ಟಿಪ್ಪು ಜಯಂತಿ ಆಚರಿಸಲು ಬಿಡುವುದಿಲ್ಲ: ಬಿಎಸ್‍ವೈ

ಬೆಂಗಳೂರು

    ಯಾವುದೇ ಕಾರಣಕ್ಕೂ ಟಿಪ್ಪುಜಯಂತಿ ಆಚರಿಸಲು ಬಿಡುವುದಿಲ್ಲ. ಅದೇರೀತಿ ಪಠ್ಯಪುಸ್ತಕಗಳಿಂದ ಟಿಪ್ಪು ಸುಲ್ತಾನ್ ಇತಿಹಾಸವನ್ನು ತೆಗೆದುಹಾಕುವ ಕುರಿತಂತೆ ಪರಿಶೀಲಿಸಲಾಗುವುದು. ಶೀಘ್ರವೇ ಈ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

    ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಮುಖ್ಯಮಂತ್ರಿ, ನೂರು ದಿನದಲ್ಲಿ ಎಷ್ಟು ನೋವು ಅನುಭವಿಸಿದ್ದೇನೆ ನಿಮಗೆ ಗೊತ್ತಿದೆ. ಮುಂದಿನ ಮೂರುವರೆ ವರ್ಷ ಉತ್ತಮ ಆಡಳಿತ ನಡೆÀಸಲಿದ್ದೇನೆ. ಬರುವ ಉಪಚುನಾವಣೆಯಲ್ಲಿ ಎಲ್ಲ ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಅಭಿವೃದ್ಧಿಯೇ ಆಡಳಿತ ಮಂತ್ರ ಎಂಬ ಧ್ಯೇಯದಡಿ ಸರ್ಕಾರ ಮುನ್ನಡೆಯುತ್ತಿದೆ. ಆಡಳಿತ ಚುರುಕುಗೊಳಿಸುವ ಉದ್ದೇಶದಿಂದ ಎಲ್ಲ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸಲಾಗುತ್ತಿದೆ. ರಾಜ್ಯದ 122 ತಾಲ್ಲೂಕುಗಳಲ್ಲಿ ಪ್ರವಾಹ ಪೀಡಿತವಾಗಿವೆ. ಎನ್.ಡಿಆರ್.ಎಫ್. ಮಾರ್ಗದರ್ಶಿ ಸೂಚಿಯಂತೆ ಪರಿಹಾರ ನೀಡಲಾಗುತ್ತಿದೆ. ಪ್ರವಾಹ ಪೀಡಿತರಿಗೆ ಪರಿಹಾರ ನೀಡಲು ಯಾವುದೇ ಆರ್ಥಿಕ ತೊಂದರೆ ಇಲ್ಲ.

      ಬೆಳೆ ಹಾನಿಯಾಗಿರುವ ಪ್ರದೇಶಕ್ಕೆ ಹೆಚ್ಚುವರಿಯಾಗಿ 10 ಸಾವಿರ ರೂ. ನೀಡಲಾಗುತ್ತಿದೆ. ಖಜಾನೆಯಲ್ಲಿ ಪರಿಹಾರಕ್ಕಾಗಿ 1300 ಕೋಟಿ ರೂ. ಇದೆ. 9,600 ಮನೆಗಳ ಪೈಕಿ 7,200 ಮನೆಗಳ ನಿರ್ಮಾಣಕ್ಕೆ 78 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಒಟ್ಟು 32 ಸಾವಿರ ಮನೆಗಳ ನಿರ್ಮಾಣಕ್ಕೆ ಹಣ ಬಿಡುಗಡೆ ಗೊಳಿಸಲಾಗುವುದು. ಅಂಗಡಿ ಮುಂಗಟ್ಟು ಕಳೆದುಕೊಂಡ ವರಿಗೆ 25 ಸಾವಿರ, ಮಗ್ಗಗಳು ಹಾಳಾದವರಿಗೆ 50ಸಾವಿರ ರೂಪಾಯಿ ಒದಗಿಸಲಾಗುವುದು. ಒಂದು ವಾರದಲ್ಲಿ 18 ಸಾವಿರ ಪಂಪ್‍ಸೆಟ್ ಗಳನ್ನು ದುರಸ್ತಿ ಗೊಳಿಸಲಾಗುವುದು ಮುಖ್ಯಮಂತ್ರಿ ಹೇಳಿದರು.

     ಪಕ್ಷದ ರಾಷ್ಟ್ರೀಯ ನಾಯಕರ ನಿರ್ಧಾರದಂತೆ ಉಪಮುಖ್ಯಮಂತ್ರಿಗಳನ್ನು ನೇಮಿಸಲಾಗಿದೆ. ಆಡಳಿತವನ್ನು ಸುಗಮವಾಗಿ ನೆಡಸಿಕೊಂಡು ಹೋಗಲು ಕೆಲವು ಹುದ್ದೆಗಳನ್ನು ನೇಮಕ ಮಾಡಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಸಿಎಂ ಸ್ಪಷ್ಟನೆ ನೀಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap