ಪದವಿ ಕಾಲೇಜಿನ ಅಭಿವೃದ್ದಿಗೆ ಬದ್ದ :ಜಿ.ಎಂ.ಸಿದ್ದೇಶ್ವರ್

ಜಗಳೂರು :

     ಪದವಿ ಕಾಲೇಜಿನ ಅಭಿವೃದ್ದಿಗೆ ಬದ್ದವಾಗಿದ್ದು, ಶಾಸಕರೊಂದಿಗೆ ಚರ್ಚಿಸಿ ಅಭಿವೃದ್ದಿಗೆ ಕೈಜೋಡಿಸಲಾಗುವುದು ಎಂದು ಸಂಸದ ಜಿ.ಎಂ.ಸಿದ್ದೇಶ್ವರ್ ಹೇಳಿದರು.

      ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಶ್ರೀ ಜಿ.ಮಲ್ಲಿಕಾರ್ಜುನಪ್ಪ ಮತ್ತು ಶ್ರೀಮತಿ ಹಾಲಮ್ಮ ಚಾರಿಟಿ ಫೌಂಡೇಷನ್ (ರಿ) ಭೀಮಸಮುದ್ರ ಟ್ರಸ್ಟ್ ವತಿಯಿಂದ ಉಚಿತ ನೋಟ್‍ಪುಸ್ತಕ ಹಾಗೂ ಬ್ಯಾಗ್ ವಿತರಿಸಿ ಮಾತನಾಡಿದರು.

     ಪ್ರತೀ ವರ್ಷವೂ ತಾಲೂಕಿನಲ್ಲಿ ಮಳೆಯಾಗದೇ, ರೈತರು ಕಂಗಾಲಾಗುತ್ತಿದ್ದು, ಬಿತ್ತಿದ ಬೆಳೆಗಳು ರೈತರ ಕೈ ಸೇರುತ್ತಿಲ್ಲ, ಆದ್ದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದೃಷ್ಠಿಯಿಂದ ನೋಟ್ ಪುಸ್ತಕ ಹಾಗೂ ಬ್ಯಾಗ್ ವಿತರಿಸಲಾಗುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕಡುಬಡತನದಿಂದ ಚಹಾ ಮಾರುತ್ತಾ ಇಂದು ದೇಶದ ಪ್ರಧಾನಿಯಾಗಿದ್ದಾರೆ, ಅದೇ ರೀತಿ ನೀವು ಸಹ ಬಡತನವನ್ನು ಬದಿಗೊತ್ತಿ ವಿದ್ಯಾಭ್ಯಾಸಕ್ಕೆ ಹೆಚ್ಚು ಗಮನಹರಿಸಬೇಕು.

    ಪ್ರತೀ ವರ್ಷವೂ ಬಡವರಿಗೆ ಅನುಕೂಲವಾಗುವಂತೆ ಟ್ರಸ್ಟ್ ವತಿಯಿಂದ ವಿವಿಧ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದ್ದು, ತಾಲೂಕಿನಲ್ಲಿ ಮಳೆಯಾಗದೇ ರೈತರು ನಷ್ಟ ಅನುಭವಿಸುತ್ತಿದ್ದು, ಕುಡಿಯುವ ನೀರಿಗೂ ಸಹ ಪರದಾಡು ಸ್ಥಿತಿ ಉದ್ಬವಿಸಿದೆ. ತಾಲೂಕಿನಲ್ಲಿ ಬರವಿದ್ದರೂ ವಿದ್ಯಾಭ್ಯಾಸಕ್ಕೆ ಬರ ವಿಲ್ಲ, ಆದ್ದರಿಂದ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನಹರಿಸಿ, ಉನ್ನತ ಹುದ್ದೆಯನ್ನು ಪಡೆಯಬೇಕು.

    ಶಾಸಕ ಎಸ್.ವಿ.ರಾಮಚಂದ್ರ ಮಾತ ನಾಡಿ ನನ್ನ ಅವಧಿಯಲ್ಲಿ ಕಾಲೇಜು ನಿರ್ಮಾ ಣಕ್ಕೆ ನಿವೇಶನವನ್ನು ನೀಡಲಾಗಿತ್ತು, ಕಳೆದ 5 ವರ್ಷಗಳಿಂದಲೂ ವಿದ್ಯಾರ್ಥಿಗಳಿಗೆ ಮೂಲ ಭೂತ ಸೌಲಭ್ಯಗಳಾದ ಕುಡಿಯುವ ನೀರು ಸೇರಿದಂತೆ ಶೌಚಾಲಯ ವ್ಯವಸ್ಥೆಯನ್ನು ಸಹ ಮಾಡಿಲ್ಲ ಎಂದು ಆರೋಪಿಸಿದ ಅವರು ಕಾಲೇ ಜಿಗೆ ಬರಲು ವಿದ್ಯಾರ್ಥಿಗಳಿಗೆ ದೂರವಾಗುತ್ತಿದ್ದು, ಶೀಘ್ರವೇ ಪಟ್ಟಣದಲ್ಲಿ ಕೆಎಸ್‍ಆರ್‍ಟಿಸಿ ಟಿಪೋಗೆ ಚಾಲನೆ ನೀಡಲಿದ್ದು, ಕಾಲೇಜಿಗೆ ಬಸ್ ವ್ಯವಸ್ಥೆಯನ್ನು ಕಲ್ಪಿಸಿಲಾಗುವುದು ಎಂದು ಭರವಸೆ ನೀಡಿದರು.

    ಸನ್ಮಾನ ಸ್ವೀಕರಿಸಲಾರೆ:- ಸೌಲಭ್ಯ ಕಲ್ಪಿಸುವವರೆಗೂ ಸನ್ಮಾನ ಸ್ವೀಕರಿಸಲಾರೇ ಎಂದು ಶಾಸಕ ಎಸ್.ವಿ ರಾಮಮಂದ್ರ ಸನ್ಮಾನಕ್ಕೆ ತಂದಿದ್ದ ಹಾರ, ಶಾಲು ಹಣ್ಣಿನ ಬುಟ್ಟಿಯನ್ನು ಉಪನ್ಯಾಸಕರಿಗೆ ವಾಪಸ್ಸು ನೀಡಿದರು. ಕಳೆದ ಐದು ವರ್ಷಗಳಿಂದ ಈ ಕಾಲೇಜಿಗೆ ಕನಿಷ್ಠ ಕುಡಿಯುವ ನೀರು, ಶೌಚಾಲ ಯ ಕಲ್ಪಿಸದೆ ನಿರ್ಲಕ್ಷೆವಹಿಸಲಾಗಿದೆ. ಇದುವರೆಗೂ ಕಾಲೇಜು ಅಭಿವೃದ್ದಿಗೆ ಗ್ರಹಣ ಬಡಿದಿದ್ದು ಇದೀಗ ಮತ್ತೆ ನಾನು ಅಧಿಕಾರಕ್ಕೆ ಬಂದಿದ್ದು ಇನ್ನು ಒಂದು ವಾರದೊಳಗಾಗಿ ಬೋರ್‍ವೆಲ್ ಕೊರೆಸಿ ನೀರು ಕಲ್ಪಿಸಿ ನಂತರ ಸನ್ಮಾನ ಸ್ವೀಕರಿಸಲಾಗುವುದು ಎಂದರು. ಸಂಸದ ಜಿ.ಎಂ.ಸಿದ್ದೇಶ್ವರ್ ಅವರು ಪ್ರತೀ ವರ್ಷವೂ ಬಡವರ ಪರವಾಗಿ ಟ್ರಸ್ಟ್ ವತಿಯಿಂದ ಅನೇಕ ಕಾರ್ಯಕ್ರಮಗಳನ್ನು ಮಾಡುತ್ತಿದ್ದು, ಮುಂಬರುವ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿದ ರೀತಿಯಲ್ಲಿಯೇ ಅವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಬೇಕಾಗಿದೆ ಎಂದು ಹೇಳಿದರು.

      ಪ್ರಾಂಶುಪಾಲ ಬಸವರಾಜ್ ಸಂಸದ ಸಿದ್ದೇಶ್ವರ್ ಹಾಗೂ ಶಾಸಕ ಎಸ್.ವಿ.ರಾಮಚಂದ್ರ ಅವರಿಗೆ ಕಾಲೇಜಿಗೆ ಬೇಕಾದ ಹೆಚ್ಚುವರಿ ಕೊಠಡಿ, ಕುಡಿಯುವ ನೀರು, ಶೌಚಾಲಯ ಕಲ್ಪಿಸುವಂತೆ ಮನವಿಯನ್ನು ಸಲ್ಲಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಎಸ್.ವಿ.ರಾಮಚಂದ್ರ ಶೀಘ್ರವೇ ಕುಡಿಯು ವ ನೀರಿನ ವ್ಯವಸ್ಥೆಗೆ ಬೋರ್ ಕೊರೆಸಲಾಗುವುದು ಎಂದು ಭರವಸೆ ನೀಡಿದರು.

      ಈ ಸಂದರ್ಭದಲ್ಲಿ ಚಾರಿಟೇಬಲ್ ಟ್ರಸ್ಟ್ ಸಂಚಾಲಕ ಗೋ. ರುದ್ರಯ್ಯ, ಪಟ್ಟಣ ಪಂಚಾ ಯ್ತಿ ಸದಸ್ಯರಾದ ಪಾಪಲಿಂಗ, ಸಿದ್ದೇಶ್, ದೇವರಾಜ್,ಮುಖಂಡರಾದ ಯು.ಜಿ. ಶಿವಕುಮಾರ್ ಕುರಡಿ, ಸೋಮಹಳ್ಳಿ ಶ್ರೀನಿವಾಸ್, ಸೂರಡ್ಡಿಹಳ್ಳಿ ಶರಣಪ್ಪ, ಗೌರಿಪುರ ಶಿವಣ್ಣ, ಓಬಳೇಶ್, ಡಾ. ದೊಡ್ಡಮನಿ ಲೋಕರಾಜ, ಪ್ರೋ. ಲಾಲ್ ಸಿಂಗ್, ಶಾಂತವಿರಪ್ಪ, ವಿದ್ಯಾಶ್ರೀ, ಕರುಣಾಕರ, ಮಲ್ಲಕಾರ್ಜುನ ಕಪ್ಪಿ ಸೇರಿದಂತೆ ಮತ್ತಿತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link