ಯೋಗಿ ಮೇಲೆ ಕ್ರಮಕೈಗೊಂಡ ಆಯೋಗ ಕಲ್ಯಾಣ್ ಸಿಂಗ್ ರನ್ನು ಬಿಟ್ಟಿದ್ದೇಕೆ : ಹೆಚ್ ಕೆಪಾಟೀಲ್

ಹುಬ್ಬಳ್ಳಿ

    ಭಾರತೀಯ ಸೇನೆಯನ್ನುಮೋದಿ ಸೇನೆ ಎಂದು ಹೇಳಿಕೆ ನೀಡಿದ್ದ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರ ಮೇಲೆ ಕೊನೆಗೂ ಸಣ್ಣಕ್ರಮಕ್ಕೆ ಮುಂದಾಗಿರುವ ಚುನಾವಣಾ ಆಯೋಗ,ರಾಜಸ್ತಾನದ ರಾಜ್ಯಪಾಲ ಕಲ್ಯಾಣ್ ಸಿಂಗ್ ಅವರ ಮೇಲೆಕ್ರಮ ಕೈಗೊಳ್ಳದೇ ಇರುವುದಕ್ಕೆ ಕಾರಣ ಏನು ಎನ್ನುವುದನ್ನ ನಾವು ಪ್ರಶ್ನಿಸಬೇಕಾಗಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಹೆಚ್ ಕೆ ಪಾಟೀಲ್ ಹೇಳಿದ್ದಾರೆ.

    ಹುಬ್ಬಳ್ಳಿ ನಗರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿಮಾತನಾಡಿದ ಅವರು, ರಾಜಸ್ಥಾನದ ರಾಜ್ಯಪಾಲರುಸಾಂವಿಧಾನಿಕ ಹುದ್ದೆಯಲ್ಲಿದ್ದಾರೆ. ಅವರು, ಬಹಿರಂಗವಾಗಿಮೋದಿ ಅವರಿಗೆ ಮತ ನೀಡಿ ಎಂದು ಪ್ರಚಾರ ಕಾರ್ಯದಲ್ಲಿತೊಡಿಗಿಕೊಂಡಿದ್ದು ಸಂವಿಧಾನಕ್ಕೆ ವಿರೋಧವಾಗಿದೆ. ಈನಿಟ್ಟಿನಲ್ಲಿ ನೀಡಿದ್ದ ದೂರನ್ನು ಚುನಾವಣಾ ಆಯೋಗರಾಷ್ಟ್ರಪತಿ ಅವರಿಗೆ ರವಾನಿಸಿತ್ತು. ಆದರೆ,ರಾಷ್ಟ್ರಪತಿಯವರು ಅವರ ಮೇಲೆ ಕ್ರಮ ಕೈಗೊಳ್ಳುವಬದಲು ಗೃಹ ಇಲಾಖೆಗೆ ರವಾನಿಸಿದ್ದು ಸರಿಯಾದಕ್ರಮವಲ್ಲ.

     ರಾಷ್ಟ್ರಪತಿಗಳು ತಕ್ಷಣ ಕಲ್ಯಾಣ್ ಸಿಂಗ್ ಅವರನ್ನುಅಮಾನತ್ತುಗೊಳಿಸಬೇಕಾಗಿತ್ತು. ಇಲ್ಲವೆ ಚುನಾವಣಾಪ್ರಕ್ರಿಯೆ ಮುಗಿಯುವ ವರೆಗೂ ಕಡ್ಡಾಯ ರಜೆಯಲ್ಲಿಕಳುಹಿಸಬೇಕಾಗಿತ್ತು. ಇವರೆಡನ್ನೂ ಮಾಡದರಾಷ್ಟ್ರಪತಿಗಳು ಚುನಾವಣಾ ಪ್ರಕ್ರಿಯೆಯಪಾವಿತ್ರತ್ಯತೆಯನ್ನು ಕಾಪಾಡುವಲ್ಲಿ ವಿಫಲರಾಗಿದ್ದಾರೆಎಂದು ಆರೊಪಿಸಿದರು. ರಾಷ್ಟ್ರಪತಿಗಳ ಈ ಕ್ರಮಇತಿಹಾಸದಲ್ಲಿ ಸೇರ್ಪಡೆಯಾಗಲಿದೆ ಎಂದು ಹೇಳಿದರು.

     ಭಾರತೀಯ ಸೇನೆಯನ್ನು ಮೋದಿ ಸೇನೆ ಎಂದು ಹೇಳಿಕೆನೀಡಿದ ಯೋಗಿ ಆದಿತ್ಯನಾಥ್ ಅವರಂತಹ ಹೇಳಿಕೆಯನ್ನು ಸ್ವಾತಂತ್ರ್ಯಾ ನಂತರ ಯಾವುದೇ ಕೆಟ್ಟ ರಾಜಕಾರಣಿಯೂನೀಡಿರಲಿಲ್ಲಾ. ಯಾವುದೇ ಕೆಟ್ಟ ರಾಜಕಾರಣಿಯೂಸೈನ್ಯವನ್ನು ರಾಜಕೀಯಕ್ಕೆ ಬಳಸಿಕೊಂಡಿ ರಲಿಲ್ಲಾ . ಸೈನ್ಯವನ್ನು ಪ್ರಸ್ತಾಪಿಸಿ ಜನರನ್ನು ಭಾವೋದ್ರೆಕಕ್ಕೆತಗೆದುಕೊಂಡು ಹೋಗಲು ಪ್ರಯತ್ನಿಸಿರಲಿಲ್ಲಾ. ಯೋಗಿ ಆದಿದ್ಯನಾಥ್ ಅವರು ಬಹಳ ಅನುಭವ ಹೊಂದಿರುವವ್ಯಕ್ತಿ. ಕಾವಿ ಹಾಕಿಕೊಂಡರೂ ಕೂಡಾ ಗುನ್ನೆ ಪ್ರವೃತ್ತಿಯಮನಸ್ಸನ್ನು ಹೊಂದಿದ್ದಾರೆ. ದೇಶದ ಸಂವಿಧಾನ ನೀಡಿರುವ ಪ್ರಮುಖವಾದ ಹುದ್ದೆಯನ್ನು ನಿಭಾಯಿಸುತ್ತಿದ್ದಾರೆ. ಮೋದಿಸೇನೆಯ ಗೆಲವು ಮೋದಿ ಸೇನೆಯಿಂದ ರಕ್ಷಣೆ ಎನ್ನುವಹೇಳಿಕೆ ನೀಡುವ ಮೂಲಕ ನೀಚಮಟ್ಟದ ರಾಜಕಾರಣಕ್ಕೆಕೈಹಾಕಿದ್ದಾರೆ ಎಂದರು.

      ಈ ಹೇಳಿಕೆಯನ್ನು ನೀಡಿದ ಕೂಡಲೇ ಕೆಪಿಸಿಸಿ ಪ್ರಚಾರಸಮಿತಿಯ ವತಿಯಿಂದ ವ್ಯಾಪಕವಾಗಿ ಟೀಕಾತ್ಮಕಹೇಳಿಕೆಯನ್ನು ನೀಡಲಾಯಿತು. ಅಲ್ಲದೆ, ಮಾಧ್ಯಮಗಳಮೂಲಕ ಚುನಾವಣಾ ಆಯೋಗದ ಗಮನ ಸೆಳೆಯಲೂಪ್ರಯತ್ನಿಸಲಾಯಿತು. ಇದರ ಫಲವಾಗಿ ಚುನಾವಣಾಆಯೋಗ ಸಣ್ಣ ಮಟ್ಟದ ಕ್ರಮವನ್ನಾದರೂ ಕೈಗೊಂಡಿದೆ. ಇದು ಸ್ವಾಗತಾರ್ಹ ಎಂದರು.

       ಇದಲ್ಲದೆ ವಿದೇಶದಲ್ಲಿ 3 ಲಕ್ಷ ಕೋಟಿ ರೂಪಾಯಿಗಳಷ್ಟುಹಣವನ್ನು ಮುದ್ರಿಸಿ ಭಾರತದಲ್ಲಿ ಚಲಾವಣೆಗೊಳಿಸುವರಬಗ್ಗೆ ಈಗಾಗಲೇ ಸುಪ್ರೀಂ ಕೋರ್ಟಿನ ಮುಖ್ಯನ್ಯಾಯಮೂರ್ತಿಗಳ ಗಮನ ಸೆಳೆಯಲಾಗಿದೆ. ಇದರ ಬಗ್ಗೆತಕ್ಷಣ ತನಿಖೆ ಪ್ರಾರಂಭಿಸಬೇಕು. ಹಾಗೂ ಈ ಪ್ರಕರಣದಪ್ರಮುಖ ಸಾಕ್ಷಿಗಳಿಗೆ ಸೂಕ್ತ ಭದ್ರತೆಯನ್ನೂ ನೀಡಬೇಕುಎಂದು ಮನವಿಮಾಡಿದ್ದೆನೆ ಎಂದರು.

       ಕಾಂಗ್ರೆಸ್ ಪಕ್ಷ ಅನುಷ್ಠಾನಕ್ಕೆ ತರಬಹುದಾದಂತಹಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದೆ. ಈಚುನಾವಣಾ ಪ್ರಣಾಳಿಕೆಯನ್ನು ಜನರು ಬಹಳ ಒಳ್ಳೆಯರೀತಿಯಲ್ಲಿ ಸ್ವಾಗತಿಸಿದ್ದಾರೆ. ನ್ಯಾಯ್ ಯೋಜನೆಯಮೂಲಕ 25 ಕೋಟಿ ಜನರು ಬಡತನ ರೇಖೆಯಿಂದ ಮೇಲೆಮಧ್ಯಮ ವರ್ಗಕ್ಕೆ ಅಭಿವೃದ್ದಿಗೊಳಿಸಲಿದ್ದೇವೆ. ನಮ್ಮಪ್ರಣಾಳಿಕೆಯ ನಂತರ ಬಿಜೆಪಿಯ ನೆಲೆ ಕುಸಿದಿದ್ದು, ಮೋದಿಅವರ ಮಾತುಗಳಲ್ಲಿ ಬದಲಾವಣೆ ಆಗಿದೆ. ಇಂತಹಸಂಧರ್ಭದಲ್ಲಿ ಅರಾಜಕತೆಯ ಮೂಲಕ ಏನನ್ನಾದರೂಸಾಧಿಸಬಹುದು ಎನ್ನುವ ಪ್ರಯತ್ನವನ್ನು ಬಿಜೆಪಿನಾಯಕರು ಮಾಡುತ್ತಿದ್ದಾರೆ ಎಂದರು.

       ರಾಜ್ಯದಲ್ಲಿ ಮೈತ್ರಿ ಅಭ್ಯರ್ಥಿಗಳ ಪರವಾದ ಅಲೆ ಇದೆ. ನಮ್ಮಮೈತ್ರಿ ಅಭ್ಯರ್ಥಿಗಳು 20 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲವುಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

        ಹುಬ್ಬಳ್ಳಿ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ವ್ಯಾಪಕವಾಗಿ ಪ್ರಚಾರ ಕೈಗೊಂಡ ಹೆಚ್ ಕೆ ಪಾಟೀಲ್ ಅವರು ಧಾರವಾಡದ ಮಾರ್ಡನ್ ಹಾಲ್ ನಲ್ಲಿ ಮೈತ್ರಿ ಅಭ್ಯರ್ಥಿ ವಿನಯ ಕುಲಕರ್ಣಿ ಅವರ ಪರ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದರು .ನಂತರ ನಲವಾಡಿ ಅಣ್ಣಿಗೇರಿ ಹಾಗೂ ಗದಗದಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link