ಬೆಂಗಳೂರು
ಕೌಟುಂಬಿಕ ಕಲಹದ ಹಿನ್ನೆಲೆ ಮಹಿಳಾ ಆಯೋಗದಿಂದ ನಟ ದುನಿಯಾ ವಿಜಯ್ಗೆ ನೋಟಿಸ್ ಜಾರಿಯಾಗಿದೆ.ಕಳೆದ ವಾರ ವಿಜಿ ಮೊದಲ ಪತ್ನಿ ನಾಗರತ್ನಾ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ ಅವರನ್ನು ಭೇಟಿ ಮಾಡಿ, ತನಗಾದ ನೋವುಗಳನ್ನು ಹಂಚಿಕೊಂಡಿದ್ದರು.
ತಮ್ಮ ಪತಿಯಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು,ಇದಕ್ಕೆ ತನ್ನ ಒಪ್ಪಿಗೆ ಇರದಿರುವುದು, ಕುಟುಂಬ ನಿರ್ವಹಣೆಗೆ ವಿಜಿ ಹಣ ನೀಡುವುದನ್ನು ನಿಲ್ಲಿಸಿದ್ದು ಸೇರಿದಂತೆ ಸಾಕಷ್ಟು ಸಮಸ್ಯೆಗಳನ್ನು ಹೇಳಿಕೊಂಡಿದ್ದರು.ಹಾಗಾಗಿ ಇದಕ್ಕೆ ಸೂಕ್ತ ನ್ಯಾಯ ಒದಗಿಸುವಂತೆ ಮನವಿ ಮಾಡಿಕೊಂಡಿದ್ದರು.
ನಾಗರತ್ನಾಳ ಮನವಿಯಂತೆ ಮಹಿಳಾ ಆಯೋಗ ದುನಿಯಾ ವಿಜಯ್ಗೆ ನೋಟಿಸ್ ನೀಡಿದೆ.ಇದಕ್ಕೆ ಪ್ರತಿಕ್ರಿಯಿಸಿರುವ ವಿಜಿ, ಸದ್ಯದಲ್ಲೇ ಮಹಿಳಾ ಆಯೋಗಕ್ಕೆ ಬಂದು ಉತ್ತರ ನೀಡುವುದಾಗಿ ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ