ಕೋಮುವಾದಿ ಪಕ್ಷ ಬಿಜೆಪಿಯನ್ನು ದೂರವಿಡಲು ಕಾಂಗ್ರೆಸ್ ಹಾಗೂ ಜೆಡಿಎಸ್ ಒಂದಾಗಿದ್ದೇವೆ : ಸಿದ್ದರಾಮಯ್ಯ

ಚಿಕ್ಕನಾಯಕನಹಳ್ಳಿ

     ನಮ್ಮ ರಾಜಕೀಯ ವೈರಿ ಬಿಜೆಪಿ, ಆರ್.ಎಸ್.ಎಸ್, ಎಬಿವಿಪಿ, ಸಂಘಪರಿವಾರದವರು ಇವರೆಲ್ಲಾ ಅಹಿಂದ ವಿರೋಧಿಗಳು ಎಂಬ ದೃಷ್ಠಿಯಿಂದ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಾಗಿರುವುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

      ಪಟ್ಟಣದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ನರೇಂದ್ರ ಮೋದಿ ಸಾಮಾಜಿಕ ನ್ಯಾಯದ ವಿರೋಧಿ ಇವರನ್ನು ಚುನಾವಣೆಯಲ್ಲಿ ಸೋಲಿಸಲೇಬೇಕು, ಕೋಮುವಾದಿ ಪಕ್ಷ ಬಿಜೆಪಿಯನ್ನು ದೂರವಿಡಲು ಕಾಂಗ್ರೆಸ್ ಹಾಗೂ ಜೆಡಿಎಸ್ ಒಂದಾಗಿದ್ದೇವೆ, ರಾಜ್ಯದ 28ಕ್ಷೇತ್ರಗಳಲ್ಲಿ ಕಾಂಗ್ರೆಸ್ 21 ಹಾಗೂ ಜೆಡಿಎಸ್ 7ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದೇವೆ, ಗೆಲುವು ಕಾಣುತ್ತೇವೆ ಎಂದ ಅವರು, ಕಾರಣಾಂತರದಿಂದ ಹಾಲಿ ಸಂಸದ ಎಸ್.ಪಿ.ಮುದ್ದಹನುಮೇಗೌಡರನ್ನು ಅಭ್ಯರ್ಥಿ ಮಾಡಲಾಗಲಿಲ್ಲ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ತುಮಕೂರು ಜಿಲ್ಲೆಯಲ್ಲಿ ಕಣಕ್ಕಿಳಿದಿದ್ದು ಅವರು ಪ್ರತಿಹನಿ ನೀರು ಸಹ ರೈತರಿಗೆ ಸಿಗಬೇಕು ಎಂದು ಹೋರಾಟ ಮಾಡಿದವರು, ಅವರ ಬಗ್ಗೆ ಅಪಪ್ರಚಾರ ಮಾಡುತ್ತಿರುವುದು ಸರಿಯಲ್ಲ ಎಂದರು.

       ನರೇಂದ್ರಮೋದಿ ರೈತರ, ಬಡವರ, ಅಲ್ಪಸಂಖ್ಯಾತರ, ಹಿಂದುಳಿದ ವರ್ಗಗಳ ವಿರೋಧಿ, ಸಂವಿಧಾನ ಎಲ್ಲರಿಗೂ ಸಮಾನ ಅವಕಾಶ ನೀಡಿದೆ ಆದರೂ ಕೋಮುವಾದಿ ಬಿಜೆಪಿ ಪಕ್ಷ ಸಂವಿಧಾನ ಬದಲಾವಣೆ ಮಾಡಲು ಹೊರಟಿದೆ ಇದು ಸರಿಯಲ್ಲ ಎಂದ ಅವರು, ಅಹಿಂದಕ್ಕೆ ಮೀಸಲಾತಿ ಕೊಡಬಾರದೆಂದು ಬಿಜೆಪಿಯ ರಾಮಜೋಹಿಸ್ ಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು ಆದರೆ ಆ ಅರ್ಜಿ ವಜಾ ಆಯಿತು, ನರೇಂದ್ರಮೋದಿ, ಅಮಿತ್‍ಷಾ, ಈಶ್ವರಪ್ಪ, ಯಡಿಯೂರಪ್ಪ ಇವರ್ಯಾರೂ ಹಿಂದುಳಿದವರ ಪರವಾಗಿಲ್ಲ ಆದ್ದರಿಂದ ಹಿಂದುಳಿದವರು ಬಿಜೆಪಿಗೆ ಮತ ಹಾಕಬಾರದು ತಾಲ್ಲೂಕಿನಲ್ಲಿ ಕಳೆದ ಬಾರಿ ಕಾಂಗ್ರೆಸ್‍ಗೆ ಹೆಚ್ಚು ಮತ ನೀಡಿದ್ದೀರಿ ಈ ಬಾರಿಯೂ ಮೈತ್ರಿ ಅಭ್ಯರ್ಥಿಗೆ ಮತ ನೀಡಿ 50ಸಾವಿರಕ್ಕೂ ಹೆಚ್ಚು ಅಂತರದಿಂದ ಗೆಲ್ಲಿಸುವಂತೆ ಮನವಿ ಮಾಡಿದರು.

       ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಮಾತನಾಡಿ, ಸನ್ನಿವೇಶದ ಒತ್ತಡದಿಂದ ತುಮಕೂರು ಲೋಕಸಭಾ ಚುನಾವಣೆಗೆ ನಿಲ್ಲಬೇಕಾಗಿ ಬಂತು, ನಾನು ಚುನಾವಣೆಯಲ್ಲಿ ಗೆದ್ದರೆ ಕುಡಿಯುವ ನೀರಿಗೆ ಆಧ್ಯತೆ ನೀಡಿ ಸಮಸ್ಯೆ ಬಗೆಹರಿಸುತ್ತೇನೆ ಎಂದರು.
ಮಾಜಿ ಕೇಂದ್ರ ಸಚಿವ ಸಿ.ಎಂ.ಇಬ್ರಾಹಿಂ ಮಾತನಾಡಿ, ಪ್ರಥಮ ಕನ್ನಡಿಗ ಪ್ರಧಾನಿ ಹೆಚ್.ಡಿ.ದೇವೇಗೌಡರವರು ಕರ್ನಾಟಕದ ರತ್ನವಾಗಿದ್ದಾರೆ, ರಾಹುಲ್‍ಗಾಂಧಿಯೊಂದಿಗೆ ಜೊತೆಗೂಡಿ ಅವರೊಂದಿಗೆ ಸಹಕರಿಸಲು ನೆರವಾಗುವ ದೇವೇಗೌಡರಿಗೆ ಮತ ನೀಡಿ ಎಂದರು.

        ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಚಿವರಾದ ಪುಟ್ಟರಂಗಶೆಟ್ಟಿ, ಶ್ರೀನಿವಾಸ್, ಮಾಜಿ ಸಚಿವ ಟಿ.ಬಿ.ಜಯಚಂದ್ರ, ವಿಧಾನ ಪರಿಷತ್ ಸದಸ್ಯರಾದ ಬೆಮಲ್‍ಕಾಂತರಾಜು, ಚೌಡರೆಡ್ಡಿತೂಪಲ್ಲಿ, ಮಾಜಿ ವಿಧಾನ ಪರಿಷತ್ ಸದಸ್ಯ ರಮೇಶ್‍ಬಾಬು, ಮಾಜಿ ಶಾಸಕರಾದ ಸಿ.ಬಿ.ಸುರೇಶ್‍ಬಾಬು, ಬಿ.ಲಕ್ಕಪ್ಪ, ಕಾಂಗ್ರೆಸ್ ಮುಖಂಡರಾದ ಸಂತೋಷ್‍ಜಯಚಂದ್ರ, ಸಾಸಲುಸತೀಶ್, ಜಿ.ಪಂ.ಅಧ್ಯಕ್ಷೆ ಲತಾರವಿಕುಮಾರ್, ತಾ.ಪಂ.ಅಧ್ಯಕ್ಷೆ ಚೇತನಗಂಗಾಧರ್, ಜಿ.ಪಂ.ಸದಸ್ಯರಾದ ಕಲ್ಲೇಶ್, ರಾಮಚಂದ್ರಯ್ಯ, ವೈ.ಸಿ.ಸಿದ್ದರಾಮಯ್ಯ, ಸಿ.ಬಸವರಾಜು, ಸಿ.ಡಿ.ಚಂದ್ರಶೇಖರ್, ಸಿ.ಎಸ್.ನಟರಾಜು, ಕೆ.ಜಿ.ಕೃಷ್ಣೆಗೌಡ ಮತ್ತಿತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link