ರಿಂಗ್ ರೋಡ್ ಸಮಸ್ಯೆಗಳಿಗೆ ಮುಕ್ತಿ ಯಾವಾಗ ?

ತುಮಕೂರು:

ವಿಶೇಷ ವರದಿ: ವಿನಯ್. ಎಸ್

    ತುಮಕೂರು ಸ್ಮಾರ್ಟ್ ಸಿಟಿ ಎಂದು ಘೋಷಿಸಿಕೊಂಡು ನಗರದ ನಾನಾ ಕಡೆ ಅಭಿವೃದ್ಧಿಯ ಕಾಮಗಾರಿ ನಡೆಯುತ್ತಿದೆ. ಕಾಮಗಾರಿಗಳನ್ನು ಪೂರ್ಣಗೊಳಿಸಲು ಪ್ರಯತ್ನ ಮಾಡುತ್ತಿರುವುದು ಒಂದು ಸಂತಸದ ಸಂಗತಿಯಾದರೂ, ತುಮಕೂರು ನಗರದ ಕೆಲವು ಭಾಗಗಳಲ್ಲಿ ಕಸದ ಸಮಸ್ಯೆ ಸೇರಿದಂತೆ ಇನ್ನಿತರೆ ಕೆಲವು ಸಮಸ್ಯೆಗಳು ಬಗೆಹರಿಯುತ್ತಿಲ್ಲ.

    ಬೆಂಗಳೂರು ಕಡೆಯಿಂದ ತುಮಕೂರಿಗೆ ಬರುವಾಗ ಮಂಚಕಲ್ ಕುಪ್ಪೆ ಬಳಿ ಇರುವ ಟೋಲ್ ಗೇಟ್ ನಂತರ ಕ್ಯಾತಸಂದ್ರಕ್ಕೂ ಮುನ್ನ ಎಡಭಾಗಕ್ಕೆ ರಸ್ತೆ ಕವಲೊಡೆಯುತ್ತದೆ. ಈ ರಸ್ತೆಯು ತುಮಕೂರು ನಗರವನ್ನು ಬಲಭಾಗಕ್ಕೆ ಬಿಟ್ಟು, ಮುಂದೆ ಗುಬ್ಬಿ ಗೇಟ್ ನಂತರ ಪುನಃ ತುಮಕೂರು-ಶಿವಮೊಗ್ಗ-ಹೊನ್ನಾವರ ರಸ್ತೆಯನ್ನು ಕೂಡಿಕೊಳ್ಳುತ್ತದೆ. ಈ ರಸ್ತೆಯನ್ನು ರಿಂಗ್ ರೋಡ್ ಎಂದೂ ಕರೆಯುತ್ತಾರೆ. ಈ ರಸ್ತೆಯು ಸಾಲು ಸಾಲು ಸಮಸ್ಯೆಗಳನ್ನು ತನ್ನ ಬೆನ್ನಿಗೆ ಅಂಟಿಸಿಕೊಂಡಿದೆ. ಇಲ್ಲಿನ ಪ್ರಮುಖ ಸಮಸ್ಯೆಗಳೆಂದರೆ ಕಸದ ಸಮಸ್ಯೆ, ನಾಯಿಗಳ ಸಮಸ್ಯೆ, ಹಂದಿಗಳ ಸಮಸ್ಯೆ, ಮಾಂಸದಂಗಡಿಗಳ ತ್ಯಾಜ್ಯ, ಸೊಳ್ಳೆಗಳ ಸಮಸ್ಯೆ, ಸಾಂಕ್ರಾಮಿಕ ರೋಗಗಳ ಭೀತಿ ಮತ್ತು ಇದನ್ನು ಕಂಡೂಕಾಣದಂತಿರುವ ನಿರ್ಲಕ್ಷ್ಯ್ಷದ ಅಧಿಕಾರಿಗಳು.

ವಿಲೇವಾರಿಯಾಗದೆ ಬಿದ್ದಿರುವ ರಾಶಿ ರಾಶಿ ಕಸ:

     ತುಮಕೂರು ಮಹಾನಗರ ಪಾಲಿಕೆಯಿಂದ ಅಜ್ಜಗೊಂಡನಹಳ್ಳಿಯ ಬಳಿ ಕಸ ವಿಲೇವಾರಿ ಮತ್ತು ಸಂಸ್ಕರಣಾ ಕೇಂದ್ರವನ್ನು ಸ್ಥಾಪಿಸÀಲಾಗಿದೆ. ಈ ರಿಂಗ್ ರೋಡ್ ಆಸುಪಾಸಿನ ಪ್ರದೇಶದ 7 ವಾರ್ಡ್‍ಗಳ ಕಸವನ್ನು ಇದೇ ರಿಂಗ್ ರೋಡ್ ಬಳಿ ತಂದು ಸುರಿಯುತ್ತಾರೆ. ಎಲ್ಲಾ ವಾರ್ಡ್‍ಗಳಿಗೂ ಕಸವಿಲೇವಾರಿ ಮಾಡುವ ವಾಹನಗಳನ್ನು ನಿಯೋಜಿಸಿದ್ದರೂ ಕಸ ಮಾತ್ರ ಇಲ್ಲೆಲ್ಲಾ ರಾಶಿರಾಶಿಯಾಗಿ ಶೇಕರಣೆಗೊಳ್ಳುತ್ತದೆ. ಇಲ್ಲಿ ಸುರಿದಿರುವ ಕಸವನ್ನು ಸಾಕಷ್ಟು ದಿನಗಳಿಂದ ಸಾಗಿಸದೆ ಉಳಿದಿರುವುದರಿಂದ ಕಸದ ರಾಶಿಯೇ ಇದ್ದಲಿಯೇ ಬಿದ್ದಿದ್ದು, ಸುತ್ತಲ ವಾತಾವರಣ ಗಬ್ಬೆದ್ದು ನಾರುತ್ತಿದೆ.

ಬೀದಿ ನಾಯಿಗಳ ಸಮಸ್ಯೆ:

     ಬಿದ್ದಿರುವ ಕಸದ ರಾಶಿಯಲ್ಲಿ ಆಹಾರವನ್ನು ಅರಸಿ ಇಲ್ಲಿಗೆ ನಾಯಿಗಳು ಬರುತ್ತವೆ. ಸಿಕ್ಕ ಕೊಳಕು ಆಹಾರವನ್ನು ಸೇವಿಸಿ ಈ ಕಸದ ರಾಶಿಯ ನಡುವೆಯೆ ವಾಸಿಸುತ್ತಿವೆ. ಅಷ್ಟೆ ಅಲ್ಲದೆ ಹಗಲು ಹೊತ್ತಿನಲ್ಲೇ ರಸ್ತೆಯಲ್ಲಿ ಸಂಚರಿಸುವವರಿಗೆ ಈ ಬೀದಿ ನಾಯಿಗಳು ಭೀತಿ ಹುಟ್ಟಿಸುವುದಲ್ಲದೆ ಹಲವರನ್ನು ಕಚ್ಚಿ ಗಾಯಗೊಳಿಸಿರುವ ಘಟನೆಗಳೂ ನಡೆದಿವೆ. ಇನ್ನು ರಾತ್ರಿ ವೇಳೆÀಯಲ್ಲಿ ಸಂಚರಿಸುವ ದ್ವಿಚಕ್ರ ವಾಹನ ಸವಾರರು ಸ್ವಲ್ಪ ಯಾಮಾರಿದರೂ ನಾಯಿಗಳಿಂದ ಕಚ್ಚಿಸಿಕೊಳ್ಳುವುದಲ್ಲದೆ, ವಾಹನಗಳಿಂದ ಕೆಳಗೆ ಬಿದ್ದು ಮೈ-ಕೈ ಮೂಳೆ ಮುರಿದುಕೊಂಡು ಆಸ್ಪತ್ರೆಯಲ್ಲಿ ಬೆಡ್ ಮೇಲೆ ವಿಶ್ರಾಂತಿ ಪಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಮಾಂಸದಂಗಡಿಗಳ ತ್ಯಾಜ್ಯ:

   ರಿಂಗ್ ರೋಡ್‍ನ ಅಕ್ಕ-ಪಕ್ಕದಲ್ಲಿ ಸಾಲು-ಸಾಲು ಮಾಂಸದಂಗಡಿಗಳಿದ್ದು, ಅಂಗಡಿಗಳಲ್ಲಿನ ತ್ಯಾಜ್ಯ ಮಾಂಸವನ್ನು ಅಂಗಡಿಗಳ ಮಾಲೀಕರು ಮತ್ತು ಅಂಗಡಿಗಳಲ್ಲಿ ಕೆಲಸ ಮಾಡುವವರು, ಇಲ್ಲಿಗೆ ತಂದು ಸುರಿಯುತ್ತಾರೆ. ಈ ತ್ಯಾಜ್ಯ ಮಾಂಸವನ್ನು ತಿಂದು ಕೊಬ್ಬಿ ಹೆಬ್ಬುಲಿಯಂತಾಗಿರುವ ನಾಯಿಗಳನ್ನು ನೋಡಿದರೆ ಸಾಕು ಚಡ್ಡಿ ಒದ್ದೆಯಾಗುವಷ್ಟು ಭಯಂಕರವಾಗಿವೆ. ಇನ್ನು ಇವುಗಳು ಅಪ್ಪಿತಪ್ಪಿ ಸಸ್ಯಾಹಾರದ ಕಡೆ ತಿರುಗಿಯೂ ನೋಡುವುದಿಲ್ಲ. ತ್ಯಾಜ್ಯ ಮಾಂಸ ಸಿಕ್ಕದಿದ್ದರೆ ಸಿಕ್ಕಸಿಕ್ಕ ಮಕ್ಕಳನ್ನೊ, ವಯೋ ವೃದ್ದರನ್ನೊ ಅಟ್ಟಾಡಿಸಿ, ಹಿಡಿದು ಭೂರಿ ಭೋಜನವನ್ನು ಮಾಡುತ್ತವೆ.

ಹಂದಿಗಳ ಹಾವಳಿ:

    ಕೊಳಕು ಮತ್ತು ಗಲೀಜು ಎಲ್ಲಿರುತ್ತದೆಯೊ ಅಲ್ಲಿ ಹಂದಿಗಳು ಸಾಮಾನ್ಯವಾಗಿ ಕಂಡು ಬರುತ್ತವೆ. ರಾಶಿ ಬಿದ್ದಿರುವ ಕಸದಲ್ಲಿರುವ ಕೊಳಕನ್ನು ತಿನ್ನುವ ಸಲುವಾಗಿ ಹಂದಿಗಳು ಕಸದ ರಾಶಿ ಮೇಲೆಲ್ಲ ಓಡಾಡುವುದರಿಂದ ಕಸದ ರಾಶಿಯೆಲ್ಲಾ ಕೆದರಿ ಚೆಲ್ಲಾಪಿಲ್ಲಿಯಾಗಿ ರಸ್ತೆಯ ಮೇಲೆಲ್ಲಾ ಹರಡಿದಂತಾಗಿ ಸಂಚರಿಸುವ ಪಾದಚಾರಿಗಳಿಗೆ ಈ ಕಸವನ್ನು ತುಳಿದುಕೊಂಡೆ ಸಂಚರಿಸುವುದು ಯಮ ಹಿಂಸೆಯಾಗಿದೆ.

ಸಾಂಕ್ರಾಮಿಕ ರೋಗಗಳ ಭೀತಿ:

    ರಾಶಿ ರಾಶಿ ಕಸ ಬಿದ್ದಿರುವುದರಿಂದ, ಮಳೆ ಬಂದಾಗ ಮಳೆ ನೀರು ಕಸದ ರಾಶಿಯಲ್ಲಿ ಬೆರೆತು, ಮಡುಗಟ್ಟಿ ನಿಂತು ಮಾರಣಾಂತಿಕ ರೋಗಗಳಿಗೆ ಆಹ್ವಾನ ನೀಡುವಂತಹ ಸೃಷ್ಟಿಯಾಗುತ್ತಿವೆ. ಈ ಸೊಳ್ಳೆಗಳ ಹಾವಳಿಯಿಂದ ಇಲ್ಲಿನ ನಿವಾಸಿಗಳಿಗೆ ಡೆಂಗ್ಯೂ, ಮಲೇರಿಯಾದಂತಹ ಮಾರಕ ರೋಗಗಳ ಜೊತೆಗೆ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಿದೆ.

    ಈ ರಸ್ತೆಯಲ್ಲಿ ಸಂಭವಿಸುವ ಅಪಘಾತಗಳಿಗೇನೂ ಕಡಿಮೆಯಿಲ್ಲ. ಜನ ಪ್ರತಿನಿಧಿಗಳಿಗೂ ಮತ್ತು ಪೋಲೀಸರಿಗೂ ಇಲ್ಲಿನ ನಿವಾಸಿಗಳು ಮನವಿ ಪತ್ರವನ್ನು ಸಲ್ಲಿಸಿತ್ತಾ ಬಂದಿದ್ದಾರೆ. ಇದೀಗ ಸ್ಮಾರ್ಟ್ ಸಿಟಿ ಯೋಜನೆಯಡಿ ಈ ರಸ್ತೆ ಅಭಿವೃದ್ಧಿಯಾ ಗುತ್ತಿರುವುದರಂದ ಈ ಸಮಸ್ಯೆ ನಿವಾರಣೆಯಾಗಬಹುದೇ ಎಂಬ ಆಶಾಭಾವನೆ ಇದೆ.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link