ಬೆಂಗಳೂರು
ಚೆನ್ನಮ್ಮನ ಕೆರೆ ಅಚ್ಚುಕಟ್ಟುವಿನಲ್ಲಿ ನಿವೇಶನ ಕೊಡಿಸುವ ನೆಪದಲ್ಲಿ ಐನಾತಿ ಮಹಿಳೆಯೊಬ್ಬರು ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರನ್ನು ವಂಚನೆ ನಡೆಸುವುದು ಬೆಳಕಿಗೆ ಬಂದಿದೆ.
ಕಡಿಮೆ ಬೆಲೆಯಲ್ಲಿ ನಿವೇಶನ ಕೊಡಿಸುವುದಾಗಿ 4.10 ಲಕ್ಷ ರೂಗಳನ್ನು ಪಡೆದು ಗಿರಿಜಾ ಎನ್ನುವರು ವಂಚನೆ ನಡೆಸಿದ್ದಾರೆ ಎಂದು ರಿಯಲ್ ಎಸ್ಟೇಟ್ ಉದ್ಯಮಿ ರಾಮಚಂದ್ರೇಗೌಡ ದೂರು ನೀಡಿದ್ದು ಪ್ರಕರಣ ದಾಖಲಿಸಿರುವ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ನಾಲ್ಕು ವರ್ಷಗಳಿಂದ ಪರಿಚಯವಾಗಿದ್ದ ಗಿರಿಜಾ ಎಂಬುವರು ಹಣ ಕೊಟ್ಟರೆ ನಗರದ ಹೊರವಲಯದ ದೊಡ್ಡ ಆಲದ ಮರ ಬಳಿ 30*30 ಅಡಿ ನಿವೇಶನ ಕೊಡಿಸುವುದಾಗಿ ಎಂದು ಆಸೆ ತೋರಿಸಿದ್ದಾಳೆ. ಇದನ್ನು ನಂಬಿದ ರಾಮಚಂದ್ರೆಗೌಡರು 4.10 ಲಕ್ಷ ರೂ. ಹಣ ನೀಡಿದ್ದಾರೆ. ಹಣ ನೀಡುವಾಗ ಕರಾರು ಪತ್ರಕ್ಕೆ ಸಹಿ ಹಾಕಿ ಮಹಿಳೆ ಹಣ ಪಡೆದುಕೊಂಡಿದ್ದಾರೆ.
ಹಲವು ದಿನಗಳಾದರೂ ನಿವೇಶನ ಕೊಡಿಸದೇ ಸತಾಯಿಸಿದ್ದರಿಂದ ಹಣ ವಾಪಸ್ ನೀಡುವಂತೆ ಕೇಳಿದ್ದಾರೆ. ಇದಕ್ಕೆ ಪ್ರತಿಯಾಗಿ ಹಣ ವಾಪಸ್ ನೀಡುವುದಿಲ್ಲ. ಒಂದು ವೇಳೆ ಹಣ ಮತ್ತೆ ಕೇಳಿದರೆ ನಿನ್ನ ಮೇಲೆ ರೇಪ್ ಕೇಸ್ ಹಾಕುವುದಾಗಿ ಬೆದರಿಕೆ ಹೊಡ್ಡಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.ಈ ಸಂಬಂಧ ದೂರು ದಾಖಲಿಸಿಕೊಂಡ ಪೆÇಲೀಸರು ವಂಚನೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








