ಕುಖ್ಯಾತ ಜೇಬು ಕಳ್ಳರ ಬಂಧನ..!

ಬೆಂಗಳೂರು

     ಪ್ರಯಾಣಿಕರ ಸೋಗಿ ಜನ ನಿಬಿಡ ಬಸ್ ನಿಲ್ದಾಣಗಳಲ್ಲಿ ನಿಂತು ಇಲ್ಲವೇ ಜನಸಂದಣಿಯ ಬಸ್‌ಗಳಲ್ಲಿ ಸಂಚರಿಸುತ್ತಾ ಮೊಬೈಲ್ ಕಳವು ಮಾಡುತ್ತಿದ್ದ ಕುಖ್ಯಾತ ಜೇಬು ಕಳ್ಳರಿಬ್ಬರನ್ನು ಬಂಧಿಸಿ ವಿವಿಧ ಕಂಪನಿಯ 103 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳುವಲ್ಲಿ ಈಶಾನ್ಯ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.

    ಬಂಧಿತ ಆರೋಪಿಗಳಾದ ಗಂಗಾನಗರದ ಸೈಯದ್ ಮೆಹರಾನ್ (22), ಶರತ್‌ಕುಮಾರ್ (22)ನಿಂದ 15 ಲಕ್ಷ ಮೌಲ್ಯದ ವಿವಿಧ ಕಂಪನಿಯ 103 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಡಾ. ಭೀಮಾಶಂಕರ್ ಗುಳೇದ್ ತಿಳಿಸಿದ್ದಾರೆ.ಆರೋಪಿಗಳ ಗ್ಯಾಂಗ್‌ನಲ್ಲಿದ್ದ ಆಂಧ್ರ ಪ್ರದೇಶದ ಅನಂತ್‌ಪುರ ರಘು ಅಲಿಯಾಸ್ ಸಿಂಹಾದ್ರಿ ತಲೆ ಮರೆಸಿಕೊಂಡಿದ್ದು, ಆತನ ಪತ್ತೆಯಾಗಿ ಶೋಧ ನಡೆಸಲಾಗಿದೆ. ಈ ಮೂವರು ಗ್ಯಾಂಗ್ ಕಟ್ಟಿಕೊಂಡು ಬಿಎಂಟಿಸಿ ಬಸ್‌ಗಳಲ್ಲಿ ಸಂಚರಿಸುತ್ತ ಮೊಬೈಲ್ ಜೇಬುಗಳವು ಮಾಡುತ್ತಿದ್ದರು.

    ಅಲ್ಲದೆ ಜನನಿಬಿಡ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಸೋಗಿನಲ್ಲಿ ನಿಂತು ಸಾರ್ವಜನಿಕರ ಗಮನ ಬೇರೆಡೆ ಸೆಳೆದು ಮೊಬೈಲ್ ಕಳವು ಮಾಡಿ ಪರಾರಿಯಾಗುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ಕೈಗೊಂಡ ಕೊಡಿಗೇಹಳ್ಳಿ ಪೊಲೀಸ್ ಇನ್ಸ್‌ಪೆಕ್ಟರ್ ಚೇತನ್ ಕುಮಾರ್ ಮತ್ತವರ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಭೀಮಾಶಂಕರ್ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link