ಚಿತ್ರದುರ್ಗ:
ಹನ್ನೆರಡನೇ ಶತಮಾನದಲ್ಲಿ ಸಮಾನತೆಯ ಸಂದೇಶ ಸಾರಿದ ಬಸವಣ್ಣನವರ ತತ್ವದ ಮೇಲೆ ಡಾ.ಬಿ.ಆರ್.ಅಂಬೇಡ್ಕರ್ ರಚಿಸಿರುವ ಸಂವಿಧಾನವನ್ನು ದೇಶದ ಪ್ರತಿಯೊಬ್ಬರು ಗೌರವಿಸಬೇಕಾಗಿದೆ. ಯಾವುದೆ ಕಾರಣಕ್ಕೂ ಸಂವಿಧಾನ ಕೋಮುವಾದಿಗಳ ಕೈಗೆ ಸಿಗಲು ಬಿಡಬಾರದು ಎಂದು ಸಂಸದ ಬಿ.ಎನ್.ಚಂದ್ರಪ್ಪ ಹೇಳಿದರು.
ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪೋಲಿಸ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ನಗರಸಭೆ, ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗಗಳ ದೌರ್ಜನ್ಯ ತಡೆ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ಪರಿಶಿಷ್ಟ ಜಾತಿ/ವರ್ಗಗಳ ಜನರ ಮೇಲಿನ ದೌರ್ಜನ್ಯ ತಡೆಕಾಯ್ದೆ-1989 ಮತ್ತು ಅಸ್ಪøಶ್ಯತೆ ನಿವಾರಣೆ ಕುರಿತು ಬಂಜಾರ ಭವನದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ವಿಚಾರ ಸಂಕಿರಣ ಮತ್ತು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
1989 ರಲ್ಲಿ ಅಸ್ಪøಶ್ಯತೆ ನಿವಾರಣಾ ಕಾಯ್ದೆ ಜಾರಿಗೆ ತರಲಾಯಿತು. ಯಾವುದೇ ಸರ್ಕಾರ ಅಧಿಕಾರದಲ್ಲಿರಲಿ ಅಂಬೇಡ್ಕರ್ ದೇಶಕ್ಕೆ ಕೊಡುಗೆಯಾಗಿ ನೀಡಿರುವ ಸಂವಿಧಾನ ಎಷ್ಟರ ಮಟ್ಟಿಗೆ ಜಾರಿಗೆ ತಂದಿದೆ ಎನ್ನುವುದು ಬಹಳ ಮುಖ್ಯ. ವಿಶ್ವವೇ ಮೆಚ್ಚುವಂತ ಸಂವಿಧಾನವನ್ನು ಅಂಬೇಡ್ಕರ್ ಕೊಡುಗೆಯಾಗಿ ನೀಡಿದ್ದಾರೆ. ಪ್ರಜಾತಂತ್ರದಲ್ಲಿ ಅಂಬೇಡ್ಕರ್ ಸಮಾನತೆಯನ್ನು ಒತ್ತಿ ಹೇಳಿದ್ದಾರೆ. ಸಮಾನತೆ ಇಲ್ಲದ ಸ್ವಾತಂತ್ರ್ಯ ಸ್ವಾತಂತ್ರವೇ ಅಲ್ಲ ಎನ್ನುವುದು ಅಂಬೇಡ್ಕರ್‍ರವರ ಆಸೆಯಾಗಿತ್ತು. ವಿದ್ಯಾರ್ಥಿಗಳು ಅಂಬೇಡ್ಕರ್ ವಿಚಾರಗಳನ್ನು ತಿಳಿದುಕೊಂಡು ಸಂವಿಧಾನವನ್ನು ಗೌರವಿಸಬೇಕು ಎಂದು ತಿಳಿಸಿದರು.
ನೀವುಗಳು ಎಷ್ಟೆ ಪದವಿ ಪಡೆದು ಎಂತಹ ದೊಡ್ಡ ಹುದ್ದೆಯನ್ನು ಏರಿದರು ಜೀವನದಲ್ಲಿ ಸಂಸ್ಕಾರವಿಲ್ಲದಿದ್ದರೆ ಏನು ಪ್ರಯೋಜನವಿಲ್ಲ. ಡಿಗ್ರಿಗಳಿಗಿಂತ ಸಂಸ್ಕಾರ, ಸಂಸ್ಕøತಿ ಬಹಳ ಮುಖ್ಯವಾದುದು. ಗುರು-ಹಿರಿಯರು, ತಂದೆ-ತಾಯಿಗಳನ್ನು ಗೌರವದಿಂದ ಕಾಣಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ವಿಚಾರ ಸಂಕಿರಣ ಮತ್ತು ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಮಾತನಾಡುತ್ತ ಅಂಬೇಡ್ಕರ್ ಸಾಕಷ್ಟು ಅವಮಾನ, ನೋವು, ಸಂಕಟಗಳನ್ನು ಅನುಭವಿಸಿ ಹೋರಾಟದ ಮೂಲಕ ಸಂವಿಧಾನ ರಚಿಸಿ ದೇಶಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಸ್ವಾತಂತ್ರ ಪೂರ್ವದಲ್ಲಿ ಅಂಬೇಡ್ಕರ್ ಕೂಡ ದೇಶಕ್ಕಾಗಿ ಹೋರಾಡಿದ ಮಹಾನ್ ನಾಯಕ. ಕೇವಲ ದಲಿತರಿಗಷ್ಟೆ ಅಂಬೇಢ್ಕರ್ ಸಂವಿಧಾನ ನೀಡಿಲ್ಲ. ಈ ದೇಶದ ಪ್ರತಿಯೊಬ್ಬರಿಗೂ ಸಂವಿಧಾನದಲ್ಲಿ ರಕ್ಷಣೆ ಮತ್ತು ಸಮಾನತೆ ಇದೆ. ಅದರ ಫಲವಾಗಿ ಇಂದು ನಾವುಗಳು ಅಧಿಕಾರದಲ್ಲಿದ್ದೇವೆ. ಅದೇ ರೀತಿ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಅನೇಕ ಸೌಲಭ್ಯಗಳು ಸಿಗುತ್ತಿವೆ ಎನ್ನುವುದಾದರೆ ಅಂದಕ್ಕೆ ಅಂಬೇಡ್ಕರ್‍ರವರ ಸಂವಿಧಾನ ಕಾರಣ ಎಂದರು.
ದೇಶಕ್ಕೆ ಸಂವಿಧಾನವನ್ನು ಕೊಟ್ಟ ಅಂಬೇಡ್ಕರ್ ಪ್ರಥಮ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದಾಗ ಕಾಂಗ್ರೆಸ್‍ನವರು ಎದುರಾಳಿಯನ್ನು ಸ್ಪರ್ಧೆಗಿಳಿಸಿ ಅಂಬೇಡ್ಕರ್‍ರವರನ್ನು ಸೋಲಿಸಿದ್ದು, ದೊಡ್ಡ ದುರಂತ. ದಲಿತರ ಮೇಲೆ ಇಂದಿಗೂ ಕೆಲವು ಕಡೆ ದೌರ್ಜನ್ಯ, ಅಸ್ಪøಶ್ಯತೆ ನಡೆಯುತ್ತಿದೆ. ಹಳ್ಳಿಗಳಲ್ಲಿ ದಲಿತರಿಗೆ ಕ್ಷೌರ ಮಾಡುತ್ತಿಲ್ಲ.
ಹೋಟೆಲ್‍ಗಳಲ್ಲಿ ಕುಡಿಯಲು ಚಹ ಕೊಡುವುದಿಲ್ಲ. ತಲೆ ಮೇಲೆ ಮಲ ಹೊರುವ ಪದ್ದತಿಯನ್ನು ಭಾರತದಲ್ಲಿ ಮೊದಲು ಜಾರಿಗೆ ತಂದವರು ಬಸವಲಿಂಗಪ್ಪನವರು. ದಿವಂಗತ ಡಿ.ದೇವರಾಜ್ ಅರಸ್‍ರವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಪ್ರಭಾವಿ ಸಚಿವರಾಗಿದ್ದ ಬಸವಲಿಂಗಪ್ಪನವರು ದಿಟ್ಟ ನಿರ್ಧಾರ ಕೈಗೊಂಡರು ಎಂದು ಗುಣಗಾನ ಮಾಡಿದರು.
ಜಾತಿ ನಿಂದನೆ ಕೇಸಿನಲ್ಲಿ ಇದುವರೆವಿಗೂ ಯಾರು ಜೈಲಿಗೆ ಹೋದ ಉದಾಹರಣೆಗಳಿಲ್ಲ. ಹೊಂದಾಣಿಕೆ ಮಾಡಿಕೊಂಡು ಸುಮ್ಮನಾಗುವುದೇ ಇದಕ್ಕೆ ಕಾರಣವಿರಬಹುದು. ಕಾನೂನು ಇದ್ದರೂ ದಲಿತರ ಮೇಲಿನ ದಬ್ಬಾಳಿಕೆ, ದೌರ್ಜನ್ಯ ನಿಂತಿಲ್ಲ. ಕೆಲವೊಮ್ಮೆ ಅನಾವಶ್ಯಕವಾಗಿ ಜಾತಿ ನಿಂದನೆ ಸುಳ್ಳು ಕೇಸುಗಳನ್ನು ಕೊಡುವುದುಂಟು ಅದು ನಿಲ್ಲಬೇಕು. ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ಡಾ.ಬಾಬು ಜಗಜೀವನರಾಂರಂತಹ ಮಹಾನ್ ನಾಯಕರುಗಳ ತ್ಯಾಗದ ಫಲವಾಗಿ ಇಂದು ನಾವುಗಳೆಲ್ಲಾ ಅಧಿಕಾರ ಅನುಭವಿಸುತ್ತಿದ್ದೇವೆ. ರಾಜಕೀಯ, ಜಾತಿಗಿಂತ ಮೊದಲು ದೇಶ ಮುಖ್ಯ. ವಿದ್ಯಾರ್ಥಿಗಳು ಇಂತಹ ವಿಚಾರಗಳನ್ನೆಲ್ಲಾ ತಿಳಿದುಕೊಂಡು ರಾಷ್ಟ್ರದ ಹಿತಚಿಂತಕರಾಗಿ ಎಂದು ಹೇಳಿದರು.
ಉಪನ್ಯಾಸಕ ಗುರುನಾಥ್, ಸಮಾಜ ಕಲ್ಯಾಣ ಇಲಾಖೆ ತಾಲೂಕು ಅಧಿಕಾರಿ ಓ.ಪರಮೇಶ್ವರಪ್ಪ, ತಹಶೀಲ್ದಾರ್ ನಾಹೀದ,
ಪತ್ರಕರ್ತ ನರೇನಹಳ್ಳಿ ಅರುಣ್‍ಕುಮಾರ್, ಕಾಂಗ್ರೆಸ್ ಮುಖಂಡ ಹನುಮಲಿ ಷಣ್ಮುಖಪ್ಪ, ಆರ್.ವಿಶ್ವಸಾಗರ್ ಇನ್ನು ಮುಂತಾದವರು ವೇದಿಕೆಯಲ್ಲಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
