ಚಿರತೆ ಹಾವಳಿ ನಿಯಂತ್ರಣ ಯಾವಾಗ?

ಮಿಡಗೇಶಿ:

         ನಾಲ್ಕಾರು ವರ್ಷಗಳಿಂದಲೂ ಸರಿಯಾದ ಸಮಯಕ್ಕೆ ಮಳೆ ಬಾರದೆಯೆ ರೈತಾಪಿ ವರ್ಗದವರು ಜೀವನ ನಡೆಸುವುದೇ ಕಷ್ಠಕರ ದಿನವಾಗಿದ್ದು ತಮ್ಮ ತಮ್ಮ ಸಂಸಾರಗಳ ನಿರ್ವಹಣೆ ಮಾಡಲು ತುಂಬಾ ಕಷ್ಠವಾಗಿದ್ದು ಜೀವನೋಪಾಯಕ್ಕಾಗಿ ಗ್ರಾಮಾಂತರ ಪ್ರದೇಶದ ಕೆಲ ರೈತಾಪಿ ಜನರು ಕುರಿ, ಮೇಕೆ, ಹಸು, ನಾಯಿಗಳನ್ನು , ಎಮ್ಮೆಗಳನ್ನು ಸಾಕಿಕೊಂಡು ಜೀವನ ಸಾಗಿಸುತ್ತಿರುತ್ತಾರೆ.

         ಇಂತಹ ಸಮಯದಲ್ಲಿ ಬರೆಸಿಡಿಲು ಬಡಿದಂತೆ ಚಿರತೆ, ತೋಳಗಳು (ಕಾಡುಪ್ರಾಣಿಗಳು) ಧಿಢೀರನೆ ಹಗಲಿರುಳೆನ್ನದೆಯೆ ಕುರಿ, ಮೇಕೆಗಳನ್ನು ತಿನ್ನುತಿರುವುದರಿಂದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಹ ದಿಗಲಿನಲ್ಲಿ ತನ್ನ ಅಳಲನ್ನು ತೋಡಿಕೊಳ್ಳುತ್ತಿರುವುದು ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಹೋಬಳಿಯ ಜನತೆಯ ಅಳಲಾಗಿರುತ್ತದೆ.

             ಮಿಡಿಗೇಶಿ ಗ್ರಾಮ ಪಂಚಾಯಿತಿಗೆ ಸೇರಿದ ಹನುಮಂತಪುರದ ಎಸ್.ಸಿ ಕಾಲೋನಿಯ ರಾಮಕೃಷ್ಣನಿಗೆ ಸೇರಿದ ಒಂದು ಕುರಿಯನ್ನು ತಾ 26-11-2018 ರ ಬೆಳಿಗ್ಗೆ 11 ಗಂಟೆಯ ಸಮಯದಲ್ಲಿ ಕುರಿಮೇಯಿಸಲು ಹೋಗಿದ್ದಾಗ ಚಿರತೆ ಕುರಿಯನ್ನು ತಿಂದು ಹಾಕಿರುತ್ತದೆ.

           ಇದೇ ದಿನ ರಾತ್ರಿ ನಾಗಲಾಪುರ ಗ್ರಾಮದ ಸಿದ್ದಲಿಂಗಯ್ಯನವರ ಕುರಿರೊಪ್ಪಕ್ಕೆ ನುಗ್ಗಿದ ಚಿರತೆ ಎರಡು ಕುರಿಗಳನ್ನು ತಿಂದು ಹಾಕಿದ್ದು ಒಂದು ಮೇಕೆಯನ್ನು ಗಾಯಗೊಳಿಸಿರುವ ಬಗ್ಗೆ ವರದಿಯಾಗಿದೆ. (ನಾಗಲಾಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಸಮೀಪ ಗ್ರಾಮದ ಮಧ್ಯಭಾಗದಲ್ಲಿ) ಆದ್ದರಿಂದ ಮಧುಗಿರಿ ತಾಲ್ಲೂಕಿನ ಅರಣ್ಯ ಇಲಾಖೆಯ ಅಧಿಕಾರಿಗಳು ಈ ಭಾಗದಲ್ಲಿನ ಚಿರತೆ ಕಾಟವನ್ನು ತಪ್ಪಿಸುವ ಮೂಲಕ ಗ್ರಾಮಾಂತರ ಪ್ರದೇಶಗಳಲ್ಲಿನ ರೈತರ ನೆಮ್ಮದಿ ಜೀವನಕ್ಕೆ ಅನುವು ಮಾಡಿಕೊಡಬೇಕು ಹಾಗೂ ಈಗಾಗಲೇ ನಷ್ಠಕ್ಕೊಳಗಾಗಿರುವ ರೈತರಿಗೆ ಸರ್ಕಾದರಿಂದ ದೊರೆಯಬಹುದಾದ ಪರಿಹಾರವನ್ನು ಕೊಡಿಸಿಕೊಡಬೇಕೆಂದು ರೈತಾಪಿ ವರ್ಗದವರ ಆಗ್ರಹವಾಗಿರುತ್ತದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link