ವಿದ್ಯಾರ್ಥಿಗಳ ಪುಂಡಾಟಕ್ಕೆ ಕಡಿವಾಣ ಹಾಕುವರ್ಯಾರು?

ತಿಪಟೂರು
ವಿಶೇಷ ವರದಿ:ರಂಗನಾಥ್ ಪಾರ್ಥಸಾರಥಿ

     ಅಪ್ರಾಪ್ತರು ವಾಹನ ಚಲಾಯಿಸಿದರೆ ವಾಹನದ ಮಾಲೀಕನಿಗೆ ಅಥವಾ ವಾಹನ ಚಲಾಯಿಸಿದ ಅಪ್ರಾಪ್ತರ ಪೋಷಕರಿಗೆ ದಂಡವಿಧಿಸುವ ಕಾನೂನು ಇದ್ದರು ಏಕೋ ಕಾಣೆ ನಮ್ಮ ತಿಪಟೂರು ನಗರಕ್ಕೆ ಅನ್ವಯವಾದಂತೆ ಕಾಣುತ್ತಿಲ್ಲ.
    ನಗರದಲ್ಲಿ ಅದರಲ್ಲೂ ಈಗತಾನೆ ಪ್ರೌಢಶಿಕ್ಷಣ ಮುಗಿಸಿ ಪದವಿಪೂರ್ವ ಹಂತಕ್ಕೆ ಕಾಲಿಟ್ಟಿರುವ ತಾರುಣ್ಯಾವಸ್ಥೆಯಲ್ಲಿರುವ ಯುವಕ ಯುವತಿಯರು ತಮ್ಮ ಪೋಷಕರನ್ನು ಕಾಡಿ-ಬೇಡಿ, ಪೀಡಿಸಿ ವಾಹನಗಳನ್ನು ಕೊಡಿಸಿಕೊಂಡು ಪೋಷಕರ ಮಾತನ್ನೇ ಕೇಳದೆ ವಾಹನವನ್ನು ಶಾಲೆಗೆ ತಂದು ಒಂದೇ ವಾಹನದಲ್ಲಿ 3-4 ಜನರು ಸಂಚರಿಸುತ್ತಿರುವುದಲ್ಲದೆ, ವ್ಹೀಲಿಂಗ್, ಸ್ಟಂಟ್, ಕರ್ಕಶ ಹಾರನ್ ಮಾಡಿಕೊಂಡು ಮೊಬೈಲ್‍ನಲ್ಲಿ ಮಾತನಾಡುತ್ತಾ, ಕೆ.ಆರ್.ಬಡಾವಣೆ ಮತ್ತು ಇಲ್ಲಿನ ಉದ್ಯಾನವನದತ್ತ ವಿಪರೀತವಾಗಿ ಓಡಾಡುತ್ತಿರುತ್ತಾರೆ.
     ಇದಲ್ಲದೆ ನಗರದ ಬಿ.ಹೆಚ್.ರಸ್ತೆಯಲ್ಲೂ ಸಹ ಆರಕ್ಷಕರ ಮುಂದೆಯೇ ಹೋಗುತ್ತಿರುತ್ತಾರೆ. ಇವರಿಗೆ ಕಡಿವಾಣ ಹಾಕುವ ಜವಾಬ್ದಾರಿ ಪೋಷಕರದ್ದೊ, ಆರಕ್ಷಕರದ್ದೊ, ಇಲ್ಲ ಆರ್.ಟಿ.ಓ ಇಲಾಖೆಯವರದ್ದೋ ತಿಳಿಯದಾಗಿದೆ.ಬಿ.ಹೆಚ್.ರಸ್ತೆಯಲ್ಲಿ ಆರಕ್ಷಕರಿದ್ದರೆ ಯಾವಾಗಲೂ ತೆರೆದಿರುವ ಸ್ಟೇಡಿಯಂ ಮುಚ್ಚಿದ್ದರೆ ಪಕ್ಕದಲ್ಲಿಯೇ ಇರುವ ಕಿಂಡಿಯಲ್ಲೇ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಒಳಗೆ ಮಕ್ಕಳು ಆಟವಾಡುವವರಿಗೂ ಗುದ್ದಿಸುವ ಪರಿಜ್ಞಾನವೇ ಇಲ್ಲದೇ ಬೇಕಾಬಿಟ್ಟಿ ವಾಹನವನ್ನು ಚಲಾಯಿಸುತ್ತಿರುತ್ತಾರೆ.
     ಆರಕ್ಷಕ ಮತ್ತು ಆರ್.ಟಿ.ಓ ಅಧಿಕಾರಿಗಳು ಬೆಳಗಿನ ಟ್ಯೂಷನ್ ಕೇಂದ್ರಗಳತ್ತ ಹೋಗಿ ಮಕ್ಕಳಿಗೆ ಸ್ವಲ್ಪ ತಿಳಿಹೇಳಿದರೆ ಉತ್ತಮಕೆಲಸವಾಗುತ್ತದೆ.ರಸ್ತೆ ಸುರಕ್ಷತಾ, ವಾಯು ಮಾಲಿನ್ಯ ನಿಯಂತ್ರಣ ಮಾಸಾಚರಣೆಯನ್ನು ಕಚೇರಿಗಳಲ್ಲಿ ಮಾಡದೆ ಇದೇ ಕೆಲಸವನ್ನು ಶಾಲಾ ಕಾಲೇಜುಗಳಲ್ಲಿ ಆಯೋಜಿಸಿ ಬೆಳಗ್ಗೆ ಟ್ಯೂಷನ್‍ಗೆ ಬರುವ ಮಕ್ಕಳೊಂದಿಗೆ ಪೋಷಕರಿಗೆ ಮನವೊಲಿಸಿ ಆದಷ್ಟು ಅಪ್ರಾಪ್ತರ ಕೈಗೆ ವಾಹನಕೊಡದಂತೆ ಮಾಡಬೇಕಾದ ಜವಾಬ್ದಾರಿ ಎಲ್ಲರ ಮೇಲಿದ್ದು, ಹೆಚ್ಚು ಅಪಘಾತಗಳಾಗುವ ಮೊದಲೇ ಎಚ್ಚೆತ್ತುಕೊಳ್ಳುವುದು ಉತ್ತಮ.
 
      ಶಾಲೆ ಪ್ರಾರಂಭವಾಗುವ ಬೆಳಗ್ಗೆ 8 ರಿಂದ 10 ಮತ್ತು ಸಂಜೆ 3-6 ರವರೆಗೆ ತಿಪಟೂರಿನಲ್ಲಿ ವಾಹನದ ವಿಪರೀತ ದಟ್ಟಣೆ ಇದ್ದು ಅಪ್ರಾಪ್ತರ ವಾಹನ ಸವಾರಿ ಹೆಚ್ಚಾಗಿದ್ದು ವಿದ್ಯಾರ್ಥಿಗಳು ಅಜಾಗರೂಕತೆಯಿಂದ ಬೇಕಾಬಿಟ್ಟಿ ವಾಹನ ಚಲಾಯಿಸಿ ಅಪಘಾತಗಳನ್ನು ಉಂಟುಮಾಡುತ್ತಿದ್ದಾರೆ.

ಶಿವಾನಂದ್, ಶಿಕ್ಷಕ, ಆಲೂರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link