ಅತ್ಯಾಚಾರ ಪಿಡುಗನ್ನು ಸಾಮಾಜಿಕ ಕಾಯಿಲೆ ಎಂದು ಪರಿಗಣಿಸಿ ಉತ್ತರ ಹುಡುಕಬೇಕು :ಸವಿತಾ ಬನ್ನಾಡಿ

ಬೆಂಗಳೂರು

    ಅತ್ಯಾಚಾರ ಪಿಡುಗನ್ನು ಸಾಮಾಜಿಕ ಕಾಯಿಲೆ ಎಂದು ಪರಿಗಣಿಸಿ ಉತ್ತರ ಹುಡುಕಬೇಕೇ ಹೊರತು ಘಟನೆಯನ್ನು ರಾಜಕಾರಣಗೊಳಿಸಿ ಸುಮ್ಮನಾಗುವುದಲ್ಲ ಎಂದು ಸಾಹಿತಿ, ಮಹಿಳಾ ಹಕ್ಕುಗಳ ಪ್ರತಿಪಾದಕಿ ಸವಿತಾ ಬನ್ನಾಡಿ ಕರೆ ನೀಡಿದ್ದಾರೆ.”ಪ್ರಸ್ತುತ ಭಾರತದಲ್ಲಿ ಹೆಣ್ಣುಮಕ್ಕಳ ಸ್ಥಿತಿಗತಿ” ಕುರಿತು ಕರ್ನಾಟಕ ಪತ್ರಕರ್ತೆಯರ ಸಂಘ ಆಯೋಜಿಸಿದ್ದ ವೆಬಿನಾರ್‍ನಲ್ಲಿ ಅತಿಥಿಗಳಾಗಿ ಭಾಗವಹಿಸಿ ಅಭಿಪ್ರಾಯ ವ್ಯಕ್ತಪಡಿಸಿದರು.

    ಕೊನೆಯಿಲ್ಲದ ಅತ್ಯಾಚಾರ ಈ ಪದವೇ ಜೀವಹಿಂಡುವಂತಹದ್ದಾಗಿದೆ.ಈ ಸಾಮಾಜಿಕ ಕಾಯಿಲೆಯನ್ನು ಹತ್ತಿಕ್ಕಲು ಇಚ್ಛಾಶಕ್ತಿಯ ಅಗತ್ಯವಿದೆ.ಆಂತರಿಕ ಸಂಘರ್ಷ,ಕೋಮು ಸಂಘರ್ಷ,ಜಾತಿ ತಾರತಮ್ಯ ಸೇರಿದಂತರ ಹಲವು ರೀತಿಯ ಬಡತನಗಳು ಮಹಿಳಾ ಸ್ಥಿತಿಗತಿ ಹಾಗೂ ಪರಿಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ.ಈ ಪಿಡುಗಿಗೆ ತಾರ್ಕಿಕ ಅಂತ್ಯ ಹಾಗೂ ಉತ್ತರ ಸಿಗದೇ ಇರುವುದು ಹತಾಶ ಮನಸ್ಥಿತಿಗೆ ಕಾರಣವಾಗುತ್ತದೆ.ಅಲ್ಲದೇ ಈ ಹತಾಶ ಮನಸ್ಥಿತಿ ಈ ಸಾಮಾಜಿಕ ಸಂಘರ್ಷಕ್ಕೆ ಶರಣಾಗುತ್ತುವೆ.

   ಕಣ್ಣಿಗೆ ಕಾಣದಿರುವ ಸತ್ಯಗಳು ಹೊರಬೇಕು.ಹೆಣ್ಣುಮಕ್ಕಳ ಮನಸ್ಥಿತಿಗಳ ಬಗೆಗಿನ ವಾಸ್ತವವನ್ನು ಮುಕ್ತವಾಗಿ ಮಾತನಾಡುವ ಮನಸುಗಳು ಬೇಕಾಗಿವೆ ಎಂದರು.ಮಕ್ಕಳ ಹಕ್ಕುಗಳ ತಜ್ಞರಾದ ಕವಿತಾ ರತ್ನ ಮಾತನಾಡಿ,ಬಾಲ್ಯವಿವಾಹ ಕಾಯಿದೆಗೆ ತಿದ್ದುಪಡಿ,ಹೆಣ್ಣುಮಕ್ಕಳ ಮದುವೆಯ ವಯಸು 18 ರಿಂದ21 ಕ್ಕೆ ಏರಿಕೆ ತರುವ ಬಗ್ಗೆ ಚರ್ಚೆಗಳಾಗುತ್ತಿದ್ದು, ತಾವು ನಡೆಸಿದ ಅಧ್ಯಯನವೊಂದರಲ್ಲಿ ಈ ವಯಸಿನ ಏರಿಕೆಗೆ ಬಹುತೇಕ ಹೆಣ್ಣುಮಕ್ಕಳ ಬೆಂಬಲ ಕಂಡುಬಂದಿದೆ.

   ಆರ್ಥಿಕ ಹಿಂದುಳುವಿಕೆಯೊಂದೇ ಬಡತನವಲ್ಲ.ಸಾಮಾಜಿಕ ಬಡತನ,ಸಾಂಸ್ಕೃತಿಕ ಬಡತನ,ಭೌಗೋಳಿಕ ಬಡತನ,ರಾಜಕೀಯ ಬಡತನ ಈ ಎಲ್ಲವೂ ಮಹಿಳೆಯರ ಸ್ಥಿತಿಗತಿ ಮೇಲೆ ಪರಿಣಾಮ ಬೀರುತ್ತವೆ.ಮಹಿಳಾ ಮತ್ತು ಮಕ್ಕಳ ಹಕ್ಕುಗಳು ಜೊತೆಜೊತೆಯಲ್ಲಿಯೇ ಹೋಗುವಂತಹದ್ದು.ಕೋವಿಡ್ ದುಡಿಯುವ ಹದಿಹರೆಯದ ಕೈಯಲ್ಲಿದ್ದ ಕೆಲಸವನ್ನು ಕಸಿದುಕೊಳ್ಳುವ ಜೊತೆಗೆ ಇರುವ ಸಮಸ್ಯೆಯನ್ನು ಕೂಡ ಮತ್ತಷ್ಟು ಹೆಚ್ಚಿಸಿದೆ.ಶಾಲೆ ಮತ್ತು ಶಿಕ್ಷಣದ ಸಮಸ್ಯೆಗಳು ಕೂಡ ಕೋವಿಡ್‍ನಿಂದ ಹೆಚ್ಚಾಗಿದ್ದು ಸುಳ್ಳಲ್ಲ ಎಂದರು.

   ಬಾಲ್ಯವಿವಾಹ ತಪ್ಪು ಎನ್ನುವುದರ ಜೊತೆಗೆ ಅದಕ್ಕೆ ಕಾರಣವಾದ ಪರಿಸ್ಥಿತಿಯ ಅರಿವು ಹಾಗೂ ಪರಿಸ್ಥಿತಿಗೆ ಕಾರಣವಾದ ಪರಿಸ್ಥಿತಿಗೂ ಉತ್ತರ ನೀಡಬೇಕು.ದೊಡ್ಡವರು ಕೂಡ ಮಕ್ಕಳಾಗಿದ್ದರೆನ್ನುವುದು ಮರೆಯಬಾರದು ಎಂದು ಕರೆ ನೀಡಿದರು.

   ಸಂವಾದದಲ್ಲಿ ಹಿರಿಯ ಪತ್ರಕರ್ತೆಯರಾದ ಸಿ.ಜಿ. ಮಂಜುಳಾ,ಆರ್.ಪೂರ್ಣಿಮಾ,ಸಾಹಿತಿ ಡಾ.ವಿಜಯ,ಎಂ.ಪಿ. ಸುಶೀಲಾ, ಕೆ. ಎಚ್. ಸಾವಿತ್ರಿ, ನಿರ್ಮಲಾ ಯಲಿಗಾರ್, ಕೆ. ವೈ. ಜಯಂತಿ, ಬಿ.ಕೆ. ಕಿರಣ್ಮಯಿ ಮಾತನಾಡಿದರು. ಸಂಘದ ಕಾರ್ಯದರ್ಶಿ, ಮಾಲತಿಭಟ್ ಅತಿಥಿಗಳನ್ನು ಪರಿಚಯಿಸಿ,ಅಧ್ಯಕ್ಷೆ ಶಾಂತಲಾ ಧರ್ಮರಾಜ್ ಪ್ರಾಸ್ತಾವಿಕ ಮಾತನಾಡಿದರು.ಈ ಸಂದರ್ಭದಲ್ಲಿ ಪತ್ರಕರ್ತೆಯರಾದ ಸಂಧ್ಯಾ ಉರಣ್‍ಕರ್ ಸೊರಬ, ಪುಣ್ಯವತಿ,ಅಕ್ಷರಾ ಸೇರಿದಂತೆ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap