ಜಿಮ್ , ಸ್ವಿಮ್ಮಿಂಗ್ ಪೂಲ್ ಗಳನ್ನು ತೆರೆಯಲು ಸರ್ಕಾರ ಸಿದ್ದವಿದೆ: ಸಿಟಿ ರವಿ

ಬೆಂಗಳೂರು

       ಜಿಮ್ ಗಳು ಹಾಗೂ ಸ್ವಿಮ್ಮಿಂಗ್ ಪೂಲ್ ಗಳನ್ನು ತೆರೆಯಲು ರಾಜ್ಯ ಸರ್ಕಾರ ಸಿದ್ಧವಿದೆ ಕೇಂದ್ರ ಸರ್ಕಾರ ಅನುಮತಿಯನ್ನು ಎದುರುನೋಡು ತ್ತಿರುವುದಾಗಿ ಪ್ರವಾಸೋದ್ಯಮ ಸಚಿವ ಸಿಟಿ ರವಿ ಹೇಳಿದ್ದಾರೆ.

     ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಡೆಸಿದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಮ್ ಗಳು, ಸ್ವಿಮ್ಮಿಂಗ್ ಪೂಲ್ ಗಳನ್ನು ತೆರೆಯಲು ರಾಜ್ಯ ಸರ್ಕಾರ ಸಿದ್ಧವಿದೆ ಆದರೆ ಕೇಂದ್ರ ಸರ್ಕಾರ ಇನ್ನೂ ಅನುಮತಿಯನ್ನು ಕೊಟ್ಟಿಲ್ಲ ಕೇಂದ್ರ ಹೊಸ 7 ಮಾರ್ಗಸೂಚಿಯಲ್ಲಿ ಅನುಮತಿ ಕೊಟ್ಟರೆ ನಮ್ಮ ರಾಜ್ಯ ಅವುಗಳನ್ನು ತೆರೆಯಲು ಸಿದ್ಧವಿದೆ ಎಂದು ಅವರು ತಿಳಿಸಿದರು.ಇಂದು ಪ್ರವಾಸೋದ್ಯಮ ಇಲಾಖೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಸಂಬಂಧಪಟ್ಟಂತೆ ಚರ್ಚೆ ನಡೆಯಿತು ಇಲಾಖೆಗಳಿಗೆ

      ಅಗತ್ಯವಿರುವ ಅನುದಾನದ ಬಗ್ಗೆ ಚರ್ಚೆ ನಡೆಸಲಾಯಿತು. ಈ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿದೆ ಇದರಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆಯೂ ಎಂದು, ಚರ್ಚೆ ನಡೆಸಲಾಯಿತು ಕ್ರೀಡಾಪಟುಗಳಿಗೆ ಘೋಷಿಸಲಾಗಿರುವ ಪೆÇ್ರೀತ್ಸಾಹ ಧನ ನೀಡಲು ಸಾಧ್ಯವಾಗಿಲ್ಲ ಅದಕ್ಕೆ ಬೇಕಾದ ಹಣ ಬಿಡುಗಡೆ ಮಾಡುವಂತೆ ಸಿಎಂ ಸೂಚಿಸಿದ್ದಾರೆ ಇಲಾಖೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡುವುದಾಗಿ ಸಿಎಂ ಹೇಳಿದ್ದಾರೆ ಎಂದರು.

      ಈ ಹಿಂದೆ ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಾರ್ತಾ ಇಲಾಖೆ ಒಂದೇ ಸಚಿವಾಲಯದ ಅಡಿಯಲ್ಲಿ ಬರುತ್ತಿದ್ದವು ಹಾಗಾಗಿ ಮತ್ತೆ ಅದೇ ರೀತಿ ಇಲಾಖೆಗಳನ್ನು ವಿಲಿನ ಗೊಳಿಸುವಂತೆ ಮತ್ತೊಮ್ಮೆ ಪ್ರಸ್ತಾಪ ಮಾಡಿದ್ದಾರೆ ಈ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಸಿಎಂ ಭರವಸೆ ನೀಡಿದ್ದಾರೆ ಎಂದರು.

      79 ಎ 79 ಬಿ ವಿಚಾರ ಒಂದು ಚರ್ಚೆಯ ವಿಷಯವಾಗಿದೆ, ಕೆ.ಸಿ ಕೊಂಡಯ್ಯ ಸೇರಿದಂತೆ ಕೆಲವು ಕಾಂಗ್ರೆಸ್ ನವರು ಇದನ್ನು ಸ್ವಾಗತಿಸಿದ್ದಾರೆ ಈ ಹಿಂದೆಯೂ ಕೂಡ ಕೃಷಿ ಭೂಮಿಯನ್ನು ಖರೀದಿಸುತ್ತಿದ್ದಾರೆ ನೀರಾವರಿ ಭೂಮಿಯನ್ನು ರೈತರ ಹೆಸರಿನಲ್ಲಿ ಖರೀದಿಸಿ ನಂತರ ಪರಿವರ್ತನೆ ಮಾಡಿ ಕಂಪನಿಗಳಿಗೆ ಮಾರಾಟ ಮಾಡುತ್ತಿದ್ದರು ಮಧ್ಯವರ್ತಿಗಳಿಗೆ ಲಾಭವಾಗುತ್ತಿತ್ತು ಈಗ ಅದು ತಪ್ಪಿದೆ ಎಂದು ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯನ್ನು ಸಮರ್ಥಿಸಿಕೊಂಡರು.

      ಈ ಹಿಂದೆ ಇದ್ದ ಕಾನೂನು ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಟ್ಟಿತ್ತು ತಹಸಿಲ್ದಾರ್, ಉಪವಿಭಾಗಾಧಿಕಾರಿ ಆಗಿ. ಬರಲು ಪೈಪೆÇೀಟಿ ನಡೆಸುತ್ತಿದ್ದಾರೆ ಯಾಕೆಂದರೆ 79ಎ ಮತ್ತು 79 ಬಿ ಕಲಂ ಕೂಡ ಅವರಿಗೆ ಒಂದು ಆದಾಯದ ಮೂಲವಾಗಿತ್ತು ಈಗ ಕೆಲಸದವರ ವೈಯಕ್ತಿಕ ಲಾಭದ ಮೂಲವನ್ನೇ ಸರ್ಕಾರ ಈಗ ಕಾನೂನು ತಿದ್ದುಪಡಿಯಿಂದ ಕಡ್ ಮಾಡಿದೆ ಈಗ ರೈತರು ಮತ್ತು ಖರೀದಿದಾರರ ನಡುವೆ ವ್ಯವಹಾರ ನಡೆಯುತ್ತಿದೆ ಇದರಿಂದ ರೈತರಿಗೆ ಹೆಚ್ಚಿನ ಲಾಭ ಸಿಗುತ್ತದೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap