ಕ್ರೀಡಾ ಪಟುಗಳಿಗೆ ಸಹಕಾರ ನೀಡಲು ಕೇಂದ್ರ ಸರ್ಕಾರ ಸಿದ್ದವಿದೆ: ಡಿ ವಿ ಸದಾನಂದಗೌಡ

ಬೆಂಗಳೂರು

    ಭಾರತದ ಕ್ರೀಡಾಪಟುಗಳು ಒಲಿಂಪಿಕ್ ಸಹಿತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಕೇಂದ್ರ ಸರಕಾರ ಎಲ್ಲಾ ರೀತಿಯ ಅಗತ್ಯ ನೆರವು ನೀಡಲಿದೆ ಎಂದು ಕೇಂದ್ರ ರಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ದಾರೆ. ಹೆಬ್ಬಾಳದ ಎಸ್ಟೀಮ್ ಮಾಲ್‍ನಲ್ಲಿ ಅಂತಾರಾಷ್ಟ್ರೀಯ ದರ್ಜೆಯ ಪ್ರಕಾಶ್ ನಂಜಪ್ಪ ಶೂಟಿಂಗ್ ಅಕಾಡೆಮಿ ಉದ್ಘಾಟಿಸಿ ಮಾತನಾಡಿದ ಅವರು ಕ್ರೀಡಾ ಕ್ಷೇತ್ರದಲ್ಲಿ ಭಾರತ ಹೆಚ್ಚಿನ ಸಾಧನೆ ಮಾಡುವ ಅಗತ್ಯವಿದ್ದು ಈ ಹಿನ್ನಲೆಯಲ್ಲಿ ಯುವ ಕ್ರೀಡಾ ಪಟುಗಳಿಗೆ ಸೂಕ್ತ ತರಬೇತಿ ಸಹಿತ ಎಲ್ಲಾರೀತಿಯ ಅಗತ್ಯ ನೆರವು ನೀಡಲು ಕೇಂದ್ರ ಸರ್ಕಾರ ಸಿದ್ದವಿದೆ ಎಂದರು.

     ಅರ್ಜುನ್ ಪ್ರಶಸ್ತಿ ವಿಜೇತ ಕನ್ನಡಿಗ ಪ್ರಕಾಶ್ ನಂಜಪ್ಪ ಅವರು ಆರಂಭಿಸಿದ ಅಂತಾರಾಷ್ಟ್ರೀಯ ದರ್ಜೆಯ ಶೂಟಿಂಗ್ ಅಕಾಡೆಮಿಯಿಂದ ರಾಜ್ಯದ ಪ್ರತಿಭಾನ್ವಿತ ಕ್ರೀಡಾ ಪಟುಗಳು ಶೂಟಿಂಗ್ ಕ್ರೀಡಾ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಲು ಅನುಕೂಲವಾಗುತ್ತದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ವಿಶ್ವಾಸ ವ್ಯಕ್ತಪಡಿಸಿದರು.

ಪ್ರಕಾಶ್ ನಂಜಪ್ಪ ಶೂಟಿಂಗ್ ಅಕಾಡೆಮಿ ಆರಂಭಿಸಿರುವ ಪ್ರಕಾಶ್ ನಂಜಪ್ಪ ಮಾತನಾಡಿ ರಾಜ್ಯದ ಪ್ರತಿಭಾವಂತ ಕ್ರೀಡಾ ಪಟುಗಳಿಗೆ ಶೂಟಿಂಗ್ ಕ್ರೀಡಾ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ತರಬೇತಿ ನೀಡುವ ಉದ್ದೇಶದಿಂದ ಶೂಟಿಂಗ್ ಅಕಾಡೆಮಿ ಆರಂಭಿಲಾಗಿದೆ. ಈ ಅಕಾಡೆಮಿಯಲ್ಲಿ ಯುವ ಕ್ರೀಡಾಪಟುಗಳಿಗೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಶೂಟಿಂಗ್ ಕ್ರೀಡಾ ಸ್ಪರ್ಧೆಗಳಲ್ಲಿ ಪದಕ ಪಡೆಯುವ ರೀತಿಯಲ್ಲಿ ಅತ್ಯಾಧುನಿಕ ರೀತಿಯಲ್ಲಿ ತರಬೇತಿ ನೀಡಲಾಗುತ್ತದೆ ಎಂದರು.

ಯೋಗ, ಪ್ರಾಣಾಯಾಮ, ದೈಹಿಕ ಕಸರತು, ಸ್ಪೋಟ್ರ್ಸ್ ಮಸಾಜ್, ಸ್ಪೋಟ್ರ್ಸ್ ತೆರೆಪಿ ಹಾಗೂ ಆಹಾರ ಕ್ರಮ ಸಹ ತರಬೇತಿಯ ಭಾಗವಾಗಿರುತ್ತದೆ. ಹದಿಮೂರು ವರ್ಷ ತುಂಬಿದ ಉತ್ತಮ ದೈಹಿಕ ಸಾಮಥ್ರ್ಯ ಹೊಂದಿದವರು ಶೂಟಿಂಗ್ ತರಬೇತಿಗೆ ಸೇರಿಕೋಳ್ಳ ಬಹುದಾಗಿದೆ ಎಂದು ಹೇಳಿದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣಬೈರೇಗೌಡ, ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಮಲ್ಲೇಶ್ವರಂ ಶಾಸಕ ಡಾ ಅಶ್ವತ್ವ್ ನಾರಾಯಣ, ಕೇಂದ್ರ ವಲಯ ಐಜಿಪಿ ಶರತ್ ಚಂದ್ರ ಅರ್ಜುನ್ ಪ್ರಶಸ್ತಿ ವಿಜೇತ ಅಂತಾರಾಷ್ಟ್ರೀಯ ಶೂಟಿಂಗ್ ಕ್ರೀಡಾಪಟು ಪ್ರಕಾಶ್ ನಂಜಪ್ಪ, ನಿವೃತ್ತ ಪೊಲಿಸ್ ಅಧಿಕಾರಿ ಕೆ.ವಿ.ಆರ್ ಟ್ಯಾಗೋರ್, ಶಿಕ್ಷಣ ತಜ್ಞ ಡಾ.ಪಿ.ಕೆ. ಗೋವಿಂದ, ಶೂಟಿಂಗ್ ತರಬೇತುದಾರ ಪಿ.ಎನ್.ಪಾಪಣ್ಣ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap