ರೋಟರಿಸಂಸ್ಥೆಯಿಂದ ವೀಕಲಚೇತನರಿಗೆ ಉಚಿತ ವ್ಹೀಲ್‍ಚೇರ್ ವಿತರಣೆ

ಹಿರಿಯೂರು :

       ನಗರದ ರೋಟರಿಸಂಸ್ಥೆ ನೇತೃತ್ವದಲ್ಲಿ 13 ಜನ ವಿಕಲಚೇತನರಿಗೆ ಉಚಿತವಾಗಿ ವೀಲ್‍ಚೇರ್‍ಗಳನ್ನು ನೀಡಲಾಗಿದೆ. ಈ ವೀಲ್‍ಚೇರ್‍ಗಳನ್ನು ಬೆಂಗಳೂರು ಸದಾಶಿವ ನಗರದ ರೋಟರಿಸಂಸ್ಥೆ ಕೊಡಿಗೆಯಾಗಿ ನೀಡಿದ್ದು ಈ ಸಂಸ್ಥೆ ಅಧ್ಯಕ್ಷರಾದ ಪ್ರೊ||ಹೆಚ್.ಇ.ಶಶಿಧರ್ ಕಾರ್ಯದರ್ಶಿ ಅಯ್ಯಪ್ಪ, ಭಗವಾನ್‍ಮಹಾವೀರ್ ವಿಕಲಚೇತನ ಸಮಿತಿ, ಅಹಮದಾಬಾದ್‍ನ ರೋ||ಪರೇಕ್‍ರವರನ್ನು ತುಂಬುಹೃದಯದಿಂದ ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ ಎಂಬುದಾಗಿ ರೋಟರಿ ಅಧ್ಯಕ್ಷ ಎಂ.ಎಸ್.ರಾಘವೇಂದ್ರ ಹೇಳಿದರು.

       ನಗರದ ರೋಟರಿಸಭಾಭವನದಲ್ಲಿ ರೋಟರಿಸಂಸ್ಥೆ, ಇನ್ಹರ್‍ವ್ಹೀಲ್, ಭಾರತೀಯ ರೆಡ್‍ಕ್ರಾಸ್‍ಸಂಸ್ಥೆ ಇವರುಗಳ ಸಂಯುಕ್ತಾಶ್ರಯದಲ್ಲಿ ವೀಕಲಚೇತನರಿಗೆ ಉಚಿತ ವ್ಹೀಲ್‍ಚೇರ್ ವಿತರಣ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.ಈ ಕಾರ್ಯಕ್ರಮದ ಉದ್ಘಾಟನೆಯನ್ನು ರಾಜ್ಯ ರೆಡ್‍ಕ್ರಾಸ್ ಚೇರ್ಮನ್ ಬಸ್ರೂರ್ ಬಸವರಾಜಶೆಟ್ಟಿ ನೆರವೇರಿಸಿದರು. ವೇದಿಕೆಯಲ್ಲಿ ರೆಡ್‍ಕ್ರಾಸ್‍ಉಪಾಧ್ಯಕ್ಷ ಹೆಚ್.ಎಸ್.ಸುಂದರ್‍ರಾಜ್, ಛೇರ್ಮನ್ ಬಿ.ಎಸ್.ನವಾಬ್‍ಸಾಬ್, ಪ್ರೋ.ಶಶಿಧರ್, ಅಯ್ಯಪ್ಪಸ್ವಾಮಿ, ಪರೇಖ್, ಎಂ . ಎನ್ . ಸೌಭಾಗ್ಯವತೀ ದೇವರ್, ಹೆಚ್.ವೆಂಕಟೇಶ್, ಎಸ್.ಜೋಗಪ್ಪ, ಇನ್ಹರ್‍ವ್ಹೀಲ್ ಅಧ್ಯಕ್ಷೆ ಸ್ವಪ್ನಾಸತೀಶ್ ಇತರರು ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link