ಇಂಗ್ಲಿಷ್ ನಿಂದಾಗಿ ಸೃಜನಸೀಲತೆ ಕಳೆದುಕೊಂಡೆವು: ಚಂದ್ರಶೇಖರ ಕಂಬಾರ

ಬೆಂಗಳೂರು

     ಭಾರತಕ್ಕೆ ಬಂದ ಬ್ರಿಟೀಷರು ಇಂಗ್ಲಿಷ್ ಪರಿಚಯಿಸಿ ಜನರಲ್ಲಿನ ಗೊಂದಲದ ಲಾಭ ಪಡೆದುಕೊಳ್ಳಲು ಯತ್ನಿಸಿದ್ದರಿಂದ ನಮ್ಮಲ್ಲಿನ ಜನ ನಾವು ನಮ್ಮತನ ಸೃಜನಶೀಲತೆ ಕಳೆದುಕೊಂಡೆವು ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ಅವರು ವಿಷಾದಿಸಿದರು.

      ಬಸವನಗುಡಿ ನ್ಯಾಶನಲ್ ಕಾಲೇಜು ಸಭಾಂಗಣದಲ್ಲಿ ಭಾನುವಾರ ಅಂಬಾ ಪ್ರಕಾಶನ ಆಯೋಜಿಸಿದ್ದ, ‘ಜೀವನ ರಾಗ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಇಂಗ್ಲಿಷರು ಇತಿಹಾಸದ ಕಲ್ಪನೆ ತಂದಿದ್ದರಿಂದ ನಾವು ನಮ್ಮತನ ಸೃಜನಶೀಲತೆ ಕಳೆದುಕೊಂಡವು ಎಂದರು

       ನಮಗೆ ಇತಿಹಾಸದ ಕಲ್ಪನೆ ಇರಲಿಲ್ಲ. ಮೊದಲ ಬಾರಿಗೆ ಇಂಗ್ಲಿಷರು ಇತಿಹಾಸದ ಕಲ್ಪನೆ ತಂದರು. ದೇಶದ ಜನರು ಗೊಂದಲದಲ್ಲಿದ್ದಾಗ ಇಂಗ್ಲಿಷ್ ಪರಿಚಯಿಸಿದರು. ಬಳಿಕ, ಇಂಗ್ಲಿಷ್‍ನಲ್ಲಿ ಕವಿತೆ ಸಾಹಿತ್ಯ ಬಂದವು. ಅದರಿಂದ ನಾವು ನಮ್ಮತನ ಸೃಜನಶೀಲತೆ ಕಳೆದುಕೊಂಡು ಅವರನ್ನು ಅನುಸರಿಸಲು ಪ್ರಯತ್ನಿಸಿದರು. ಆದರೆ, ಗಾಂಧಿ ಬಂದು ಒಂದು ದೇಶದ ಭಾವನೆ ಬಿತ್ತಿದರು ಎಂದು ವಿಶ್ಲೇಷಿಸಿದರು.

       ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕವಿ ಡಾ. ದೊಡ್ಡರಂಗೇಗೌಡ ಒಬ್ಬ ಸಂಕಲನಕಾರ, ತಂತ್ರಜ್ಞಾನಿ,ವಿಜ್ಞಾನಿಯನ್ನು ಸೃಷ್ಟಿಸಬಹುದು. ಆದರೆ, ಒಬ್ಬ ಕವಿ, ಸಾಹಿತಿ, ವಿಮರ್ಶಕನನ್ನು ತಾಂತ್ರಿಕ ದೃಷ್ಟಿಯಿಂದ ಸೃಷ್ಟಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

       ಕವಿತೆ ಹೃದಯದ ಆಂತರ್ಯದಲ್ಲಿರುತ್ತದೆ. ಅದನ್ನು ಹೊರತರುವ ಕಾರ್ಯವಾಗಬೇಕು ಎಂದ ಅವರು, ಕವಿತೆ ಆಂತರ್ಯದಿಂದ ಹುಟ್ಟಬೇಕು. ಕೆಣಕಿ, ತಿಣುಕಿ ಅಥವಾ ಇಣುಕಿ ಬರೆದಿದ್ದು ಕವಿತೆಯಾಗದು. ಸಹಜವಾಗಿ ಹೊರಹೊಮ್ಮಬೇಕು. ಅದೇ ಸುಂದರ ಭಾವಾಭಿವ್ಯಕ್ತಿ. ಅದನ್ನು ಬರೆದವರು ಜನಮಾನಸದಲ್ಲಿ ಉಳಿಯುತ್ತಾರೆ ಎಂದು ತಮ್ಮ ಕಾವ್ಯ ಜೀವನದ ಅನುಭವಗಳನ್ನು ಹಂಚಿಕೊಂಡರು.ಈ ಸಂದರ್ಭದಲ್ಲಿ ಡಾ.ಅಗ್ನಿ ಶೇಖರ್, ಅನುವಾದಕರ ಬಿ.ನರಸಿಂಹಮೂರ್ತಿ, ಉಷಾರಾಣಿ ರಾವ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link