ಬೆಂಗಳೂರು :
ರಾಜ್ಯ ಸರಕಾರ ಲಾಕ್ ಡೌನ್ ಸಡಿಲಿಕೆ ಮಾಡೋದಕ್ಕೆ ಮುಂದಾಗಿದ್ದು, ಇಂದು ಮಧ್ಯರಾತ್ರಿಯಿಂದಲೇ ಜನರಿಗೆ ಕೆಲವು ವಿನಾಯಿತಿಗಳು ದೊರೆಯಲಿವೆ.
ಆರ್ಥಿಕ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಕಂಟೈನ್ಮೆಂಟ್ ಝೋನ್ ಹೊರತುಪಡಿಸಿ ರಾಜ್ಯದ ಇತರೆ ಭಾಗಗಳಲ್ಲಿ ಕೆಲವೊಂದು ನಿರ್ಬಂಧಗಳೊಂದಿಗೆ ಇಂದು ಮಧ್ಯ ರಾತ್ರಿಯಿಂದ ಲಾಕ್ ಡೌನ್ ಸಡಿಲಿಕೆ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಏನಿರುತ್ತೆ.? ಏನಿರಲ್ಲ.? ಎಂಬುದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
ಕಟ್ಟಡ ನಿರ್ಮಾಣ ಕಾಮಗಾರಿ, ಡಾಬಾಗೆ ವಿನಾಯಿತಿ:
ಬಡಗಿ, ಎಲೆಕ್ಟ್ರಿಷಿಯನ್, ಪ್ಲಂಬರ್, ಡಾಬಾ, ರಿಯಲ್ ಎಸ್ಟೆಟ್, ಕಟ್ಟಡ ಕಾಮಗಾರಿ, ರಸ್ತೆ ಕಾಮಗಾರಿ, ಕೊರಿಯರ್ ಸೇವೆ, ಲಾರಿ ರಿಪೇರಿ ಮಾಡುವ ಗ್ಯಾರೇಜ್ ಸೇರಿದಂತೆ ಕೆಲವೊಂದು ಅಗತ್ಯ ಸೇವೆಗಳಿಗೆ ಲಾಕ್ ಡೌನ್ ಸಡಿಲಿಕೆ ನಿರ್ಬಂಧ ಅನ್ವಯಿಸಲಿದೆ. ಕೃಷಿ, ಮೀನುಗಾರಿಕೆಗೆ ಅವಕಾಶ ಸಿಗಲಿದ್ದು, ರಸ ಗೊಬ್ಬರ ಮಾರಾಟದ ಅಂಗಡಿಗಳು ತೆರೆದಿರಲಿವೆ.
ಹೋಟೆಲ್ ಗಳು ತೆರೆದರೂ ಅಲ್ಲಿಯೇ ಕುಳಿತು ಊಟ-ಉಪಹಾರ ಸೇವಿಸಲು ಅವಕಾಶವಿರುವುದಿಲ್ಲ. ಕೇವಲ ಪಾರ್ಸೆಲ್ ಮಾತ್ರ ಕೊಡಬಹುದಾಗಿದೆ. ಆಹಾರ ಸಂಸ್ಕರಣ ಘಟಕಗಳು ಕಾರ್ಯ ನಿರ್ವಹಿಸಲಿದ್ದು, ಕೃಷಿ ಸಂಬಂಧಿತ ಚಟುವಟಿಕೆಗಳನ್ನು ನಡೆಸಲು ಮಾರ್ಗಸೂಚಿ ರೂಪಿಸಲಾಗಿದೆ. ಕೃಷಿ ಉಪಕರಣಗಳು ಹಾಗೂ ಬಿಡಿ ಭಾಗಗಳ ಅಂಗಡಿ ತೆರೆಯಲು ಅನುಮತಿ ನೀಡಲಾಗಿದೆ. ಅಡಿಕೆ ಮಂಡಿಗಳು ಕಾರ್ಯ ನಿರ್ವಹಿಸಲಿವೆ. ಆರೋಗ್ಯ ಸೇವೆಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ. ಹಾಲು ಸಂಗ್ರಹ, ವಿತರಣೆ, ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ.
ನಿಮ್ಮ ನಿಮ್ಮ ಏರಿಯಾಗಳಲ್ಲಿರುವ ದಿನಸಿ, ಹಾಲಿನ ಅಂಗಡಿಗಳು ಈ ಹಿಂದಿನಂತೆ ಕಾರ್ಯಾರಂಭ ಮಾಡಲಿವೆ. ಅಗತ್ಯ ವಸ್ತುಗಳು ಇನ್ಮುಂದೆ ದೊರೆಯಲಿವೆ.
ಮಾಲ್, ಚಿತ್ರಮಂದಿರ, ಕ್ಯಾಬ್ ನಿರ್ಬಂಧ:
ಮಾಲ್, ಚಿತ್ರಮಂದಿರ, ಆಟೋ, ವಿಮಾನ, ರೈಲು ಸಂಚಾರ, ಕ್ಯಾಬ್ ಮೊದಲಾದ ಸೇವೆಗಳಿಗೆ ಇರುವ ನಿರ್ಬಂಧ ಈ ಹಿಂದಿನಂತೆ ಮುಂದುವರೆಯಲಿದ್ದು, ಶಾಲಾ-ಕಾಲೇಜು, ವಾಣಿಜ್ಯ ಮತ್ತು ಕೈಗಾರಿಕೆಗೆ ಅವಕಾಶ ಇಲ್ಲ. ಧಾರ್ಮಿಕ ಸಭೆ, ಸಮಾರಂಭಗಳ ಹೆಸರಿನಲ್ಲಿ ಸಾರ್ವಜನಿಕರು ಗುಂಪು ಸೇರುವಂತಿಲ್ಲವೆಂದು ಹೇಳಲಾಗಿದೆ.
ಕೊರೊನಾ ವೈರಸ್ ತಡೆಗೆ ಸರಕಾರ ಗಂಭೀರ ಹೆಜ್ಜೆ ಇಟ್ಟಿರುವ ನಡುವೆ, ಇದೀಗ ಲಾಕ್ ಡೌನ್ ಸಡಿಲಗೊಳಿಸೋಕೆ ಮುಂದಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
