ಬಳ್ಳಾರಿ:
ಗಣಿನಾಡನ್ನು ಯಾವುದೇ ಕಾರಣಕ್ಕೂ ಇಭ್ಭಾಗ ಮಾಡಲು ಬಿಡಲ್ಲ. ಹೊಸಪೇಟೆ ಜಿಲ್ಲೆ ಮಾಡಿದ್ರೇ ಇದೊಂದು ತುಗಲಕ್ ದರ್ಬಾರ್ ಆಗುತ್ತದೆ. ಹೊಸ ಜಿಲ್ಲೆ ರಚನೆಗೆ ನಿಯೋಗದ ಜೊತೆಗೆ ಹೋದವರೆಲ್ಲ ಸ್ವಾರ್ಥಿಗಳು ಯಾರದ್ದೋ ಸ್ಚಾರ್ಥಕ್ಕೆ ವಿಜಯನಗರ ಜಿಲ್ಲೆ ಮಾಡ್ತಿದ್ದಾರೆ ಎಂದು ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಆನಂದ್ ಸಿಂಗ್ ಪ್ರಯತ್ನಕ್ಕೆ ಟಾಂಗ್ ಕೊಟ್ಟಿದ್ದಾರೆ.
ಅವರಿಂದು ನಗರದಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿ ಶ್ರೀರಾಮುಲು ಅವರಂತೆ ಆಖಂಡ ಬಳ್ಳಾರಿ ಜಿಲ್ಲೆಗೆ ಅವರು ಆಗ್ರಹಿಸಿದ್ದಾರೆ.
ಬೇಕಾದರೆ ಬಳ್ಳಾರಿ ಜಿಲ್ಲೆಗೆ ವಿಜಯನಗರವೆಂದು ನಾಮಕರಣ ಮಾಡಲಿ ಎಂದ ಅವರು, ಬೆಳಗಾವಿ ಜಿಲ್ಲೆಯಲ್ಲಿ ಯಲ್ಲಿ 18 ತಾಲೂಕುಗಳಿವೆ. ಆಂದ್ರ ಪ್ರದೇಶದ ಆನಂತಪುರಂ, ಕರ್ನೂಲ್ ಜಿಲ್ಲೆಗಳು ಮುನ್ನೂರು ಕಿ.ಮಿ. ವಿಸ್ತಿರ್ಣ ಹೊಂದಿವೆ. ಅವರಗಿಲ್ಲದ ತೊಂದರೆ ನಮಗೆ ಬಂದಿದೆಯಾ ಎಂದರು. ಬೆಳಗಾವಿ ಜಿಲ್ಲೆ ಯಾಕೆ ವಿಭಜನೆ ಮಾಡ್ತಿಲ್ಲ ಎಂದ ಅವರು ಈ ಬಗ್ಗೆ ಮುಖ್ಯಮಂತ್ರಿ ಬಳಿ ತರಾತುರಿಯಲ್ಲಿ ಘೋಷಣೆ ಮಾಡದಂತೆ ಮನವಿ ಮಾಡುವೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ