ಇಸ್ಲಾಮಾಬಾದ್:
ನೆರೆಯ ಪಾಕಿಸ್ಥಾನದಲ್ಲಿ ಆರ್ಥಿಕ ಹಿಂಜರಿತದೊಂದಿಗೆ ಆಹಾರ ಅಭದ್ರತೆ ತಲೆದೋರಿರುವ ಸಮಯದಲ್ಲಿ ಗಡಿ ನಿಯಂತ್ರಣಾ ರೇಖೆ ಮತ್ತು ಗಡಿ ಜಿಲ್ಲೆಗಳ ಪರ್ಯಟನೆ ಮಾಡುತ್ತಿರುವ ಬಜ್ವಾ ಅವರು ಕಾಶ್ಮೀರ ವಿಷಯದಲ್ಲಿ ಎಂದಿಗೂ ಪಾಕಿಸ್ಥಾನ ರಾಜಿ ಆಗುವುದಿಲ್ಲ ಎಂದು ಹೇಳಿದ್ದಾರೆ .
ಪಾಕ್ ಸೈನಿಕರನ್ನುದ್ದೇಶಿಸಿ ಮಾತನಾಡುವವಾಗ ಅವರು, ಏನೇ ಆದರೂ ಕಾಶ್ಮೀರ ವಿಷಯದಲ್ಲಿ ರಾಜಿ ಆಗುವುದಿಲ್ಲ,ನಮ್ಮ ಸಹನೆಯನ್ನು ದೌರ್ಬಲ್ಯ ಎಂದು ತಪ್ಪಾಗಿ ಭಾವಿಸಬಾರದು ಎಂದು ಅವರು ಭಾರತಕ್ಕೆ ಎಚ್ಚರಿಕೆ ನೀಡಿದ್ದಾರೆ.ನಮ್ಮ ತಾಯಿನಾಡಿನ ರಕ್ಷಣೆಗಾಗಿ ಯಾವುದೇ ಕ್ರಮ ಕೈಗೊಳ್ಳಲು ನಾವು ಸಮರ್ಥ ಮತ್ತು ಸಂಪೂರ್ಣವಾಗಿ ಸಿದ್ಧರಾಗಿದ್ದೇವೆ ಎಂದು ಅವರು ಹೇಳಿದ್ದಾರೆ.
ಆಗಸ್ಟ್ ನಲ್ಲಿ ಜಮ್ಮು- ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ನಂತರ ಭಾರತ ಹಾಗೂ ಪಾಕಿಸ್ತಾನ ನಡುವಣ ಸಂಬಂಧ ಮತ್ತಷ್ಟು ಹದಗೆಟ್ಟಿದೆ. ಭಾರತ ಸರ್ಕಾರದ ನಡೆ ವಿರುದ್ಧ ಪಾಕಿಸ್ತಾನ ಆಕ್ರೋಶಗೊಂಡಿದ್ದು, ಭಾರತದೊಂದಿಗೆ ರಾಯಬಾರಿ ಸಂಬಂಧ ಕಡಿದುಕೊಂಡ ನಂತರ ಪಾಕಿಸ್ತಾನದಲ್ಲಿನ ಭಾರತದ ಹೈ ಕಮೀಷನರ್ ಅವರನ್ನು ಉಚ್ಚಾಟನೆ ಮಾಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
