ಚಿತ್ರದುರ್ಗ
ಇಲ್ಲಿನ ಮುರುಘಾಮಠದಲ್ಲಿ ಆರಂಭವಾಗಿರುವ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಗುರುವಾರದಂದು ಶ್ರೀಮಠದ ಆವರಣದಲ್ಲಿ ಹೊನಲು ಬೆಳಕಿನ ಬಾಸ್ಕೆಟ್‍ಬಾಲ್ ಪಂದ್ಯಾವಳಿ ಹಾಗೂ ಮಹಿಳಾ ಕ್ರೀಡಾಕೂಟ ಆಯೋಜಿಸಲಾಗಿತ್ತು
ಕ್ರೀಡಾಕೂಟಕ್ಕೆ ಚಾಲನೆಯನ್ನು ನೀಡಿದ ಡಾ.ಶಿವಮೂರ್ತಿ ಮುರುಘಾ ಶರಣರು ಮಾತನಾಡಿ ಗಂಡು ಮಕ್ಕಳು, ಮಕ್ಕಳನ್ನು ಹೆರುವುದಿಲ್ಲ, ಮಕ್ಕಳನ್ನು ಹೆರವ ಭಾಗ್ಯವಿರವುದು ಹೆಣ್ಣುಮಕ್ಕಳಿಗೆ ಮಾತ್ರ. ಹೆಣ್ಣುಮಕ್ಕಳು ಇಂದು ಅವನನ್ನು ಮೀರಿಸಿ ಜಗತ್ತಿನ ಗಮನಸೆಯುವಂತ ಪ್ರಯತ್ನವನ್ನು ಮಾಡುತ್ತಿದ್ದಾರೆ. ಅಪ್ರತಿಮ ಸಾಧನೆಯನ್ನು ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು
ಶ್ರೀಮಠವು ಮಹಿಳಾ ಪ್ರತಿಭೆಗಳಿಗೂ ಅವಕಾಶ ಮಾಡುಕೊಡುತ್ತಿದೆ.
ಮಹಿಳೆಯರು ತಮ್ಮಲ್ಲಿರುವ ಅದಮ್ಯ ಉತ್ಸಾಹವನ್ನು ಕ್ರಿಯಾಶೀಲತೆಯನ್ನು ಸಾಹಸಕ್ಕಾಗಿ ಬಳಸಿಕೊಂಡು, ಸಾಹಸ ಸ್ತ್ರೀ ಎನ್ನಿಸಿಕೊಳ್ಳಬೇಕು ಋಣಾತ್ಮಕವಾಗಿರುವ ಕೆಲಸಗಳಿಗೆ ನಿಮ್ಮ ಆಲೋಚನೆಗಳನ್ನು ಬೆಳಸಿಕೊಳ್ಳಬೇಡಿ. ಸೃಜನಶೀಲತೆ ಮತ್ತು ಕ್ರಿಯಾಶೀಲತೆ ಕಡೆಗೆ ನಿಮ್ಮ ಆಲೋಚನೆಗಳನ್ನು ಬೆಳಸಿಕೊಳ್ಳಬೇಕು ಎಂದು ಕರೆ ನೀಡಿದರು
ಶ್ರೀಮಠಕ್ಕೆ ಸಾಮಾಜಿಕ ಹೊಣೆಗಾರಿಕೆಯಿದೆ. ಯಾರು ಅವಕಾಶದಿಂದ ವಂಚಿತರಾಗಬಾರದೆಂದು ಎಲ್ಲರಿಗೂ ಅವಕಾಶವನ್ನು ನೀಡುತ್ತದೆ. ಯಾರು ಅವಕಾಶವನ್ನು ಬಳಸಿಕೊಳ್ಳುತ್ತಾರೆ ಅವರು ಗೆಲ್ಲುತ್ತಾರೆ. ಇಂದು ಸೋತವರೆ ಮುಂದೆ ಗೆಲ್ಲುತ್ತಾರೆ. ಇದು ನಿಸರ್ಗದ ನಿಯಮವೂ, ಆಟದ ನಿಯಾಮವೂ ಆಗಿದೆ ಎಂದು ತಿಳಿಸಿದರು.
ಕಾಗಿನೆಲೆ ಗುರುಪೀಠದ ಜಗದ್ಗುರು ಶ್ರೀನಿರಂಜನಾನಂದಪುರಿ ಮಹಾಸ್ವಾಮಿಗಳು, ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನ ವಾಲ್ಮೀಕಿ ಶ್ರೀಗಳು, ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮಿಗಳು, ವನಶ್ರೀ ಮಠದ ಶ್ರೀ ಬಸವಕುಮಾರ ಸ್ವಾಮಿಗಳು ಹಾಗೂ ಹರಗುರು ಚರಮೂರ್ತಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಆರತಿ ಶಿವಮೂರ್ತಿ ಸ್ವಾಗತಿಸಿದರೇ, ಉಮೇಶ ಪತ್ತರ್ ಪ್ರಾರ್ಥಿಸಿದರೆ, ರೂಪವಿಜಯಕುಮಾರ್ ನಿರೂಪಿಸಿದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ