ಸರ್ಕಾರಿ ಬಸ್ಸುಗಳ ಮೇಲೇಕೆ ಕಣ್ಣು?

ದಾವಣಗೆರೆ:

     ಸಾಮಾಜಿಕ ಅಂತರ ಎಲ್ಲಿಯೂ ಇಲ್ಲ. ನಮ್ಮ ಬಸ್ಸುಗಳ ಮೇಲೆಕೆ ಸಿಟ್ಟು ನಿಮಗೆ ಅಣ್ಣಾ ಎಂದು ಸಾರಿಗೆ ಸಚಿವರೂಆದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಪ್ರಶ್ನಿಸಿದರು. ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಎಂಟಿಸಿ ಬಸ್ಸುಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುತ್ತಿಲ್ಲ ಎನ್ನುತ್ತೀರಿ.ಆದರೆ, ದ್ವಿಚಕ್ರ ವಾಹನಗಳಲ್ಲಿ ಒಬ್ಬರೇ ಸಂಚರಿಸಬೇಕೆಂದರೂ ಇಬ್ಬರು, ಮೂವರು ಓಡಾಡುತ್ತಾರೆ .

        ವಿಮಾನಗಳಲ್ಲಿ ಫುಲ್‍ ಸೀಟ್‍ಗೆ ಅವಕಾಶವಿದೆ.ಈ ಬಗ್ಗೆ ಯಾರೂ ಕೇಳುವುದಿಲ್ಲ ಏಕೆ? ಎಂದ ಅವರು, ಕೊರೊನಾ ವೈರಸ್ ನಿಯಂತ್ರಣಕ್ಕೆ ಸಾಕಷ್ಟು ಅರಿವು ಮೂಡಿಸಲಾಗುತ್ತಿದೆ.ಆದರೂ, ಸಾಮಾಜಿಕ ಅಂತರವನ್ನು ಎಲ್ಲಿಯೂ ಕಾಯ್ದುಕೊಳ್ಳುತ್ತಿಲ್ಲ. ಸಾರಿಗೆ ಇಲಾಖೆ ಮೇಲೆಯೇ ಏಕೆ ನಿಮ್ಮ ಕಣ್ಣು ಎಂದು ಮಾಧ್ಯಮದವರಿಗೆ ಮರು ಪ್ರಶ್ನಿಸಿದರು.

      ಸಾಮಾಜಿಕ ಅಂತರದಿಂದಾಗಿ ಸಾರಿಗೆ ಇಲಾಖೆಗೆ ದೊಡ್ಡ ಪ್ರಮಾಣದ ಹಾನಿಯಾಗುತ್ತಿದೆ.ಈಗಾಗಲೇ ಸಾಕಷ್ಟು ನಷ್ಟದಲ್ಲಿದ್ದೇವೆ. ಎಲ್ಲಿಯೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಆಗುತ್ತಿಲ್ಲ. ಸಾಧ್ಯವಾದಷ್ಟು ಮುನ್ನೆಚ್ಚರಿಕೆ, ಮುಂಜಾಗ್ರತಾ ಕ್ರಮ ಕೈಗೊಳ್ಳುವ ಕೆಲಸವನ್ನೂ ಮಾಡುತ್ತಿದ್ದೇವೆ ಎಂದರು.

       ಇದಕ್ಕೂ ಮುನ್ನ ದಾವಣಗೆರೆ ಕೆಎಸ್ಸಾರ್ಟಿಸಿ ಬಸ್ಸು ನಿಲ್ದಾಣಕ್ಕೆ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ವಾಹನದಿಂದ ಇಳಿಯುತ್ತಿದ್ದಂತೆಯೇ ಹಾರ ಹಾಕಿದ ಅಭಿಮಾನಿ, ಕಾರ್ಯಕರ್ತನೊಬ್ಬ ಮುಂದಿನ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಎಂಬುದಾಗಿ ಜೈಕಾರಕೂಗಿದ.ತಕ್ಷಣವೇ ಲಕ್ಷ್ಮಣ ಸವದಿ ಏಯ್ ಸುಮ್ನಿರು… ಎಂಬುದಾಗಿ ಕಾರ್ಯಕರ್ತನಿಗೆ ತಡೆದು, ಮುಂದೆ ಸಾಗಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap