ಚಿತ್ರದುರ್ಗ
ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳಲು ಬಯಸುವ ಎಲ್ಲರಿಗೂ ಮಾರ್ಗದರ್ಶನ ಸಿಗಲ್ಲ. ಅದನ್ನು ನಾವೇ ಹುಡುಕಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ ತಿಳಿಸಿದರು.
ಜಿಲ್ಲಾಡಳಿತ, ನಗರಾಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಶನಿವಾರ ನಗರದ ಕ್ರೀಡಾಭವನದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ನಾನು ಹೇಗೆ ಐಎಎಸ್ ಪಾಸು ಮಾಡಿದೆ ಎಂಬುದರ ಹಿಂದೆ ದೊಡ್ಡ ಕಥೆಯೇ ಇದೆ. ಚಿಕ್ಕ ವಯಸ್ಸಿನಲ್ಲೇ ನನ್ನ ತಂದೆ ಉನ್ನತ ಮಟ್ಟದ ಅಧಿಕಾರಿ ಆಗಬೇಕೆಂಬ ಗುರಿ ವಿಧಿಸಿದರು. ನನಗೆ ಮೆಡಿಕಲ್ ಓದುವ ಆಸಕ್ತಿ ಇರಲಿಲ್ಲ. ಆದರೆ ನಾನು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪಾಸು ಮಾಡಲು ಮುಂದಾದೆ ಎಂದು ತಿಳಿಸಿದರು.
ಉಪವಿಭಾಗಾಧಿಕಾರಿ ಪ್ರಸನ್ನಕುಮಾರ್ ಮಾತನಾಡಿ, ಕಾಲಕ್ಕೆ ಮಹತ್ವ ನೀಡಬೇಕು. ಕಳೆದು ಹೋದ ಸಮಯ ಮತ್ತೆ ಬರುವುದಿಲ್ಲ. ನಿತ್ಯ ಕನಿಷ್ಠ ಹತ್ತು ಗಂಟೆ ಅಧ್ಯಯನ ಮಾಡಬೇಕು. ಯಾವ್ಯಾವ ವಿಷಯ ಓದಬೇಕೆಂಬುದನ್ನು ಮೊದಲೇ ಸಿದ್ದಪಡಿಸಿಕೊಳ್ಳಬೇಕು. ಈ ಹಿಂದೆ ಪುಸ್ತಕಗಳ: ಕೊರತೆ ಇತ್ತು. ಈಗ ಕೈಗಟುಕುವುದರಲ್ಲಿ ಸುಲಭವಾಗಿ ಸಿಗಲಿದೆ. ಮೊಬೈಲ್, ಇಂಟರ್‍ನೆಟ್‍ಗಳನ್ನು ಜ್ಞಾನಾರ್ಜನೆಗೆ ಬಳಕೆ ಮಾಡಿಕೊಳ್ಳುವಂತೆ ಕಿವಿಮಾತು ಹೇಳಿದರು.
ಕೆಲವರು ಪಿಯುಸಿ ಅಥವಾ ಪದವಿಯಲ್ಲಿ ನಕಲು ಮಾಡಿ ಪರೀಕ್ಷೆಯಲ್ಲಿ ಉತೀರ್ಣರಾಗಿ ಹುದ್ದೆ ಪಡೆದರೆ ಸಾರ್ವಜನಿಕ ಸೇವೆ ಮಾಡಲು ತೊಡಕಾಗುತ್ತದೆ. ಜ್ಞಾನವನ್ನು ಬೆಳೆಸಿಕೊಂಡರೆ ಸಾರ್ವಜನಿಕ ಸೇವೆ ಮಾಡುವಾಗ ಯಾವುದೇ ಸಮಸ್ಯೆ ಬಂದರೂ ಸುಲಭವಾಗಿ ಎದುರಿಸಬಹುದು. ಇದಕ್ಕಾಗಿ ಮೊದಲು ಪ್ರಾಮಾಣಿಕವಾಗಿ ಶ್ರದ್ದೆ, ಆಸಕ್ತಿಯಿಂದ ಓದಬೇಕು. ಕನಿಷ್ಠ 25 ಪ್ರಶ್ನೆಪತ್ರಿಕೆಗಳನ್ನು ಅಧ್ಯಯನ ಮಾಡಿ ಉತ್ತರವನ್ನು ಆಯ್ಕೆ ಮೂಲಕ ಆಯ್ಕೆ ಮಾಡುವ ಬದಲಿಗೆ ನೇರವಾಗಿ ಹೇಳುವ ಸಾಮಾಥ್ರ್ಯ ಬೆಳೆಸಿಕೊಳ್ಳುವಂತೆ ಹೇಳಿದರು.
ಸ್ಫರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವ ಅಭ್ಯರ್ಥಿಗಳು ಮನರಂಜನೆಯನ್ನು ತ್ಯಾಗ ಮಾಡಿ ಅಧ್ಯಯನ ಕಡೆ ಹೆಚ್ಚಿನ ಗಮನ ಕೊಟ್ಟರೆ ಮಾತ್ರ ಗುರಿ ಮುಟ್ಟಲು ಸಾಧ್ಯ ಪರೀಕ್ಷೆ ವೇಳೆಯಲ್ಲಿ ಜಾತ್ರೆ, ಮದುವೆ ಸಮಾರಂಭ, ಸಿನಿಮಾಗಳಿಗೆ ಹೋಗುವುದನ್ನು ಬಿಡಿ. ಕುಟುಂಬದ ಸದಸ್ಯರು ಸಮಾರಂಭಗಳಿಗೆ ಹಾಜರಾಗುತ್ತಾರೆ. ಅಲ್ಲಿಗೆ ಹೋಗಿ ಕಾಲ ಹರಣ ಮಾಡುವ ಬದಲು ಅಧ್ಯಯನಕ್ಕೆ ಕಾಲ ಬಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.
ವಿಜ್ಞಾನ ವಿದ್ಯಾರ್ಥಿಗಳು ಸಂವಿಧಾನ ಜ್ಞಾನ ಪಡೆದಿರುವುದಿಲ್ಲ. ಕಲಾ ವಿಭಾಗದ ವಿದ್ಯಾರ್ಥಿಗಳು ವಿಜ್ಞಾನದ ಜಾÐನ ಹೊಂರಿರುವುದಿಲ್ಲ./ ಅಂತವರಿಗೆ ಸ್ಫರ್ಧಾತ್ಮಕ ಪರೀಕ್ಷೆ ಎದುರಿಸಲು ಕಷ್ಟವಾಗುತ್ತದೆ. ಸಂವಿಧಾನ, ಇತಿಹಾಸದ ಅರಿವು ಇದ್ದರೆ ಪರೀಕ್ಷೆಗಳನ್ನು ಸುಲಭವಾಗಿ ಎದುರಿಸಬಹುದು. ಈ ಹಿನ್ನೆಲೆಯಲ್ಲಿ ಅಧ್ಯಯನಶೀಲರಾಗುವಂತೆ ಹೇಳಿದರು.
ಓದುವ ವಯಸ್ಸಿನಲ್ಲಿ ಓದುವುದು ಬಿಟ್ಟರೆ ಬೇರೆ ವಿಚಾರಗಳಿಗೆ ತಲೆಕೆಡಿಸಿಕೊಳ್ಳಬೇಡಿ. ಮನರಂಜನೆಗಳನ್ನು ತ್ಯಾಗ ಮಾಡಿ. ಚೆನ್ನಾಗಿ ಓದಿ ಉತ್ತಮ ಹುದ್ದೆ ಪಡೆದರೆ ನಂತರವೂ ಜೀವನವನ್ನು ಖುಷಿಯಾಗಿ ಕಳೆಯಬಹುದು. ವಿದ್ಯಾಥಿ ಜೀವನದಲ್ಲಿ ಖುಷಿಯಿಂದ ಕಾಲ ಕಳೆದರೆ ಜೀವನ ಪರ್ಯಾಂತ ಕಷ್ಟಪಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನಗರಾಭಿವೃದ್ದಿ ಕೋಶದ ಯೋಜನಾನಿರ್ದೇಶಕ ರಾಜಶೇಖರಪ್ಪ ಮಾತನಾಡಿ, ಈ ಹಿಂದೆ ಇದ್ದಂತೆ ಸ್ಫರ್ಧಾತ್ಮಕ ಪರೀಕ್ಷೆಯಲ್ಲಿ ಪಠ್ಯ ಕ್ರಮ ಇಲ್ಲ. ಬದಲಾವಣೆಗೆ ತಕ್ಕಂತೆ ಪರೀಕ್ಷಾರ್ಥಿಗಳು ಸಿದ್ದತೆ ಮಾಡಿಕೊಳ್ಳಬೇಕು ಎಂದರು.
ಸಮಾಜಕಲ್ಯಾಣಾಧಿಕಾರಿ ಮಂಜುಳಾ, ಪರಿಶಿಷ್ಟ ವರ್ಗಗಳ ಅಧಿಕಾರಿ ರಾಜು, ಸಂಪನ್ಮೂಲ ವ್ಯಕ್ತಿ ರಾಮಪ್ಪ, ಜಿಲ್ಲಾ ಮಾರ್ಗದರ್ಶಿ ಬ್ಯಾಂಕಿನ ಅಧಿಕಾರಿ ಶ್ರೀನಿವಾಸ್, ಜಿಲ್ಲಾ ಗ್ರಂಥಾಲಾಯಾಧಿಕಾರಿ ತಿಪ್ಪೇಸ್ವಾಮಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ರೇಖಾ ಹಾಗೂ ಇತರರು ಭಾಗವಹಿಸಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ