ಕೋಲ್ಕತ್ತಾ:

ಕೆಲ ದಿನಗಳ ಹಿಂದೆ ನಟ ಅಕ್ಷಯ್ ಕುಮಾರ್ ಅವರೊಂದಿಗೆ ನಡೆದ ಸಂದರ್ಶನದಲ್ಲಿ ಮಮತಾ ಬ್ಯಾನರ್ಜಿ ಅವರು ನನಗೆ ಪ್ರತಿವರ್ಷ ಕುರ್ತಾ,ಸಿಹಿತಿಂಡಿಯನ್ನು ನನಗೆ ಉಡುಗೊರೆಯನ್ನಾಗಿ ಕಳಿಸುತ್ತಾರೆ ಎಂಬ ಮೋದಿ ಹೇಳಿಕೆಗೆ ಮಮತಾ ಬ್ಯಾನರ್ಜಿ ಅವರು ತೀಕ್ಷ್ಣ ಪ್ರತಿಕ್ರಿಯಿಸಿದ್ದಾರೆ.
ನಾವು ಅತಿಥಿಗಳಿಗೆ ಸಿಹಿತಿಂಡಿ ಮತ್ತು ಉಡುಗೊರೆ ಕೊಟ್ಟು ಸ್ವಾಗತಿಸುವುದು ನಮ್ಮ ಆಚಾರ , ಆದರೆ ಒಂದಂತೂ ನಿಜ ಬಿಜೆಪಿಗೆ ನಾವು ಮತ ಹಾಕುವುದಿಲ್ಲ ಎಂದು ಹೇಳಿದ್ದಾರೆ. ವಿಶೇಷ ಸಂದರ್ಭಗಳಲ್ಲಿ ಅತಿಥಿಗಳನ್ನು ವಿಶೇಷ ಉಡುಗೊರೆ ಕೊಟ್ಟು ಸ್ವಾಗತಿಸುವುದು ಬಂಗಾಳೀಯರ ಸಂಸ್ಕೃತಿ. ಆದರೆ ಬಿಜೆಪಿಗೆ ನಾವು ಮತ ಹಾಕುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಸೇರಾಂಪುರದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ವಿಶೇಷ ಸಂದರ್ಭಗಳಲ್ಲಿ, ಹಬ್ಬಗಳಲ್ಲಿ ಅತಿಥಿಗಳಿಗೆ ಶುಭಾಶಯ ಹೇಳುವುದು, ಉಡುಗೊರೆ ನೀಡುವುದು ಪಶ್ಚಿಮಬಂಗಾಳದ ಸಂಸ್ಕೃತಿ ಎಂದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
