ಐಎಂಎ ಪ್ರಕರಣ: ದೇಶಪಾಂಡೆ ಹೇಳಿಕೆ ಪರಿಗಣಿಸುವ ಅಗತ್ಯವಿದೆ: ದಿನೇಶ್ ಗುಂಡೂರಾವ್

ಬೆಂಗಳೂರು

       ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಸಚಿವ ಆರ್.ವಿ.ದೇಶಪಾಂಡೆ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

       ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು,ಸಚಿವ ಆರ್.ವಿ.ದೇಶಪಾಂಡೆ ಹಿರಿಯರು,ಕೆಪಿಸಿಸಿ ಅಧ್ಯಕ್ಷರೂ ಆಗಿದ್ದವರು.ಅವರ ಹೇಳಿಕೆ ಹಗುರವಾಗಿರಲ್ಲ.ಅದನ್ನು ಗಂಭೀರವಾಗಿ ಪರಿಗಣಿಸುತ್ತೇವೆ.ರೋಷನ್ ಬೇಗ್ ಹಿಂದೆಯೂ ನಮ್ಮ ಬಗ್ಗೆ ಗುರುತರ ಆರೋಪ ಮಾಡಿ ದ್ದಾರೆ.ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ.ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಂದ್ರೆ ರಾಹುಲ್ ಗಾಂಧಿ ಪ್ರತಿನಿಧಿ ಇದ್ದ ಹಾಗೇ. ರೋಷನ್ ಬೇಗ್ ವಿರುದ್ದ ಶಿಸ್ತು ಕ್ರಮ ತೆಗೆದುಕೊಳ್ಳಿ ಅಂತ ಎಐಸಿಸಿಗೆ ಕಳುಹಿಸಿದ್ದೇನೆ.

       ಐಎಂಎ ವಿಚಾರದ ಬಗ್ಗೆಯೂ ಎಐಸಿಸಿಗೆ ಕಳುಹಿಸಿಕೊಡ್ತೇವೆ. ಆಡಿಯೋ ವಿಚಾರ ಇರಬಹುದು,ಐಎಂಎ ಪ್ರಕರಣದಲ್ಲಿ ಹೆಸರು ಪ್ರಸ್ತಾಪ ಆಗಿರುವುದು ಎಲ್ಲವನ್ನೂ ದೆಹಲಿಗೆ ಕಳುಹಿಸಿಕೊಡ್ತೇನೆ. ರೋಷನ್ ಬೇಗ್ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳುವಂತೆ ಶಿಫಾರಸು ಮಾಡಿದ್ದೇವೆ ಎಂದರು.

        ನಿಗಮಮಂಡಳಿ ನೇಮಕದ ವಿಚಾರ ಚರ್ಚೆಯಾಗಿಲ್ಲ.ಸಂಪುಟ ವಿಸ್ತರಣೆ ಹಿನ್ನೆಲೆ ಯಾವೊಬ್ಬ ಶಾಸಕರೂ ಅಸಮಾಧಾನಗೊಂಡಿಲ್ಲ. ಯಾರು ಪಕ್ಷಕ್ಕೆ ನಿಷ್ಠರಾಗಿರುತ್ತಾರೋ ಅಂತವರನ್ನ ಸಂಪುಟ ಪುನರ್ ರಚನೆ ವೇಳೆ ಮಂತ್ರಿ ಮಾಡಲಾಗುವುದು.ಎಂಟು ತಿಂಗಳಲ್ಲಿ ಸಂಪುಟ ಪುನರಚನೆ ಮಾಡ್ತೇವೆ ಎಂದರು.

       ಇನ್ನು ನಟಿ ಹಾಗೂ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥರಾಗಿದ್ದ ರಮ್ಯ ಕೋಟಿ ಕೋಟಿ ಹಣ ಪಡೆದ ವಿಚಾರದ ಬಗ್ಗೆ ಮಾತನಾಡಿದ ಅವರು,ನನಗೆ ಈ ಕುರಿತು ಮಾಹಿತಿ ಇಲ್ಲ ಎಂದರು.

     ಸಿದ್ದರಾಮಯ್ಯ, ಪರಮೇಶ್ವರ್, ಡಿಕೆಶಿ ದೆಹಲಿಗೆ ತೆರಳಿರೋ ವಿಚಾರದ ಕುರಿತಾಗಿ ಮಾತನಾಡಿ,ಕಾಂಗ್ರೆಸ್‍ನಲ್ಲಿ ದೆಹಲಿಗೆ ಹೋಗೋದೇನೂ ಹೊಸದಲ್ಲ ಹಾಗೂ ದೊಡ್ಡ ವಿಚಾರವೂ ಅಲ್ಲ.ಎಐಸಿಸಿ ಅಧ್ಯಕ್ಷರು ಬಂದಿದ್ದಾರೆ.ಭೇಟಿ ಮಾಡಬಹುದು. ಅವರವರ ವೈಯಕ್ತಿಕ ಕಾರಣಗಳಿಗೆ ದೆಹಲಿಗೆ ಹೋಗಿರಬಹುದು ಎಂದು ವಿವರಿಸಿದರು.

     ಜಿಂದಾಲ್‍ಗೆ ಜಮೀನು ಪರಭಾರೆ ವಿಚಾರ ಕುರಿತು ಹೇಳಿದ ಅವರು,ಹಿಂದೆ ಯಡಿಯೂರಪ್ಪ ಹಣಕಾಸು ಸಚಿವರಾಗಿದ್ದ ವೇಳೆ ಸದಾನಂದ ಗೌಡರು ಸಿಎಂ ಆಗಿದ್ದರು ಆಗ ಈ ಒಪ್ಪಂದ ಆಗಿರೋದು.ಆನಂದ ಸಿಂಗ್ ವಿರೋಧ ವಿಚಾರ ಒಪ್ಪಂದ ಆದಾಗ ಆನಂದ ಸಿಂಗ್ ಅದೇ ಪಕ್ಷದಲ್ಲಿದ್ದರು.ಆನಂದ ಸಿಂಗ್ ಅಥವಾ ಅನಿಲ್ ಲಾಡ್ ಬಳಿ ಏನಾದ್ರೂ ಮಾಹಿತಿ ಇದ್ರೆ,ಸಂಪುಟ ಉಪ ಸಮಿತಿ ಮುಂದಿಡಲಿ ಎಂದು ಸಲಹೆ ಇತ್ತರು. ಸಮಿತಿ ಎಲ್ಲವನ್ನೂ ಪರಿಶೀಲಿಸಿ ವರದಿ ನೀಡಲಿದೆ. ಯಾರಿಗೂ ಅನ್ಯಾಯವಾಗಲ್ಲ ಎಂದು ಸ್ಪಷ್ಟಪಡಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap