ಬಹುತ್ವದ ಭಾರತ ಉಳಿಸಿಕೊಳ್ಳುವುದು ಅವಶ್ಯ

ದಾವಣಗೆರೆ:

        ಬಹುಜನರ ಹಿತಕ್ಕಾಗಿ ಬಹುತ್ವದ ಭಾರತವನ್ನು ಉಳಿಸಿಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು ಮಾನವ ಹಕ್ಕುಗಳ ವೇದಿಕೆಯ ಕಾರ್ಯದರ್ಶಿ ಎಲ್.ಹೆಚ್.ಅರುಣ್‍ಕುಮಾರ್ ತಿಳಿಸಿದರು.

          ನಗರದ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಗುರುವಾರ ಪ್ರಗತಿಪರ, ನಾಗರೀಕ ಹಕ್ಕು ಮತ್ತು ಮಾನವ ಹಕ್ಕು ಸಂಘಟನೆಗಳ ಸಂಯುಕ್ತಾಶ್ರಯಲ್ಲಿ ಹಮ್ಮಿಕೊಂಡಿದ್ದ ಬಹುತ್ವದ ಭಾರತಕ್ಕಾಗಿ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿಸಿ ಜನಜಾಗೃತಿ ಆಂದೋಲನದ ಸಮಾಲೋಚನೆ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

         ಭಾರತವೆಂದರೆ ಬಹುತ್ವ. ಬಹುಜನರ ಹಿತಕ್ಕಾಗಿ ನಾವು ಬಹುತ್ವದ ಭಾರತವನ್ನು ಉಳಿಸಬೇಕಾದ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ದೊಡ್ಡ ಬಂಡವಾಳಶಾಹಿ ಸಂಸ್ಥೆಗಳಿಂದ ಮತ್ತು ಅವರ ಜತೆಯಲ್ಲಿರುವ ನಾಯಕರಿಂದ ಬದಲಾವಣೆ ಹಾಗೂ ಸಂವಿಧಾನ ರಕ್ಷಣೆ, ಭಾರತದ ಜನಸಾಮಾನ್ಯರ ಕಲ್ಯಾಣ ನಿರೀಕ್ಷಿಸಲು ಅಸಾಧ್ಯವಾಗಿದೆ ಎಂದರು.

        ಜನಸಾಮಾನ್ಯರಾದ ನಾವೇ ಸಂವಿಧಾನದತ್ತ ಹಕ್ಕು ಪಡೆಯಬೇಕು. ಸಂವಿಧಾನ ರಕ್ಷಿಸಿದರೆ. ಸಂವಿಧಾನ ನಮ್ಮನ್ನು ರಕ್ಷಿಸುತ್ತದೆ. ಸಂವಿಧಾನವನ್ನು ನಾವೆಲ್ಲರೂ ಸರಿಯಾದ ರೀತಿಯಲ್ಲಿ ಅರ್ಥೈಸಿ ಅದರಂತೆ ನಡೆದುಕೊಂಡೆರೆ ನಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು.

         ಸಂವಿಧಾನ, ರಾಷ್ಟ ಧ್ವಜ, ರಾಷ್ಟ್ರಗೀತೆಯನ್ನು ಗೌರವಿಸುವ ಮೂಲಕ ದೇಶದ ಸಾರ್ವಭೌಮತ್ವ, ಏಕತೆ, ಭಾತೃತ್ವವನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು, ಆ ಮೂಲಕ ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯಬೇಕು ಎಂದರು.

         ಪೀಪಲ್ಸ್ ಲಾಯರ್ಸ್ ಗಿಲ್ಡ್ ಅಧ್ಯಕ್ಷ ಅನೀಸ್ ಪಾಷಾ ಮಾತನಾಡಿ, ಮಾನವೀಯತೆಯ ವಿಶಾಲ ನೆಲೆಯಲ್ಲಿ ರಚಿಸಲ್ಪಟ್ಟ ಸಂವಿಧಾನವನ್ನು ಅನುಸರಿಸಿಕೊಂಡು ಬಾಳುವುದು ಈ ಕಾಲಘಟ್ಟದ ಬಹುದೊಡ್ಡ ಧರ್ಮವಾಗಿದೆ. ಸಂವಿಧಾನ ಅರಿತು ಅದರ ಆಶಯದಂತೆ ನಡೆಯುವ ಮೂಲಕ ನಾವು, ನೀವೆಲ್ಲರೂ ನೈಜ ಭಾರತೀಯರಾಗೋಣ ಎಂದು ಕರೆ ನೀಡಿದರು.

         ದಲಿತ ಸಂಘಟನೆಗಳ ಒಕ್ಕೂಟದ ಸಿ.ಬಸವರಾಜ್ ಮಾತನಾಡಿ, ಸಂವಿಧಾನವು ಆರ್ಥಿಕ, ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸಿದೆ. ಈಗ ಭಾರತದಲ್ಲಿ ಜನಸಾಮಾನ್ಯರ ಬದುಕು ದುಸ್ತರವಾಗುತ್ತಿದೆ. ಬದುಕಿಗೆ ಭದ್ರತೆ ಇಲ್ಲದಂತಾಗಿದೆ. ಭಾವನಾತ್ಮಕ ವಿಚಾರದ ಮೂಲಕ ಜನತೆ ದಾರಿ ತಪ್ಪಿಸುವ ಹುನ್ನಾರ ನಡೆದಿದೆ ಎಂದು ಕಳವಳಪಟ್ಟರು.

          ಸ್ಲಂ ಜನಾದೊಂಲನ ಕರ್ನಾಟಕದ ಜಿಲ್ಲಾ ಸಂಚಾಲಕಿ ರೇಣುಕಾ ಯಲ್ಲಮ್ಮ ಪ್ರಾಸ್ತಾವಿಕ ಮಾತನಾಡಿ, ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಉಳಿವಿಗಾಗಿ, ಜನಜಾಗೃತಿ ಆದೊಂಲನ ಹಾಗೂ ಜಾಥಾವನ್ನು ವಿವಿಧ ಸಂಘಟನೆಗಳ ಅಡಿಯಲ್ಲಿ ರಾಜ್ಯದಲ್ಲಿ ಪ್ರಾರಂಭಿಸಲಾಗಿದ್ದು, ಜನಸಾಮಾನ್ಯರಿಗೆ ಸಂವಿಧಾನ ನೀಡಿದ ಹಕ್ಕುಗಳು, ಕರ್ತವ್ಯಗಳ ಕುರಿತು ಜನಜಾಗೃತಿ ಮೂಡಿಸಲಾಗುವುದು ಎಂದರು.

          ಸಭೆಯಲ್ಲಿ ಸ್ಲಂ ಜನಾದೋಂಲನ ಸಂಘಟನೆಯ ಎಂ.ಶಬ್ಬೀರ್‍ಸಾಬ್, ದೇವೇಂದ್ರಪ್ಪ, ಮಂಜುನಾಥ್ ಯರಗುಂಟೆ, ಎಸ್.ಮರಿಯಪ್ಪ, ಸಾವಿತ್ರಿ ಬಾಪುಲೆ ಸಂಘಟನೆಯ ಸಾವಿತ್ರಮ್ಮ, ರಿಯಾನ್‍ಬಾನು, ಮುಬಾರಕ್, ದಲಿತ ಸಂಘರ್ಷ ಸಮಿತಿಯ ಮಲ್ಲೇಶ್ ಎನ್.ಕುಕ್ಕವಾಡ, ಕರ್ನಾಟಕ ರಾಜ್ಯ ರೈತ ಸಂಘದ ಅರುಣ್‍ಕುಮಾರ್ ಕುರುಡಿ, ಸಫಾಯಿ ಕರ್ಮಚಾರಿ ಸಂಘಟನೆಯ ಬಾಬಣ್ಣ ಡಿ.ಎಸ್., ಮ್ಯಾನ್ಯುಯಲ್ ಕ್ಸೆವೆಂಜಸ್ ಸಂಘಟನೆ ಹುಚ್ಚೆಂಗಪ್ಪ, ಎಚ್.ಮೂರ್ತಿ, ಜೈ ಹಿಂದ್ ಯೂತ್ ಆರ್ಗನೈಷನ ರಸೂಲ್ ಸಾಬ್ ಸೇರಿದಂತೆ ಇತರರು ಇದ್ದರು

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link