ಮಿಡಿಗೇಶಿ
ಬೇಡತ್ತೂರು ಗ್ರಾಮದ ಬಳಿಯ ಎಂಎಸ್‍ಐಎಲ್ ಮದ್ಯದ ಅಂಗಡಿಯಲ್ಲಿ ಏ. 15 ರ ರಾತ್ರಿ ಮದ್ಯದ ಅಂಗಡಿಯಲ್ಲಿ ಕಳ್ಳತನವಾಗಿತ್ತು. ಕಾವಲುಗಾರರಿಬ್ಬರ ಕೈಕಟ್ಟಿ 115 ಕೇಸ್ ಮದ್ಯ ಮತ್ತು ಏಳು ಕೇಸ್ ಬಿಯರ್‍ಗಳು ಕಳುವಾಗಿದೆ ಎಂದು ಮದ್ಯದಂಗಡಿ ಕ್ಯಾಷಿಯರ್ ರಂಗಪ್ಪ ಮಿಡಿಗೇಶಿ ಪೊಲೀಸ್ ಠಾಣೆಯಲ್ಲಿ ದುರು ದಾಖಲಿಸಿದ್ದರು. ಸಿಪಿಐ ಎಂ.ಎಸ್ ಸರ್ದಾರ್ ತನಿಖೆ ಕೈಗೊಂಡಿದ್ದರು.
ಏ. 21 ರಂದು ಅಂಗಡಿ ಮಾಲೀಕ ಬೇಡತ್ತೂರಿನ ಅಂಜನರೆಡ್ಡಿ, ರವೀಂದ್ರ ರೆಡ್ಡಿ, ಪ್ರಭಾಕರ ರೆಡ್ಡಿಯವರು ನಾರಪ್ಪನಹಳ್ಳಿ ಸಮೀಪ ಬಂಧನಕ್ಕೆ ಒಳಗಾಗಿದ್ದರು. ಬಂಧಿತರಿಂದ ಎರಡೂವರೆ ಲಕ್ಷ ನಗದು ಹಾಗೂ ಮೂರು ಕೇಸು ಮದ್ಯವು ವಶವಾಗಿತ್ತು. ಆರೋಪಿಗಳಿಂದ ಮದ್ಯವನ್ನು ಖರೀದಿಗೆ ತೆಗೆದುಕೊಂಡಿದ್ದ ಹಿಂದೂಪುರದ ಕಿರಣ್ ಎಂಬಾತ ತಲೆಮರೆಸಿಕೊಂಡಿದ್ದು, ಈತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣರವರ ಆದೇಶದಂತೆ ಡಿವೈಎಸ್‍ಪಿ ಪ್ರವೀಣ್ ನೇತೃತ್ವದಲ್ಲಿ ಸಿಪಿಐ ಕಾರ್ಯಚರಣೆ ಕೈಗೊಂಡಿದ್ದರು. ಕ್ರೈಂ ಪೊಲೀಸರಾದ ನಟರಾಜು, ರಂಗನಾಥ್, ರಾಮಕೃಷ್ಣ, ಪ್ರಕಾಶ್, ಸಂಜೀವಪ್ಪ, ರಾಯಪ್ಪ, ದಯಾನಂದ, ಎ.ಎಸ್.ಐ ರವಿ, ರವಿಕುಮಾರ್, ಚಾಲಕರುಗಳಾದ ಶ್ರೀನಿವಾಸ್, ಗುರು ಕನ್ನೇಶ್ವರ ಹಾಗೂ ಇತರರು ಭಾಗವಹಿಸಿದ್ದರು. ಮದ್ಯದಂಗಡಿಯ ಮಾಲೀಕ ಅಂಜನರೆಡ್ಡಿ ಮಾಡಿಕೊಂಡಿದ್ದ ಸಾಲ ತೀರಿಸಲು ಕಳ್ಳತನದ ನಾಟಕವಾಡಿ, ತಾನೆ ತೋಡಿದ ಹಳ್ಳಕ್ಕೆ ಬಿದ್ದಿರುತ್ತಾನೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ