ಜೀವೆಕೊಟ್ಟೆವು ಪಿಂಚಣೆ ಬಿಡೆವು ಹೋರಾಟ ಮಾಡಲಾಗುವುದು-ಬಾಬುರೆಡ್ಡಿ

ಜಗಳೂರು :

    ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸದಿದ್ದರೆ ಮುಂದಿನ ದಿನಗಳಲ್ಲಿ ಜೀವೆಕೊಟ್ಟೆವು ಪಿಂಚಣೆ ಬಿಡೆವು ಎಂಬ ಹೋರಾಟ ಮಾಡಲಾಗುವುದೆಂದು ಪ್ರಾ.ಶಾ.ಶಿ.ಸಂಘದ ಮಾಜಿ ಜಿಲ್ಲಾಧ್ಯಕ್ಷ, ಹಾಲಿ ನಿರ್ಧೇಶಕ ಬಾಬುರೆಡ್ಡಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

     ತಾಲೂಕು ಕಚೇರಿ ಮುಂಭಾಗ ಹಳೆಯ ಪಿಂಚಣಿ ಯೋಜನೆಗೆ ಒತ್ತಾಯಿಸಿ ಎನ್‍ಪಿಎಸ್ ನೌಕರರು, ರಕ್ತ ಕೊಟ್ಟೇವು, ಪಿಂಚಣಿ ಬಿಡೆವು ಎಂಬ ಘೋಷ ವಾಕ್ಯದೊಂದಿಗೆ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

      ಹಳೆಯ ಪಿಂಚಣಿ ಯೋಜನೆಗೆ ಒತ್ತಾಯಿಸಿ ಎನ್‍ಪಿಎಸ್ ನೌಕರರು, ರಕ್ತ ಕೊಟ್ಟೇವು, ಪಿಂಚಣಿ ಬಿಡೆವು ಎಂಬ ಘೋಷ ವಾಕ್ಯದೊಂದಿಗೆ ಒಂದು ದಿವಸದ ಧರಣಿ ಸತ್ಯಾಗ್ರಹ ನಡೆಸಲಾಗಿದೆ. ಸರ್ಕಾರ ಹಳೆಯ ಪಿಂಚಣೆ ಯೋಜನೆ ತಕ್ಷಣವೇ ಜಾರಿಗೊಳಿಸಿ ಎನ.ಪಿ.ಎಸ್.ನೌಕರರ ಬೇಡಿಕೆಗಳನ್ನು ಈಡೇರಿಸಬೇಕೆಂದು ಅವರು ಆಗ್ರಹಿಸಿದರು.

      ತಾಲ್ಲೂಕು ಕ.ರಾ.ಎಸ್.ಪಿ.ಎಸ್.ನೌಕರರ ಸಂಘದ ಅಧ್ಯಕ್ಷ ಡಿ.ಎಸ್.ಬಣಕಾರ ಮಾತನಾಡಿ ಮುಖ್ಯಮಂತ್ರಿಹೆಚ್.ಡಿ.ಕುಮಾರಸ್ವಾಮಿ ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿನ ಎನ್‍ಪಿಎಸ್ ಕೈ ಬಿಡುವುದಾಗಿ ಭರವಸೆ ನೀಡಿದ್ದರು. ಅವರ ಗಮನ ಸೆಳೆಯಲು “ರಕ್ತ ಕೊಟ್ಟೇವು, ಪಿಂಚಣಿ ಬಿಡೆವು” ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು. ಕಳೆದ ಜ.2 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ 90 ಸಾವಿರ ನೌಕರರು ನಡೆಸಿದ ಹೋರಾಟದ ಫಲವಾಗಿ ಮರಣ ಮತ್ತು ನಿವೃತ್ತಿ ಉಪಧನ ಹಾಗೂ ಕುಟುಂಬ ಪಿಂಚಣಿ ಯೋಜನೆ ಜಾರಿಯಾಗಿತ್ತು. ಅದರಲ್ಲೂ ಕೆಲವೊಂದು ಷರತ್ತುಗಳಿವೆ. ಈಗ ಸಂಪೂರ್ಣವಾಗಿ ನಿಶ್ಚಿತ ಪಿಂಚಣಿ ಯೋಜನೆ ಜಾರಿಗೆ ತಂದು, ನೂತನ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಬೇಕು ಎಂದು ಪಟ್ಟು ಹಿಡಿದರು.

        ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಇ.ಸತೀಶ್ ಮಾತನಾಡಿ ಕೇಂದ್ರ ಸರ್ಕಾರ 2004 ಜನವರಿ. 1 ರಂದು ಹಾಗೂ 2006 ಏಪ್ರಿಲ್ 1 ರಿಂದ ತನ್ನ ನೌಕರ ವರ್ಗಕ್ಕೆ ಎನ್‍ಪಿಎಸ್ ಜಾರಿಗೊಳಿಸಿದೆ. ಈ ಮೂಲಕ ನೌಕರ ಹಾಗೂ ಅವರ ಕುಟುಂಬ ವರ್ಗವನ್ನು ಸಂಕಷ್ಟಕ್ಕೆ ದೂಡಿದೆ. ಇದನ್ನು ರದ್ದು ಪಡಿಸುವಂತೆ ಆಗ್ರಹಿಸಿ ಈಗಾಗಲೇ ಸಂಘಟನೆಗಳು ನಾನಾ ಹೋರಾಟಗಳನ್ನು ನಡೆಸಿದ್ದು ಇದರಿಂದಾಗಿ ರಾಜ್ಯ ಸರ್ಕಾರ ಡಿಜಿಆರ್‍ಜಿ ಹಾಗೂ ಕುಟುಂಬ ಪಿಂಚಣಿ ಜಾರಿ ಮಾಡಿದೆ. ಆದರೆ, ಮೊದಲಿದ್ದಂತೆ ನಿಶ್ಚಿತ ಪಿಂಚಣಿಯನ್ನು ಜಾರಿ ಮಾಡಬೇಕು ಎಂದು ಅವರು ಆಗ್ರಹಿಸಿದರು.

         ಗೌರವಾಧ್ಯಕ್ಷ ವೆಂಕಟೇಶ್ ಮಾತನಾಡಿ 2006ರಲ್ಲಿ ರಾಜ್ಯ ಸೇವೆಗೆ ಸೇರಿರುವ ಸುಮಾರು 3.50ಲಕ್ಷ ನೌಕರರನ್ನು ಪ್ರತಿನಿಧಿಸುತ್ತಿದ್ದ ನಿಶ್ಚಿತ ಪಿಂಚಣಿ ಯೋಜನೆಯನ್ನ ರದ್ದುಗೊಳಿಸಿ ಕೇಂದ್ರ ಸರ್ಕಾರ ಹೊಸ ಪಿಂಚಣಿಯನ್ನು ಜಾರಿಗೆ ತಂದಿದ್ದು ಹಲವಾರು ನೌಕರರನ್ನು ಕಷ್ಟದ ಪರಿಸ್ಥಿತಿಗೆ ದೂಡಲ್ಪಟ್ಟಿದೆ. ಈ ಯೋಜನೆ ವಿರುದ್ದ ಹಲವು ಹೋರಾಟಗಳನ್ನು ನಡೆಸುತ್ತಾ ಬಂದಿದ್ದೇವೆ. 2018 ಜ.20ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಸುಮಾರು ಒಂದು ಲಕ್ಷ ಜನ ಸರ್ಕಾರಿ ನೌಕರರು ಇಡಿ ದಿನ ಉಪವಾಸ ಸತ್ಯಾಗ್ರಹ ನಡೆಸಲಾಗಿತ್ತು. ಆದರೆ ಸರ್ಕಾರ ಯಾವುದೇ ನಿರ್ಧಾರ ಕೈಗೊಳ್ಳದೇ ಮೌನವಹಿಸಿದೆ. ನ್ಯಾಯ ಸಿಗುವವರೆಗೂ ನಿರಂತರ ಹೋರಾಟ ನಡೆಸಲಾಗುವುದು ಎಂದು ಹೇಳಿದರು.

        ಪಟ್ಟಣದ ಗುರುಭವನದ ಆವರಣದಿಂದ ಚಾಲನೆಗೊಂಡ ಮೆರವಣಿಗೆ ಹಳೆ ಮಹಾತ್ಮಗಾಂಧಿ ವೃತ್ತ, ದಾವಣಗೆರೆ ರಸ್ತೆ, ಹೊಸ ಬಸ್ ನಿಲ್ದಾಣ, ಡಾ. ಬಿ.ಆರ್ ಅಂಬೇಡ್ಕರ್ ವೃತ್ತ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸರ್ಕಾರದ ವಿರುದ್ದ ದಿಕ್ಕಾರದ ಘೋಷಣೆಗಳನ್ನು ಕೂಗಿದರು.

        ರಕ್ತದಾನ: ತಾಲೂಕು ಕಚೇರಿ ಮುಂಭಾಗ ಹಮ್ಮಿಕೊಂಡಿದ್ದ ಪ್ರತಿಭಟನೆ ಸ್ಥಳದಲ್ಲಿಯೇ ವಿವಿಧ ಇಲಾಖೆಯ 51 ಮಂದಿ ಪ್ರತಿಭಟನಾಕಾರ ನೌಕರರು ರಕ್ತದಾನ ಮಾಡಿದರು.

        ಈ ಸಂದರ್ಭದಲ್ಲಿ ತಾಲ್ಲೂಕು ಕ.ರಾ.ಎಸ್.ಪಿ.ಎಸ್.ನೌಕರರ ಸಂಘದ ಕಾರ್ಯದರ್ಶಿ ದೊಡ್ಡಪ್ಪ , , ಉಪಾಧ್ಯಕ್ಷರಾದ ಲಿಂಗೇಶ್ವರ ಅಶೋಕ್ ಡಿ.ಟಿ., ವೆಂಕಟೇಶ್ ಕೆ.ಎ., ನವೀನ್ ಜಿ.ವಿ., ಸಿ.ಎಂ.ಪ್ರಕಾಶ್ ಬಿ,ಎಂ ವೈ, ಎಚ್.ಎಂ ಕರಿಬಸಪ್ಪ, ಪರಶುರಾಮ್, ಎ.ಎಂ ವಿನಯ್ ಸ.ನೌ.ಸಂಘದ ಸಾಂಸ್ಕತಿಕ ಕಾರ್ಯದರ್ಶಿ ಶಿವಕುಮಾರ್, ಕಲ್ಲಿನಾಥ್, ಪ್ರಾ.ಶಿ.ಸಂಘದ ಅಧ್ಯಕ್ಷ ಶ್ಯಾಮಣ್ಣ, ಕೃಷಣಪ್ಪ ,ನಿವೃತ್ತ ನೌಕರರ ಸಂಘದ ಅಧ್ಯಕ್ಷ ಶಿಕ್ಷಕ ಪಾಲಯ್ಯ, ಮಾಜಿ ಅಧ್ಯಕ್ಷ ನಾರಪ್ಪ, ಸೇರಿದಂತೆ ವಿವಿಧ ಇಲಾಖೆಯ ನೌಕರರುಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ   

Recent Articles

spot_img

Related Stories

Share via
Copy link
Powered by Social Snap