ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನವಿರೋಧಿ ನೀತಿ ವಿರುದ್ಧ ಪ್ರತಿಭಟಿಸಿ : ಹೆಚ್ ಡಿ ಕೆ

ಬೆಂಗಳೂರು

    ಪಕ್ಷದ ಬಲವರ್ಧನೆಗೆ ಕುಮಾರಸ್ವಾಮಿ ಅವರು ನೀಡಿದ ಯೋಜನೆಗಳು ಜನರನ್ನು ಮುಟ್ಟುವಂತೆ ಮಾಡಬೇಕು. ಕೇಂದ್ರ ಮತ್ತು ರಾಜ್ಯದ ಜನವಿರೋಧಿ ನೀತಿಗಳ ವಿರುದ್ಧ ಎಲ್ಲಾ ಮಟ್ಟದಲ್ಲಿಯೂ ಪ್ರತಿಭಟನೆ ನಡೆಸಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಕಾರ್ಯಕರ್ತರಿಗೆ ಕರೆ ನೀಡಿದರು.

    ಅರಮನೆ ಮೈದಾನದಲ್ಲಿ ನಡೆದ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಮೈತ್ರಿಸರ್ಕಾರ ಯಾವ ಕಾರಣಕ್ಕಾಗಿ ಬಿದ್ದು ಹೋಯಿತೆನ್ನುವುದು ಎಲ್ಲರಿಗೂ ತಿಳಿದ ವಿಚಾರವೇ. ಮೈತ್ರಿ ಸರ್ಕಾರ ಪತನ ಬಳಿಕ ಕಾರ್ಯಕರ್ತರು ಮುಖಂಡರ ಮನಸಿಗೆ ಸಹಜವಾಗಿಯೇ ನೋವಾಗಿದೆ. ಮೈತ್ರಿ ಸರ್ಕಾರದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಸಾಲಮನ್ನಾ, ಬಡವರ ಬಂಧು ಸೇರಿದಂತೆ ಹಲವಾರು ಜನಪರ ಯೋಜನೆಗಳನ್ನೂ ನೀಡಿದರೂ ಆ ಬಗ್ಗೆ ಜನಾಭಿಪ್ರಾಯ ಮೂಡಿಸುವಲ್ಲಿ ಪಕ್ಷ ಹಿಂದೆ ಬಿದ್ದಿದೆ. ಪಕ್ಷದ ಬಲವರ್ಧನೆಗೆ ಕುಮಾರಸ್ವಾಮಿ ಅವರು ನೀಡಿದ ಯೋಜನೆಗಳು ಜನರನ್ನು ಮುಟ್ಟುವಂತೆ ಮಾಡಬೇಕು. ಕೇಂದ್ರ ಮತ್ತು ರಾಜ್ಯದ ಜನವಿರೋಧಿ ನೀತಿಗಳ ವಿರುದ್ಧ ಎಲ್ಲಾ ಮಟ್ಟದಲ್ಲಿಯೂ ಪ್ರತಿಭಟನೆ ನಡೆಸಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

    ಮೇಲ್ಮನೆ ಸದಸ್ಯ ಬಿ.ಎಂ.ಫಾರೂಕ್, ಈ ದೇಶ ತೀರಾ ಸಂಕಷ್ಟದಲ್ಲಿದೆ. ಸಮಸ್ಯೆಗಳ ನಡುವೆ ಆರ್ಥಿಕ ಸಂಕಷ್ಟವೂ ಇದೆ. ದಾವೊಸ್‍ನಲ್ಲಿ ನಡೆದ ವಿಶ್ವ ಆರ್ಥಿಕ ಸಮ್ಮೇಳನದಲ್ಲಿ ಭಾರತ 151ನೇ ಸ್ಥಾನಕ್ಕೆ ಕುಸಿದಿದೆ ಎಂದು ಬೇಸರ ವ್ಯಕ್ತಪಡಿಸಿದರು.

     ಎನ್‍ಸಿಆರ್ ಎನ್‍ಪಿಆರ್‍ಗೆ ಜೋಡಿಸುವುದಿಲ್ಲ ಎಂದು ಹೇಳುವ ಕೇಂದ್ರ ಸರ್ಕಾರ, ಜನರ ತಂದೆ ತಾಯಿಗಳ ಮೂಲದ ಬಗ್ಗೆ ಮಾಹಿತಿ ಕೇಳುತ್ತಿರುವುದು ಏಕೆ?, ಸಿಎಎ ಜಾರಿ ಆಗುವುದಾದರೆ ಎಲ್ಲಾ ಧರ್ಮದವರಿಗೂ ಜಾರಿಯಾಗಲಿ. ಇದರಲ್ಲಿ ಧರ್ಮದ ತಾರತಮ್ಯ ಬೇಡ. ಕೆಲವರು ಇದನ್ನು ಹಿಂದೂ ಮುಸ್ಲಿಂ ಸಮಸ್ಯೆ ಎನ್ನುತ್ತಿದ್ದಾರೆ. ಮಂಗಳೂರಿನಲ್ಲಿ ನಡೆದ ಗಲಭೆಯಲ್ಲಿನ ನೈಜತೆ ಬಗ್ಗೆ ಕುಮಾರಸ್ವಾಮಿ ಪತ್ತೆ ಮಾಡಿ ಸತ್ಯವನ್ನು ಬಿಚ್ಚಿಟ್ಟಿದ್ದಾರೆ ಎಂದರು.

    ಕರ್ನಾಟಕದಲ್ಲಿ ಮುಸ್ಲಿಂರು ತಲೆ ಎತ್ತಿನಿಲ್ಲುವಂತೆ ಸಮಸ್ಯೆಗಳ ವಿರುದ್ಧ ಹೋರಾಟಕ್ಕೆ ನಿಲ್ಲುವಂತೆ ಕುಮಾರಸ್ವಾಮಿ ಶಕ್ತಿ ತುಂಬಿದ್ದಾರೆ.ಸಿಎಎ ಎನ್‍ಆರ್‍ಸಿ ಬಗ್ಗೆ ಲೋಕಸಭೆ ರಾಜ್ಯಸಭೆಯಲ್ಲಿ ವಿರೋಧಿಸಿದ್ದೇವೆ. ಮಂಗಳೂರು ಬಾಂಬ್ ಪ್ರಕರಣದ ಬಗ್ಗೆ ಬಿಜೆಪಿ ಏಕೆ ಬಾಯಿಬಿಡುತ್ತಿಲ್ಲ ಎಂದು ಪ್ರಶ್ನಿಸಿದರು.

     ಬಿ.ಎಂ.ಫಾರೂಖ್, ಕೋನರೆಡ್ಡಿ, ವೈ.ಎಸ್.ವಿದತ್ತಾ ತಲಾ ಒಂದರಂತೆ ಮಂಡಿಸಿದ ಮೂರು ನಿರ್ಣಯಗಳಿಗೆ ಬಿಬಿನಿಂಗಯ್ಯ,ಜಫ್ರುಲ್ಲಾ ಖಾನ್, ಕೆ.ಎನ್.ಶಿವಲಿಂಗೇಗೌಡ ಅನುಮೋದಿಸಿದರು.ಸಿಎಎ ಎನ್‍ಆರ್‍ಸಿ ಕಾನೂನಿಗೆ ತೀವ್ರವಿರೋಧಿಸಿ ಮಸೂದೆ ಹಿಂಪಡೆಯುವಂತೆ ಕೇಂದ್ರವನ್ನು ಒತ್ತಾಯಿಸುವುದು. ರಾಜ್ಯದಲ್ಲಿನ ನೆರೆಹಾವಳಿ ಸಂತ್ರಸ್ತರಿಗೆ ಬರಪೀಡಿತರಿಗೆ ಇನ್ನೂ ಹದಿನೈದು ದಿನಗಳಲ್ಲಿ ಕೇಂದ್ರ ಸರ್ಕಾರ ಸಮರ್ಪಕ ಪರಿಹಾರ ರಾಜ್ಯಕ್ಕೆ ಬರಬೇಕಾದ ಎನ್‍ಡಿಆರ್‍ಎಫ್ ನ ನ್ಯಾಯಪಾಲನ್ನು ಬಿಡುಗಡೆಗೊಳಿಸದಿದ್ದರೆ ಕೇಂದ್ರದ ವಿರುದ್ಧ ಪ್ರತಿಭಟನೆ ನಡೆಸುವುದು ಹಾಗೂ ಬೆಲೆ ಏರಿಕೆ ಆರ್ಥಿಕ ನೀತಿ ಕುಸಿತ,ನಿರುದ್ಯೋಗ ಸೇರಿದಂತೆ ಕೇಂದ್ರದ ಜನವಿರೋಧಿ ನೀತಿಗಳ ವಿರುದ್ಧ ಹೋರಾಟ ರೂಪಿಸುವ ಬಗ್ಗೆ ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap