ್ರಾಪಂ ಅಧ್ಯಕ್ಷೆ ಗೀತಾಪ್ರದೀಪ್ ಪ್ರಶ್ನಿಸಿದ್ದಾರೆ.

       ನಾನು ಎಸ್‍ಎಸ್‍ಎಲ್‍ಸಿ ಮಾತ್ರ ಓದಿದ್ದೇನೆ. ಮೊದಲ ಬಾರಿ ಗ್ರಾಪಂ ಪ್ರವೇಶ ಮಾಡಿದ್ದೇನೆ. ಹಾಗಾಗಿ ನನಗೆ ಗ್ರಾಪಂ ನಿಯಮಾವಳಿ ಸರಿಯಾಗಿ ಗೊತ್ತಿರಲಿಲ್ಲ. ಪಿಡಿಓ ಅವರಿಗೆ ತರಬೇತಿಯಿದ್ದು ಸರಿತಪ್ಪು ತಿಳಿದಿರುತ್ತಾರೆ. ಹಾಗಾಗಿ ಅವರು ಹೇಳುವುದು ಸರಿ ಎಂದು ಭಾವಿಸಿ ಚೆಕ್‍ಗಳಿಗೆ ಸಹಿ ಹಾಕಿ ಕೊಟ್ಟಿದ್ದೇನೆ. ಅದೂ ಚೆಕ್ ಮೇಲೆ ಸದಸ್ಯರೆಂದು ಬರೆದಿಲ್ಲವಾದ್ದರಿಂದ ಅದೇ ಹೆಸರಿನ ಮತ್ಯಾರೋ ಎಂದು ಭಾವಿಸಿ ಸಹಿ ಹಾಕಿದ್ದೇನೆ.

       ಅಲ್ಲದೆ 14 ನೇ ಹಣಕಾಸು ಯೋಜನೆಯಲ್ಲಿ ಕ್ರಿಯಾ ಯೋಜನೆ ಅನುಮೋದನೆ ಪಡೆದು, ಕೊಟೇಷನ್, ಬಿಲ್ ಪಡೆದು ಸಾಮಗ್ರಿಗಳನ್ನು ಖರೀಧಿಸಿದ್ದೇನೆ. ಅದೂ ಕೂಡ ಪಿಡಿಓ ಅವರ ಮಾರ್ಗಸೂಚಿಯಂತೆ ನಡೆದುಕೊಂಡಿದ್ದೇನೆ. ನಾನು ನಿರ್ಧೋಷಿಯಾಗಿದ್ದು ಉದ್ದೇಶಪೂರ್ವಕವಾಗಿಯೇ ನನ್ನ ಅಮಯಾಕತೆಯನ್ನು ಬಳಸಿ ಈ ಪ್ರಕರಣದಲ್ಲಿ ಸಿಲುಕಿಸಿದ್ದಾರೆ.

       ನಾನು ಮಾಡಿರುವುದು ತಪ್ಪು ಎಂತ್ತಾದರೆ ಈ ತಪ್ಪಿನಲ್ಲಿ ಪಾಲುದಾರರಾದ ಪಿಡಿಓಗೂ ಶಿಕ್ಷೆ ಆಗಬೇಕು. ಬೆಕ್ ಮೂಲಕ ಹಣ ಪಡೆದ ಇತರೆ ಸದಸ್ಯರು, ನೌಕರರಿಗೂ ಶಿಕ್ಷೆಯಾಗಬೇಕು. ಆದರೆ ಅವರಾರಿಗೂ ಶಿಕ್ಷೆ ನೀಡದೆ ನಮಗೆ ಮಾತ್ರ ನೀಡಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದ್ದು ಈ ಬಗ್ಗೆ ನ್ಯಾಯಾಲಯದ ಮೊರೆ ಹೋಗುತ್ತೇನೆ.

ಕೆಲಸ ಮಾಡಿ ಚೆಕ್ ಪಡೆದಿದ್ದೇನೆ

        ನಾನು ಕೆಲಸ ಮಾಡದೆ ದುಡ್ಡು ಹೊಡೆದುಕೊಂಡು ತಿಂದಿಲ್ಲ. ಕೆಲಸ ಮಾಡಿ ದುಡ್ಡು ಪಡೆದಿದ್ದೇನೆ. ಆದರೆ ಸದಸ್ಯರು ಕೆಲಸ ಮಾಡಬಾರದು, ಹಣ ಪಡೆಯಬಾರದೆಂದು ಗೊತ್ತಿರಲಿಲ್ಲ. ನಮ್ಮ ಬ್ಲಾಕ್‍ನಲ್ಲಿ ಮೋಟರ್ ಸುಟ್ಟಿ ನೀರಿನ ಸಮಸ್ಯೆ ಸೃಷ್ಠಿಯಾಗಿತ್ತು. ಕಾರ್ಯದರ್ಶಿ ಗಮನಕ್ಕೆ ತಂದಾಗ ನೀವೆ ಸರಿ ಮಾಡಿಸಿ ಬಿಲ್ ಕೊಡಿ ಕೊಡ್ತಿವಿ ಎಂದರು.

       ಅದರಂತೆ ಮೋಟರ್ ಸರಿ ಮಾಡಿಸಿ ರಿಪೇರಿ ಮಾಡಿದವರ ಬಿಲ್ ಕೊಟ್ಟಿದ್ದೆ. ಆದರೆ ಅವರ ಹೆಸರಿಗೆ ಚೆಕ್ ಕೊಡದೆ ನನ್ನ ಹೆಸರಿಗೆ ಕೊಟ್ಟರು. ನಾನು ಚೆಕ್ ಪಡೆದು ಅದರಿಂದ ಹಣ ಬಿಡಿಸಿ ರಿಪೇರಿ ಮಾಡಿದವರಿಗೆ ಪಾವತಿಸಿದ್ದೇನೆ. ಇದರಲ್ಲಿ ಪಂಚಾಯ್ತಿ ಅಧಿಕಾರಿಗಳದ್ದೇ ತಪ್ಪು ವಿನಃ ನಮ್ಮದೇನೋ ತಪ್ಪಿಲ್ಲ. ಇಂದಿರಾಕಲಾ, ಸದಸ್ಯತ್ವ ರದ್ದಾಗಿರುವ ಸದಸ್ಯೆ, ಹುಳಿಯಾರು

ಉದ್ದೇಶಪೂರ್ವಕವಾಗಿ ಸಿಲುಕಿಸಿದ್ದಾರೆ

        ನಾನು ಓದಿಲ್ಲ ಬರೆದಿಲ್ಲ. ನೀರಿನ ಸಮಸ್ಯೆ ಎಂದು ಪಿಡಿಓಗೆ ಹೇಳಿದಾಗ ಕಾಮಗಾರಿ ಮಾಡಿಸುವಂತೆ ಸೂಚಿಸಿದರು. ಅದರಂತೆ ಪೈಪ್ ಲೈನ್ ಕಾಮಗಾರಿ ಮಾಡಿದ್ದೇನೆ. ಚೆಕ್ ಮೂಲಕ ಅದರ ಬಾಬ್ತು ಕೊಟ್ಟರು. ಅದನ್ನು ಪಡೆದು ಅಂಗಡಿಯವರಿಗೆ, ಕಾರ್ಮಿಕರಿಗೆ ಕೊಟ್ಟಿದ್ದೇನೆ ಅಷ್ಟೆ.

       ನನ್ನಂತೆ ಇನ್ನೂ ಅನೇಕ ಮಂದಿ ಕಾಮಗಾರಿ ಮಾಡಿ ಹಣ ಪಡೆದಿದ್ದಾರೆ. ನನಗಿಂತಲೂ ಹೆಚ್ಚು ಹಣ ಎರಡ್ಮೂರು ಬಾರಿ ಪಡೆದಿದ್ದಾರೆ. ಆದರೆ ಅವರೆಲ್ಲರಿಗೂ ಬಿಟ್ಟು ನಮ್ಮ ಸದಸ್ಯತ್ವ ಮಾತ್ರ ರದ್ದು ಮಾಡಿರುವುದು ಸರಿಯಾದ ಕ್ರಮವಲ್ಲ.

       ದುಡ್ಡು ಪಡೆದ ಎಲ್ಲರ ಸದಸ್ಯತ್ವ ರದ್ದಾಗಿದ್ದರೆ ಕಾನೂನು ಪ್ರಕಾರ ಚೆಕ್ ಪಡೆದಿರುವುದು ತಪ್ಪು ಎನ್ನಬಹುದು. ಆದರೆ ಕೆಲವರನ್ನು ಬಿಟ್ಟು ನಾನು ಸೇರಿ 5 ಮಂದಿಯ ವಿರುದ್ಧ ಮಾತ್ರ ಕ್ರಮ ಜರುಗಿಸಿರುವುದು ದುರುದ್ಧೇಶವವಲ್ಲದೆ ಮತ್ತೇನೂ ಅಲ್ಲ
ನೂರ್ ಜಾನ್, ಸದಸ್ಯತ್ವ ರದ್ದಾಗಿರುವ ಸದಸ್ಯೆ, ಹುಳಿಯಾರು

ಪಂಚಾಯ್ತಿ ಹಣ ಕದ್ದಿಲ್ಲ

         ನಾವು ಪಂಚಾಯಿತಿ ಹಣ ಕದ್ದಿಲ್ಲ. ಪ್ರಾಮಾಣಿಕವಾಗಿ ಕೆಲಸ ಮಾಡಿ ಹಣ ಪಡೆದಿದ್ದೇವೆ. ಈ ಸಂಬಂಧ ಕಾಮಗಾರಿಯ ವಿವಿಧ ಹಂತದ ಪೋಟೋಗಳೂ ಸಹ ನಮ್ಮ ಬಳಿ ಇದೆ. ಆದರೆ ಹಣ ಕದ್ದಿರುವವರಂತೆ ಸದಸ್ಯತ್ವ ರದ್ಧು ಮಾಡಿರುವುದು ಸರಿಯಲ್ಲ.

           ನಾವು ಮಾಡಿರುವ ಕಾಮಗಾರಿಯನ್ನು ಎಂಜಿನಿಯರ್ ನೋಡಿದ್ದಾರೆ. ಅವರ ಹೇಳಿದ ಮೇಲೆ ನಮಗೆ ಚೆಕ್ ಕೊಟ್ಟಿದ್ದಾರೆ. ನಾವು ಚೆಕ್ ಪಡೆದಿರುವುದು ಕೇವಲ 4 ಸಾವಿರ ರೂ. ಆದರೆ ಐವತ್ತು ಸಾವಿರಕ್ಕೂ ಹೆಚ್ಚು ಹಣ ಪಡೆದ ಸದಸ್ಯರು, ನೌಕರರು ಇದ್ದಾರೆ. ಅವರಿಗೆ ಇಲ್ಲದ ಶಿಕ್ಷೆ ನಮಗೇಕೆ.
 

        ವಿಚಾರಣೆ ಸಂದರ್ಭದಲ್ಲಿ ಇತರರನ್ನೂ ಏಕೆ ಕರೆದಿಲ್ಲ. ಅವರೂ ಸಹ ಚೆಕ್ ಮೂಲಕ ಹಣ ಪಡೆದಿರುವುದು ನಮ್ಮಂತೆ ತನಿಖೆಯಲ್ಲಿ ಸಾಬೀತಾಗಿದೆ ಎಂದಾಗ. ನಿಮ್ಮದಾದ ನಂತರ ಅವರನ್ನೂ ಕರೆಸುತ್ತೇವೆ ಎಂದವರು ಈಗ ಏಕಾಏಕಿ ಅವರನ್ನು ಕರೆಸದೆ ನಮಗೆ ಶಿಕ್ಷೆ ಕೊಟ್ಟಿದ್ದಾರೆ.ಪುಟ್ಟಿಬಾಯಿ, ಸದಸ್ಯತ್ವ ರದ್ದಾಗಿರುವ ಸದಸ್ಯೆ, ಹುಳಿಯಾರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link