ಬೆಂಗಳೂರು
ಸರ್ಕಾರ ಜಾರಿ ತರಲು ಇಚ್ಛಿಸಿರುವ ಕೃಷಿ ಮಸೂದೆ ವಿಚಾರವಾಗಿ ಸರ್ಕಾರದ ವಿರುದ್ಧ ರೊಚ್ಚಿಗೆದ್ದಿರುವ ರೈತಪರ ಸಂಘಟನೆಗಳು ಸೆಪ್ಟೆಂಬರ್ 28 ರಂದು ಕರ್ನಾಟಕ ಬಂದ್ ಗೆ ಕರೆ ನೀಡಿದ್ದು, ಬಂದ್ ಗೆ ಬಹುತೇಕ ಸಂಘಟನೆಗಳು ಬೆಂಬಲ ನೀಡಿದ್ದು ನಾಳೆ ರಾಜ್ಯದಲ್ಲಿ ಜನಜೀವನ ಅಸ್ತವಸ್ಥವಾಗುವ ಸಾಧ್ಯತೆ ಇದೆ.
ನಾಳೆ ಬಂದ್ ಹಿನ್ನಲೆಯಲ್ಲಿ ಇಡೀ ಕರ್ನಾಟಕ ಸ್ಥಬ್ಧವಾಗಲಿದ್ದು, ಸ್ವಲ್ಪ ವ್ಯತ್ಯಯ ಆಗಲಿದೆ. ರೈತಪರ ಸಂಘಟನೆಗಳಿಗೆ ಹಲವು ಸಂಘಟನೆಗಳು ಬೆಂಬಲ ನೀಡಿದ್ದು, ಕೆಲ ಸಂಘಟನೆಗಳು ನೈತಿಕ ಬೆಂಬಲ ಮಾತ್ರ ನೀಡಿವೆ. ರಾಜ್ಯದ 2 ರೈತ ಸಂಘಗಳಾದ ಕರ್ನಾಟಕ ಪ್ರಾಂತ ರೈತ ಸಂಘ, ಅಖಿಲ ಭಾರತ ಕಿಸಾನ್ ಸಭಾ, ರೈತ ಕೃಷಿ ಕಾರ್ಮಿಕರ ಸಂಘ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ, ಆಶಾ ಜನಶಕ್ತಿ ಸಂಘ ಸೇರಿದಂತೆ 9 ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ನೀಡಿವೆ.
ನಾಳೆ ಓಲಾ-ಉಬರ್ ಸೇವೆ ಸಿಗೋದು ಬಹುತೇಕ ಅನುಮಾನವಾಗಿದೆ. ಇದೇ ರೀತಿ ಆಟೋ-ಟ್ಯಾಕ್ಸಿಗಳು ಸಹ ರಸ್ತೆಗಿಳಿಯೋದು ಡೌಟ್. ಖಾಸಗಿ ಬಸ್ ಸೇವೆ ನಾಳೆ ಬಂದ್ ಆಗುವ ಸಾಧ್ಯತೆ ಇದೆ.ಇನ್ನು ಪೆಟ್ರೋಲ್- ಡಿಸೇಲ್ ಅಸೋಸಿಯೇಷನ್, ಹೋಟೆಲ್ ಮಾಲೀಕರ ಸಂಘದಿಂದ, ಬಾರ್ ಮಾಲೀಕರ ಅಸೋಸಿಯೇಷನ್, ಖಾಸಗಿ ಬಸ್‌ಗಳ ಒಕ್ಕೂಟದಿಂದ, ಕೆಎಸ್ಆರ್‌ಟಿಸಿ, ಬಿಎಂಟಿಸಿ ನೌಕರರ ಸಂಘ, ಮಾಲ್ ಅಸೋಸಿಯೇಷನ್‌ನ್ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘಟನೆಗಳು ನೈತಿಕ ಬೆಂಬಲ ಸೂಚಿಸಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
