ಬೆಂಗಳೂರು
ಶ್ರೀರಾಮನ ಪತ್ನಿ ಸೀತಾದೇವಿಯ ತಂದೆ ತಾಯಿ ಯಾರು ಎಂದು ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ಪ್ರಶ್ನಿಸಿದ್ದಾರೆ.ಸೀತಾಮಾತೆಯ ನಿಜವಾದ ತಂದೆತಾಯಿಯ ಬಗ್ಗೆ ತಮಗೆ ಗೊತ್ತಿಲ್ಲ. ಗೊತ್ತಿದ್ದವರು ಈ ಬಗ್ಗೆ ತಮಗೆ ಹೇಳಿದರೆ ಅವರ ಪಾದಗಳಿಗೆರಗುವುದಾಗಿ ಹೇಳಿದರು.
ನಗರದಲ್ಲಿ ನಡೆದ ವಾಲ್ಮೀಕಿ ಸಂಘದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸೀತೆಯ ತಂದೆತಾಯಿ ಯಾರೆಂದೂ ನಮಗೆಲ್ಲ ಗೊತ್ತಿಲ್ಲ. ಹೀಗಿದ್ದರೂ ಸಹ ಸೀತೆಯನ್ನು ಪೂಜಿಸುತ್ತೇವೆ. ಸೀತಾಮಾತೆ ತಮ್ಮ ಸದ್ಗುಣ, ಸಚ್ಚಾರಿತ್ರದಿಂದಾಗಿ ಪೂಜೆಗೆ ಅರ್ಹರಾಗಿದ್ದಾರೆ ಎಂದರು.
ನಲವತ್ತೊಂದನೇ ವರ್ಷದ ವಯಸಿಗೆ ಸೀತೆ ಗರ್ಭಿಣಿಯಾಗಿದ್ದರು. ಅಂತಹ ಸೀತೆಗೆ ಯಶಸ್ವಿಯಾಗಿ ಹೆರಿಗೆ ಮಾಡಿಸಿದ್ದು ವಾಲ್ಮೀಕಿ ಮಹರ್ಷಿ ಮತ್ತು ಮಹರ್ಷಿಯ ಆಶ್ರಮದವರು ಎಂದು ಉಗ್ರಪ್ಪ ಹೇಳಿದರು.ಇಂದಿನ ಎಲ್ಲಾ ಸಮಸ್ಯೆಗಳಿಗೆ ಅಂದಿನ ರಾಮಾಯಣದಲ್ಲಿಯೇ ವಾಲ್ಮಿಕಿ ಮಹರ್ಷಿಗಳು ಪರಿಹಾರಗಳನ್ನು ಕೊಟ್ಟಿದ್ದಾರೆ. ಅದನ್ನು ಅರಿತು ಬಳಸಿಕೊಳ್ಳಬೇಕು. ಶ್ರೀರಾಮನ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು ಎಂದು ಕರೆ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ