ಮುಂಬರುವ ಚುನಾವಣೆಗೆ ಪಕ್ಷದ ಬಲವರ್ಧನೆಗಾಗಿ ಕಾರ್ಯಕರ್ತರ ಸಭೆ : ಕಾಂತರಾಜು

ತಿಪಟೂರು

          ಲೋಕ ಸಂಪರ್ಕ ಅಭಿಯಾನ ಕಾರ್ಯಕ್ರಮದ ಅನುಷ್ಠಾನದ ಜೊತೆಗೆ ಮುಂಬರುವ ಲೋಕಸಭಾ ಮತ್ತು ನಗರಸಭಾ ಚುನಾವಣೆಯ ಸಲುವಾಗಿ ಪಕ್ಷವನ್ನು ಬಲವರ್ಧನೆಗಾಗಿ ಕಾರ್ಯಕರ್ತರ ಸಭೆಯನ್ನು ಡಿ.23 ರಂದು ನಡೆಸಲಾಗುವುದು ಎಂದು ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎನ್.ಕಾಂತರಾಜು ತಿಳಿಸಿದರು.

          ನಗರದ ಪ್ರವಾಸಿ ಮಂದಿರದಲ್ಲಿ ತಾಲ್ಲೂಕು ಕಾಂಗ್ರೆಸ್(ಐ) ಸಮಿತಿಯ ವತಿಯಿಂದ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ರಾಷ್ಟ್ರೀಯ ಮಟ್ಟದಿಂದ ಗ್ರಾಮಗಳ ಮಟ್ಟದವರೆಗೂ ಪಕ್ಷವನ್ನು ಬಲವರ್ಧನೆ ಮಾಡುವ ಸಲುವಾಗಿ ಹಲವಾರು ಯೋಜನೆಗಳನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಜಾರಿಗೆ ತಂದಿದ್ದು ಅವುಗಳ ಅನುಷ್ಠಾನದ ಸಲುವಾಗಿ ಕಾರ್ಯಕರ್ತರ ಸಭೆಯನ್ನು ಕರೆಯಲಾಗಿದೆ.

         ಸಭೆಯಲ್ಲಿ ಲೋಕ ಸಂಪರ್ಕ ಅಭಿಯಾನ ಕಾರ್ಯಕ್ರಮದ ಅನುಷ್ಠಾನ, ಪ್ರತಿಬೂತ್‍ಗೆ 10 ಸಹಯೋಗಿಗಳನ್ನ ನೇಮಕ ಮಾಡುವುದು, ನಿಧಿ ಸಂಗ್ರಹ, ಮುಂಬರುವ ಲೋಕಸಭೆ, ತಿಪಟೂರು ನಗರಸಭಾ ಚುನಾವಣೆಯ ಬಗ್ಗೆ ಪಕ್ಷವನ್ನು ಸಜ್ಜುಗೊಳಿಸುವ ಬಗ್ಗೆ, ಶಕ್ತಿ ಯೋಜನೆಯ ಮೂಲಕ ಕಾರ್ಯಕರ್ತರ ನೋಂದಣಿ ಅಭಿಯಾನಕ್ಕೆ ಚಾಲನೆಯನ್ನು ನೀಡಲಾಗುವುದು. ಸಭೆಯ ಅಧ್ಯಕ್ಷತೆಯನ್ನು ತುಮಕೂರಿನ ಜಿಲ್ಲಾ ಕಾಂಗ್ರೆಸ್‍ನ ಜಿಲ್ಲಾಧ್ಯಕ್ಷ ಆರ್.ರಾಮಕೃಷ್ಣ, ಉದ್ಘಾಟನೆಯನ್ನು ಸಂಸದ ಮುದ್ದಹನುಮೇಗೌಡ, ಸಭೆಯ ನೇತೃತ್ವವನ್ನು ಮಾಜಿ ಶಾಸಕ ಕೆ.ಷಡಕ್ಷರಿ ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ವಿಧಾನಪರಿಷತ್ ಸದಸ್ಯ ವೇಣುಗೋಪಾಲ್, ತುಳಸೀರಾಮ್ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ತಿಪಟೂರು ನಗರ ಕಾಂಗ್ರೆಸ್ ಅಧ್ಯಕ್ಷರಾಗಿ ಟಿ.ಎನ್.ಪ್ರಕಾಶ್‍ರನ್ನು ಪದಗ್ರಹಣ ಮಾಡುವ ಸಮರಂಭವು ನಡೆಯಲಿದೆ ಎಂದು ತಿಳಿಸಿದರು.

         ಈ ಸಂದರ್ಭದಲ್ಲಿ ತಾ.ಪಂ.ಅಧ್ಯಕ್ಷ ಎಂ.ಎನ್.ಸುರೇಶ್, ಸ್ಥಾಯಿಸಮಿತಿ ಅದ್ಯಕ್ಷ ಎಂ.ಡಿ.ರವಿಕುಮಾರ್, ಎಪಿಎಂಸಿ ಅಧ್ಯಕ್ಷ ರವೀಶ್, ವಕ್ತಾರ ಸದಾಶಿವಯ್ಯ, ಮುಖಂಡರುಗಳಾದ ಎಪಿಎಂಸಿ ನಿರ್ದೇಶಕ ಕಾಂತರಾಜು, ಕಿರಣ್ ಅಯ್ಯನಬಾವಿ, ಮಂಜುನಾಥ್ ಸೇರಿದಂತೆ ಮತ್ತಿತರರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link