ಮಿಡಿಗೇಶಿ
ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಹೋಬಳಿಯ ಬೇಡತ್ತೂರು ಗ್ರಾಮ ಪಂಚಾಯಿತಿಗೆ ಸೇರಿದ ಕ್ಯಾತಗೊಂಡನಹಳ್ಳಿಯಲ್ಲಿ ಸ್ವಚ್ಛ ಭಾರತ್ ಯೋಜನೆಯಡಿ 2017-2018 ನೆ ಸಾಲಿನಲ್ಲಿ ಮಂಜಮ್ಮ ಕೋಂ/ಪ್ರಸನ್ನಕುಮಾರ್ ಅಂದಾಜು 12,000 ರೂ.ಗಳ ಮೊತ್ತದಲ್ಲಿ ಶೌಚಾಲಯದ ಕಾಮಗಾರಿ ಮುಗಿಸಿ ನಾಲ್ಕಾರು ತಿಂಗಳುಗಳೆ ಕಳೆದಿವೆ. ಆದರೂ ಈವರೆವಿಗೂ ಸಂಬಂಧಿಸಿದ ಗ್ರಾಮಪಂಚಾಯಿತಿಯ ಅಧಿಕಾರಿಗಳು ಬಿಲ್ ಮಾಡಿಕೊಡಲು ಮೀನಾಮೇಷ ಎಣಿಸುತ್ತಿರುವ ಗುಟ್ಟಾದರೂ ಏನು? ಇದೇ ಗ್ರಾಮದಲ್ಲಿ ಇನ್ನೂ ನಾಲ್ಕಾರು ಫಲಾನುಭವಿಗಳಿಗೆ ಶೌಚಾಲಯಗಳ ಬಿಲ್ ಪಾವತಿಯಾಗದೆ ಬಾಕಿಯಿವೆ. ಇವರೆಲ್ಲರೂ ನಮಗೆ ಹಣ ಬಿಡುಗಡೆ ಎಂದಿಗೆ ಎಂದು ಪ್ರಶ್ನಿಸುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
