ರಸ್ತೆಗೆ ಇನ್ನೆಷ್ಟು ಬಲಿಬೇಕು, ಜನಪ್ರತಿನಿಧಿಗಳು ಈಗಲಾದರು ಎಚ್ಚೆತ್ತುಕೊಳ್ಳುತ್ತಾರಾ..?

ತಿಪಟೂರು
  ರಾಜ್ಯಗಳಲ್ಲಿ ರಸ್ತೆಗಳು ಸರಿಯಿಲ್ಲದೆ ಪತ್ರಿಕೆಗಳಲ್ಲಿ ಮತ್ತು ಟಿ.ವಿ ವಾಹಿನಿಗಳಲ್ಲಿ ನೋಡುತ್ತಿದ್ದ ಜನರಿಗೆ ಮಂಗಳವಾರ ಸಂಜೆ ನಗರದಲ್ಲೇ ನೋಡು ದೌರ್ಭಾಗ್ಯ ಒದಗಿಬಂತು.ನಗರದಲ್ಲಿ ಸಣ್ಣ ಸಣ್ಣ ಅಪಘಾತಗಳು ಆಗುವುದು ಸಾಮಾನ್ಯವಾಗಿತ್ತು. ಜನರು ಎದ್ದೆನೋ ಬಿದ್ದೆನೋ ಎನ್ನುವಂತಹ ರಸ್ತೆಯಲ್ಲಿ ಓಡಾಡುತ್ತಿದ್ದರು. ಆದರೆ ನೆನ್ನೆ ಅಮಾವಾಸ್ಯೆ ಕತ್ತಲಿನಲ್ಲಿ ಅಪಘಾತವೊಂದು ನಡೆದುಹೋಗಿ ಒಂದು ಮುಗ್ಧ ಮಹಿಳೆ ಬಲಿಯಾಗಿರುವ ಘಟನೆ ಜರುಗಿದೆ.
 
   ತಾಲ್ಲೂಕಿನ ಮಾದಿಹಳ್ಳಿಯಿಂದ ತನ್ನ ತಾಯಿಯನ್ನು ಕೂರಿಸಿಕೊಂಡು ನಗರಕ್ಕೆ ಆಗಮಿಸುತ್ತಿರುವಾಗ ರಸ್ತೆಯ ಮಧ್ಯೆ ಇರುವ ಕಂದಕವು ಮೃತ್ಯುಸ್ವರೂಪಿಯಾಗಿ ಎದುರಿಗೆ ಬಂದಿತು. ರಸ್ತೆ ಮಧ್ಯೆ ಇರುವ ಗುಂಡಿಗೆ ಇಳಿದ ದ್ವಿಚಕ್ರವಾಹನದಲ್ಲಿ ಕುಳಿತಿದ್ದ ಭಾಗ್ಯಮ್ಮ ಕೋಂ ಕುಮಾರಸ್ವಾಮಿ ಆಯತಪ್ಪಿ ರಸ್ತೆಗೆ ಬಿದ್ದ ಸಂದರ್ಭದಲ್ಲಿ ಯಮನಾಗಿ ಬಂದ ಬೃಹತ್ ಲಾರಿ ಎನ್.ಎಲ್ 01 ಎ.ಸಿ. 3803 ತಲೆಯ ಮೇಲೆ ಹರಿದ ಪರಿಣಾಮವಾಗಿ ಭಾಗ್ಯಮ್ಮ ಸ್ಥಳದಲ್ಲೇ ಮೃತಪಟ್ಟಿದ್ದು ಜನರು ಧಂಗೆ ಏಳುವ ಮೊದಲೇ ಅಧಿಕಾರಿಗಳು, ಜನಪ್ರತಿನಿಧಿಗಳು ರಸ್ತೆಗಳನ್ನು ಸರಿಪಡಿಸುತ್ತಾರೆಯೇ ಎಂಬುದು ನಿಗೂಢ ಪ್ರಶ್ನೆಯಾಗಿಯೇ ಉಳಿದಿದೆ.
ವಾಟ್ಸ್‍ಆಪ್‍ನ ಕೆಲವು ಚರ್ಚೆಗಳು:
   ತಿಪಟೂರಿನ ಬಿ.ಎಚ್.ರಸ್ತೆ ಕೋರ್ಟ್ ಮುಂಭಾಗದಲ್ಲಿ ಗುಂಡಿ ಬಿದ್ದು ಸುಮಾರು ವರ್ಷಗಳೇ ಕಳೆದರೂ ಯಾವುದೇ ಅಧಿಕಾರಿಗಳು ಕ್ರಮಕೈಗೊಳ್ಳಲಿಲ್ಲ. ಹಲವು ಬಾರಿ ಫೋಟೋ ತೆಗೆದು ಅವರ ಗಮನಕ್ಕೆ ತಂದರೂ ಸಂಬಂಧಪಟ್ಟ ಗುಂಡಿ ರಿಪೇರಿ ಮಾಡಿಸುವ ಗೋಜಿಗೆ ಹೋಗಲಿಲ್ಲ. ಅಧಿಕಾರಿಗಳ ಹಾಗೂ ತಾಲ್ಲೂಕು ಆಡಳಿತಕ್ಕೆ ಧಿಕ್ಕಾರ ನಾಚಿಕೆಯಾಗಬೇಕು ಇವರ ಜನ್ಮಕ್ಕೆ.
   ತಿಪಟೂರು ನಗರದಾದ್ಯಂತ ರಸ್ತೆಗಳ ಅವ್ಯವಸ್ಥೆ ಕುರಿತಾಗಿ ದಿನನಿತ್ಯ ದೂರುಗಳು ದಾಖಲಾಗುತ್ತಿದ್ದರೂ ಸುಧಾರಣೆ ಕಾಣದೆ ಇದ್ದು ಅದು ಜೀವಗಳ  ಹಾನಿಯಾಗುವ ಮಟ್ಟಕ್ಕೆ ಹೋಗಿರುವುದು  ದುರದೃಷ್ಟಕರ. ಈ ತಾಲ್ಲೂಕನ್ನು ವಾಣಿಜ್ಯ ನಗರ ಮುಂದುವರಿದ ನಗರ ಎಂದು ಹೇಳಲಾಗುವುದೆ.ಇನ್ನಾದರೂ ಆಡಳಿತ ವ್ಯವಸ್ಥೆ ಸುಧಾರಣೆ ಆಗುವುದೆಂದು ನಿರೀಕ್ಷಿಸಬಹುದೇ?ಇಷೆಲ್ಲಾ ಚರ್ಚೆಗಳಾಗುತ್ತಿದ್ದು ಎಲ್ಲಾ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಲಿಮಾಜಿ ಶಾಸಕರುಗಳು, ರಾಜಕೀಯ ಪಕ್ಷದ ಮುಖಂಡರುಗಳು ಗಮನಕ್ಕೆ ಬಂದರು ಯಾರು ಕಣ್ಣು ಕಾಣದ ಗಾವಿಲರಂತೆ ವರ್ತಿಸುತ್ತಿದ್ದಾರೆ. 
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap