ಬೆಂಗಳೂರು:
ರಾಹುಲ್ ಗಾಂಧಿಯನ್ನು ನಾನು ನಾಯಕನೆಂದು ಒಪ್ಪಲ್ಲ. ದೇಶದ ಪ್ರಧಾನಿ ಹುದ್ದೆಗೆ ರಾಹುಲ್ ಸೂಕ್ತ ವ್ಯಕ್ತಿಯಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಚಿವ ಎ.ಬಿ.ಮಾಲಕರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.ಕಲಬುರಗಿಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಪ್ರಧಾನಿ ಹುದ್ದೆ ನಿರ್ವಹಿಸಲು ಸಿದ್ಧತೆ ಮಾಡಿಕೊಂಡಿಲ್ಲ. ದೇಶದ ರಕ್ಷಣಾ ವಿಷಯದಲ್ಲಿ ನಾನು ಪ್ರಧಾನಿ ಮೋದಿಯನ್ನು ಬೆಂಬಲಿಸುತ್ತೇನೆ. ಮೋದಿಗೆ ಇರುವ ಪ್ರಧಾನಿ ಹುದ್ದೆಯ ಮೇಲಿನ ಹಿಡಿತ ರಾಹುಲ್ ಗಾಂಧಿಗೆ ಬರಲ್ಲ. ನಾನು ಪಕ್ಷ ಬಿಡುವ ಆಲೋಚನೆ ಮಾಡಿಲ್ಲ. ನನಗೆ ಯಾವುದೇ ಅಸಮಾಧಾನ ಇಲ್ಲ ಎಂದಿದ್ದಾರೆ.
ನನಗೆ ಆರೋಗ್ಯ ಸಮಸ್ಯೆ ಇರೋದ್ರಿಂದ ಚುನಾವಣೆ ಕಾರ್ಯಗಳಲ್ಲಿ ಭಾಗವಹಿಸಲಾಗುತ್ತಿಲ್ಲ. ನಾನು ಖರ್ಗೆ ಪರವಾಗಿಯೂ ಪ್ರಚಾರ ಮಾಡಲ್ಲ. ಪಕ್ಷದ ಪರವಾಗಿ ಪ್ರಚಾರ ಮಾಡುತ್ತೇನೆ. ಯಾಕೆಂದರೆ ಇತ್ತೀಚಿಗೆ ಕ್ಷೇತ್ರದಲ್ಲಿ ಖರ್ಗೆಯವರ ವರ್ಚಸ್ಸು ಕಡಿಮೆ ಆಗಿದೆ.
ಅದಕ್ಕಾಗಿ ಖರ್ಗೆ ಆಪ್ತರು ಅವರನ್ನು ಬಿಟ್ಟು ಹೋಗುತ್ತಿದ್ದಾರೆ.ನಾನು ಖರ್ಗೆಯ ನಾಯಕತ್ವ ಸಹ ಒಪ್ಪಲ್ಲ.ನಾನು ಸೋನಿಯಾ ಗಾಂಧಿಯಲ್ಲಿ ಕಂಡ ರಾಜಕೀಯ ಜಾಣ್ಮೆ ರಾಹುಲ್ ಗಾಂಧಿಯಲ್ಲಿ ಕಂಡಿಲ್ಲ.ಖರ್ಗೆ ಅವರು ನನ್ನನ್ನು ಲೀಡರ್ ಅಂತ ಒಪ್ಪಿಲ್ಲ ಎಂದು ಮಾಲಕರೆಡ್ಡಿ ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
