ಬೆಂಗಳೂರು
ಈ ವರ್ಷ ಅಂದರೆ 2020ರಲ್ಲಿ ರಾಜ್ಯ ರಾಜಕೀಯದಲ್ಲಿ ಹಲವು ಬೆಳಗಣಿಗೆ ನಡೆಯಲಿದೆ. ಫೆಬ್ರವರಿ 26ರ ಬಳಿಕ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಭವಿಷ್ಯವೇನು? ಎಂಬ ಪ್ರಶ್ನೆ ಎದ್ದಿರುವುದು ನಿಜ ಹಾಗೆ ಕೆಲ ಬಿಜೆಪಿ ನಾಯಕರು ಸಹ ಡಿಸಿಎಂ ಮುಂದಿನ ನಡೆ ಏನು ಎಂದು ಕಾದು ನೋಡುತ್ತಿದ್ದಾರೆ.
ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ 2018ರ ವಿಧಾನಸಭೆ ಚುನಾವಣೆಯಲ್ಲಿ ಸೋತ ಲಕ್ಷ್ಮಣ ಸವದಿ ಉಪ ಮುಖ್ಯಮಂತ್ರಿಯಾದರು. ಬಿಜೆಪಿಯ ನಡೆ ಕಂಡು ಹಲವರು ಹುಬ್ಬೇರಿಸಿದ್ದರು. ಉಪ ಚುನಾವಣೆಯಲ್ಲಿ ಅವರು ಗೆದ್ದು ಬರಲಿದ್ದಾರೆ ಎಂಬ ನಿರೀಕ್ಷೆ ಇತ್ತಾದರು ಅದು ಹುಸಿಯಾಯಿತು.
ಸವದಿ ಪ್ರತಿನಿಧಿಸುವ ಬೆಳಗಾವಿ ಜಿಲ್ಲೆಯ ಅಥಣಿ ಕ್ಷೇತ್ರದಲ್ಲಿ ಮಹೇಶ್ ಕುಮಟಳ್ಳಿ ಬಿಜೆಪಿಯಿಂದ ಅಭ್ಯರ್ಥಿಯಾಗಿ ಗೆದ್ದು ಬಂದರು. ಯಾವುದೇ ಸದನದ ಸದಸ್ಯರಾಗದ ಲಕ್ಷ್ಮಣ ಸವದಿ ಮುಂದೇನು ಮಾಡಲಿದ್ದಾರೆ? ಎಂಬ ಕುತೂಹಲ ಮೂಡಿದೆ.
ವಿಧಾನ ಪರಿಷತ್ ಸದಸ್ಯರಾದ ರಿಜ್ವಾನ್ ಅರ್ಷದ್ ಉಪ ಚುನಾವಣೆಯಲ್ಲಿ ಶಿವಾಜಿನಗರ ಕ್ಷೇತ್ರದಿಂದ ಗೆದ್ದು ಬಂದಿದ್ದಾರೆ.ರಿಜ್ವಾನ್ ರಾಜೀನಾಮೆಯಿಂದ ತೆರವಾದ ಕ್ಷೇತ್ರದಿಂದ ಲಕ್ಷ್ಮಣ ಸವದಿ ಪರಿಷತ್ ಸದಸ್ಯರಾಗಲಿದ್ದಾರೆ ಎಂಬುದು ಸದ್ಯ ಸುದ್ದಿಯಲ್ಲಿದೆ. “ಕಾಲ ಕೂಡಿ ಬಂದಾಗ ಪರಿಷತ್ತಿಗೆ ಪ್ರವೇಶ ಆಗುತ್ತದೆ” ಎಂದು ಹೇಳಿದರು. ಫೆಬ್ರವರಿ 26ರೊಳಗೆ ಅವರು ವಿಧಾನ ಪರಿಷತ್ ಸದಸ್ಯರಾಗಬೇಕು. ಇಲ್ಲವಾದಲ್ಲಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ.