ಕುಣಿಗಲ್ :ವರದಿ:ಎಂ.ಡಿ. ಮೋಹನ್
ಜನರಿಗೆ ಕುಡಿಯುವ ನೀರು ಪೂರೈಕೆ ಮಾಡಲು ವಿವಿಧ ಯೋಜನೆಗಳನ್ನ ಸರ್ಕಾರಗಳು ರೂಪಿಸಿದ್ದರೂ ಸಮರ್ಪಕವಾಗಿ ಪ್ರಯೋಜನವಾಗುತ್ತಿಲ್ಲ ಎಂಬುದನ್ನ ಈ ದೃಶ್ಯದಿಂದ ಕಾಣಬಹುದಾಗಿದೆ.
ಕುಣಿಗಲ್ ತಾಲ್ಲೂಕು ಶಕ್ತಿ ಕೇಂದ್ರವೇ ಆದ ತಾಲ್ಲೂಕು ಕಚೇರಿಯ ಆವರಣದಲ್ಲಿ ಕುಡಿಯುವ ನೀರಿಗಾಗಿ ಸಾರ್ವಜನಿಕರು ನಿತ್ಯ ಪರದಾಡುವ ದೃಶ್ಯ ಸಾಮಾನ್ಯವಾಗಿದೆ.
ಸುಮಾರು ನಾಲ್ಕೈದು ವರ್ಷಗಳಿಂದೆ ಕುಣಿಗಲ್ ತಾಲ್ಲೂಕು ಕಚೇರಿ ಮುದೆ ಬೇಸಿಗೆಯ ದಣಿವು ನೀಗಿಸುವ ದೃಷ್ಠಿಯಿಚಿದ ಮಾದ್ಯಮಗಳು ಬರೆದು ಎಚ್ಚರಿಕೆ ನೀಡಿದ ನಚಿತರ ಅಂದು ಪುರಸಭಾ ಆಡಳಿತಾಧಿಕಾರಿಯಾಗಿದ್ದ ಉಪವಿಭಾಗಾಧಿಕಾರಿ ಆನಂದ್ ಎಂಬುವರು ತಾಲ್ಲೂಕು ಕಚೇರಿಯ ಮುಂದೆ ಶುದ್ಧ ಕುಡಿಯುವ ನೀರಿನ ಮಿನಿ ಫಿಲ್ಟರ್ ವ್ಯವಸ್ಥೆಯನ್ನ ಮಾಡಿ ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಕೆ ಮಾಡಿದ್ದರು. ಆದರೆ ಇದು ಸಮರ್ಪಕವಾಗಿ ಕೇವಲ ಒಂದೆರೆಡು ವರ್ಷ ಮಾತ್ರ ಜನರಿಗೆ ನೀರು ನೀಡುತ್ತಿದ್ದ ಈ ಮಿನಿ ಶುದ್ಧ ನೀರಿನ ಘಟಕ ಅದ್ಯಾವ ದೃಷ್ಠಿ ಬಿತ್ತೋ ಗೊತ್ತಿಲ್ಲಪ್ಪಾ ಇದ್ದಕ್ಕಿದಂತೆ ಕೆಟ್ಟು ನಿಂತು ಹೋಯಿತು.
ಆದರೆ ಇದು ಕೆಟ್ಟು ವರ್ಷಗಳೇ ಕಳೆದರೂ ಯಾಕೋ ಏನೋ ರಿಪೇರಿ ಆಗಿಲ್ಲಾ ಎಂದು ದೂರುವ ಸಾರ್ವಜನಿಕರು ನೋಡಿ ಸ್ವಾಮಿ ಆ ಅಮ್ಮಾ ಮಗಳು ತಾಲ್ಲೂಕು ಕಚೇರಿ ಕೆಲಸಕ್ಕೆ ಬಂದಿದ್ದಾರೆ. ಕುಡಿಯುವ ನೀರು ಸಿಗದೇ ಪರದಾಡುತ್ತಿದ್ದಾರೆ ನೀವೇ ನೋಡಿ ಪೇಪರ್ನೋರ್ ! ಏಕೆ ಸುಮ್ಮನಿದ್ದೀರಿ ಬರೆದು ಇದನ್ನ ಸರಿಪಡಿಸಿ ಇಲ್ಲವೇ ಬೇರೆ ಪರಿಯಾಯ ವ್ಯವಸ್ಥೆ ಮಾಡಿಸಿ ಎಂದು ಗೊಟ್ಟೀಕೆರೆಯವಾಸಿ ಚಿಕ್ಕಗಂಗಯ್ಯ ಎಂಬುವರು ಅಲ್ಲೇ ನೋಡಿದ ದೃಶ್ಯದಿಂದ ಬೇಸರ ಗೊಂಡು ಪತ್ರಿಕೆಗೆ ದೂರಿದ ಪ್ರಸಂಗ ನಡೆಯಿತು.
ನೀರು ಕುಡಿಯಲು ಬಂದ ತಾಯಿ ಮಗಳು ನೀರು ಬರದಿದ್ದರಿಂದ ಪರದಾಡುತ್ತ ಎಲ್ಲಿದೆ ನೀರು ಕುಡಿಯೋಕೆ ನೀರಿಲ್ಲಾ ಸಾ ಬೆಳಿಗ್ಗೆ ಬಂದಿದ್ದು ಜಮೀನು ಕೆಲಸಕ್ಕೆಂದು ಮಗಳಿಗೆ ಮನೆಯಿಚಿದ ತಂದಿದ್ದ ನೀರು ಮುಗಿಯಿತು ಈ ಟ್ಯಾಂಕ್ ನೋಡಿದರೆ ನೀರೇ ಬರುತ್ತಿಲ್ಲಾ ಎಲ್ಲಿದೆ ಬೇರೆ ವ್ಯವಸ್ಥೆ ಎಂದಾಗ ಅಲ್ಲೇ ಇದ್ದವರು ಅದು ಕೆಟ್ಟು ಹಾಳಾಗಿ ಹೋಗಿ ವರ್ಷಗಳೇ ಕಳೆದವು ಅದ್ರಲ್ಲಿ ಎಲ್ಲಿಂದ ಬರಬೇಕು ನೀರು ಹೋಗು ತಾಯಿ ಅಲ್ಲೇ ಹೋಟಲ್‍ಗಳಲ್ಲಿ ಇಸ್ಕೊಂಡು ಮಗುವಿಗೆ ನೀರು ಕೊಡು ಇಲ್ಲಿ ಕುಡಿಯೋ ನೀರು ಇಲ್ಲಾ ಶೌಚಾಲಯ ವ್ಯವಸ್ಥೆಯೂ ಇಲ್ಲಾ ಎಂದು ತಾಲ್ಲೂಕು ಆಡಳಿತದ ವಿರುದ್ದ ವ್ಯಂಗ್ಯವಾಡುತ್ತಲೇ ಅಯ್ಯೋ ಇಲ್ಲಿಯೇ ಈಗ ಶಾಸಕರ ಕಚೇರಿ ಬೇರೆ ಇದೆ ನೋಡೋಣ ಇವರ ಕಣ್ಣಿಗೇನಾದರು ಈ ನೀರಿನ ಘಟಕ ಕೆಟ್ಟಿರುವುದು ಕಂಡರೆ ಇವರ ಕಚೇರಿ ಹತ್ತಿರದಲ್ಲೇನಾದರೂ ಪರಿಯಾಯವಾಗಿ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡುತ್ತಾರೇನೋ ನೋಡೋಣ ಎನ್ನುತ್ತಲೇ ಮತ್ತೊಬ್ಬ ಕುಡಿಯವ ನೀರು ಸಿಗದ ಮುದುಗೆರೆ ರಾಜಣ್ಣ ಎಂಬಾತ ತನ್ನ ಹೆಗಲ ಮೇಲಿದ್ದ ವಲ್ಲಿ ಇಂದ ಬೆವರ ವರಸಿಕೊಂಡು ಹಿಡಿ ಶಾಪಹಾಕುತ್ತ ಪಹಣಿ ಪಡೆಯಲು ಲೇಟ್ ಆಗುತ್ತೇ ಅಯ್ಯೋ ನಡ್ಲಮಗ ಎಂದು ತನ್ನ ಮಗನನ್ನು ಕರೆದು ಕೊಂಡು ಹೋದ ದಶ್ಯ ಮನಕಲಕುವಂತಿತ್ತು.
ತಹಶೀಲ್ದಾರ್ ನಾಗರಾಜ್ ಹೇಳಿಕೆ :
ಈ ಬಗ್ಗೆ ಗಮನಹರಿಸಿದಾಗ ಇಲ್ಲಿನ ನೀರಿನ ಘಟಕವನ್ನು ಪುರಸಭೆಯವರು ಅಳವಡಿಸಿದ್ದು ಈಗ ದುಸ್ಥಿತಿಯಲ್ಲಿರುವ ನೀರಿನ ಘಟಕವನ್ನು ಸರಿಪಡಿಸುವಂತೆ ಪುರಸಭಾ ಅಧಿಕಾರಿಗಳಿಗೆ ತಿಳಿಸಲಾಗಿದೆ. ಅವರು ಆ ಕ್ರಮವನ್ನು ಕೈಗೊಳ್ಳುವ ಭರವಸೆ ನೀಡಿದ್ದಾರೆ ತಕ್ಷಣ ರಿಪೇರಿ ಮಾಡಿಸಲಾಗುವ್ಯದೆಂದರು.
ಕುಣಿಗಲ್ ಪಟ್ಟಣದಲ್ಲಿ ತಾಲ್ಲೂಕು ಕಚೇರಿ, ತಾಲ್ಲೂಕು ಪಂಚಾಯಿತಿ, ಸಮಾಜಕಲ್ಯಾಣ ಇಲಾಖೆ, ಪೊಲೀಸ್ ಠಾಣೆ ಈ ಎಲ್ಲಾ ಕಚೇರಿಗಳು ಇಲ್ಲಿಯೇ ಇರುವ್ಯದರಿಂದ ನಿತ್ಯ ಸಾವಿರಾರು ಜನರು ತಮ್ಮ ಪ್ರತಿಯೊಂದು ಕೆಲಸಗಳಿಗೆ ಆಗಮಿಸಲೇ ಬೇಕಾದ ಸ್ಥಳ ಇಂತಹ ಶಕ್ತಿ ಕೇಂದ್ರದಲ್ಲಿಯೇ ಕುಡಿಯುವ ನೀರಿಗಾಗಿ ನಿತ್ಯ ಜನರು ಪರದಾಡುವುದು ಯಾವ ನ್ಯಾಯ ? ಇನ್ನಾದರೂ ಸಂಬಂಧ ಪಟ್ಟವರು ಕೂಡಲೇ ಕೆಟ್ಟಿರುವ ನೀರಿನ ಘಟಕವನ್ನ ಸರಿಪಡಿಸಲಿ ಅಥವಾ ಪರಿಯಾಯ ವ್ಯವಸ್ಥೆ ಮಾಡಿ ಹೊಸ ನೀರಿನ ಫಿಲ್ಟರ್ ಅಳವಡಿಸಿ ಜನರಿಗೆ ಶುದ್ಧ ಕುಡಿಯು ನೀರು ಪೂರೈಕೆ ಮಾಡುವರೇ ಕಾದು ನೋಡಬೇಕಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








