ಕೊರೋನಾ ನಡುವೆಯೂ ಪರೀಕ್ಷೆ ನಡೆಸಿರುವುದು ನಮ್ಮ ಸಾಧನೆ : ಸಿಎಂ

ಬೆಂಗಳೂರು

       ಕೊರೊನಾ ದೊಡ್ಡ ಸವಾಲು ತಂದೊಡ್ಡಿದ್ದು,ಇದು ಜೀವ-ಜೀವನ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ.ಇದರಿಂದ ಶೈಕ್ಷಣಿಕ ವ್ಯವಸ್ಥೆ ಸ್ತಬ್ಧವಾಗಿದೆ.ಇದರ ನಡುವೆ ಎಸ್ ಎಸ್ ಎಲ್‍ಸಿ ಪರೀಕ್ಷೆ ನಡೆಸಿರುವುದು ಒಂದು ಸಾಧನೆಯಾಗಿದೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದರು.

      ವಿಧಾನಸೌಧದಲ್ಲಿ ನಡೆದ ರಾಜ್ಯ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಶಿಕ್ಷ ಕ ವೃತ್ತಿ ಅತ್ಯಂತ ಪವಿತ್ರ ವೃತ್ತಿಯಾಗಿದೆ.ಈ ವೃತ್ತಿಗೆ ಘನತೆ ತಂದುಕೊಟ್ಟಿದ್ದು ಸರ್ವೆಪಲ್ಲಿ ರಾಧಾಕೃಷ್ಣನ್. ಕರೋನಾದಿಂದ ಶೈಕ್ಷಣಿಕ ಚಟುವಟಿಕೆಗಳು ಸಂಪೂರ್ಣವಾಗಿ ಸ್ತಬ್ಧವಾಗಿದೆ.

     ಇದ್ರ ನಡುವೆ ಎಸ್ ಎಸ್ ಎಲ್ ಪರೀಕ್ಷೆ ನಡೆಸಿದ್ದು ಇಡೇ ದೇಶವೇ ಮೆಚ್ಚಿದೆ.ಎಸ್ ಎಸ್ ಎಲ್ ಸಿ ಪರೀಕ್ಷೆ ಯಶಸ್ವಿ ಯಾಗಿ ನಡೆಸಿದಕ್ಕೆ ಸುರೇಶ್ ಕುಮಾರ್ ಗೆ ಅಭಿನಂದನೆ ಸಲ್ಲಿಸುತ್ತೇನೆ.ಇತ್ತೀಚೆಗೆ ಖಾಸಗಿ ಶಾಲೆಗಳಿಂದ ಸರ್ಕಾರಿ ಶಾಲೆಗಳತ್ತ ಮುಖ ಮಾಡಿರುವುದು ಒಳ್ಳೆಯ ವಿಚಾರ ಎಂದು ತಿಳಿಸಿದರು.
 
     ನಮಗೆ ಬೇಸರದ ಸಂಗತಿ ಎಂದರೆ ಸುಮಾರು 3.5 ಲಕ್ಷ ಖಾಸಗಿ ಅನುದಾನ ರಹಿತ ಶಿಕ್ಷಕರು ಕಳೆದ ನಾಲ್ಕು ತಿಂಗ ಳಿಂದ ಸಂಕಷ್ಟದಲ್ಲಿದ್ದಾರೆ.ಅವರಿಗೆ ನೆರವು ನೀಡಲು ಬೇರೆ ಬೇರೆ ಹೆಜ್ಜೆ ಇಡುತ್ತಿದ್ದೇವೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು.

    ಎಲ್ಲಾ ಖಾಸಗಿ ಶಿಕ್ಷಕರ ನೆರವಿಗೆ ಸರ್ಕಾರ ಮುಂದೆ ಬರಲಿದೆ.ಕೊರೊನಾ ಶಿಕ್ಷಣ ಇಲಾಖೆ ಮೇಲೆ ಕರಾಳ ಛಾಯೆ ಮೂಡಿಸಿದೆ. ಕರೋನಾ ಸಮಯದಲ್ಲಿ ನಮ್ಮ ಸರ್ಕಾರದ ನೇತೃತ್ವದಲ್ಲಿ ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆ ಯನ್ನ ಇಡೀ ದೇಶವೇ ಮೆಚ್ಚುಗೆ ವ್ಯಕ್ತಿಪಡಿಸಿದ್ದಾರೆ.ನಾವು ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಸಿದ ಮಾದರಿಯಲ್ಲೇ ಸಿಇಟಿ, ನೀಟ್ ಪರೀಕ್ಷೆ ನಡೆಸಲು ತೀರ್ಮಾನಿಸಿವೆ.ಇದಕ್ಕೆ ಸಹಕರಿಸಿದ ಎಲ್ಲಾ ಶಿಕ್ಷಣ ಇಲಾಖೆಯ ಸಿಬ್ಬಂದಿಗಳು ಮತ್ತು ಶಿಕ್ಷಕರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದರು.

      ಇದೇ ವೇಳೆ ಬ್ಲಾಕ್ ಚೈನ್ ಆನ್‍ಲೈನ್ ತಂತ್ರಜ್ಞಾನಕ್ಕೆ ಸಿಎಂ ಚಾಲನೆ ನೀಡಿದರು.ಎನ್ ಐ ಸಿ ಸಹಯೋಗದಲ್ಲಿ ಇದನ್ನು ಜಾರಿಗೆ ತರಲಾಗಿದ್ದು,ಇದು ಅತ್ಯಂತ ಸುರಕ್ಷಿತವಾದ ತಂತ್ರಜ್ಞಾನ ಆಗಿದೆ. ಇದರಲ್ಲಿ ವಿಧ್ಯಾರ್ಥಿಗಳ ಮಾರ್ಕ್ಸ್ ಕಾರ್ಡ್ ಅಪ್ ಲೋಡ್ ಮಾಡಲಾಗುತ್ತದೆ.ಉದ್ಯೋಗ ಪಡೆಯುವ ಸಂದರ್ಭದಲ್ಲಿ ಉದ್ಯೋಗ ಆಕಾಂಕ್ಷಿಗಳಿಗೆ ನೆರವಾಗಲಿದೆ.

     ರಾಜ್ಯ ಮಟ್ಟದ ಶಿಕ್ಷಕರಿಗೆ ಇದೇ ವೇಳೆ ಸಿಎಂ ಪ್ರಶಸ್ತಿ ಪ್ರದಾನ ಮಾಡಿದರು. ಒಟ್ಟು 20 ಮಂದಿಗೆ ಪ್ರಾಥಮಿಕ ಶಾಲಾ ವಿಭಾದಲ್ಲಿ ಉತ್ತಮ ಶಿಕ್ಷಣ ಪ್ರಶಸ್ತಿ ನೀಡಲಾಯಿತು. 11 ಮಂದಿಗೆ ಪ್ರೌಢಶಾಲಾ ವಿಭಾಗದಲ್ಲಿ ಉತ್ತಮ ಶಿಕ್ಷಕರ ಪ್ರಶಸ್ತಿ ನೀಡಿದರು.ಇಬ್ಬರಿಗೆ ಉತ್ತಮ ಪ್ರಾಂಶುಪಾಲ ಪ್ರಶಸ್ತಿ ನೀಡಲಾಯಿತು. 8 ಮಂದಿಗೆ ಉತ್ತಮ ಉಪನ್ಯಾಸಕರ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap