ವೈದ್ಯರ ನಿರ್ಲಕ್ಷದಿಂದ ಮಹಿಳೆ ಸಾವು…!!

ತುಮಕೂರು:

            ನಿರ್ಮಾಣ ಹಂತದ ಆಸ್ಪತ್ರೆಯಲ್ಲಿ ಮಹಿಳೆಗೆ ಅಪೇಂಡಿಕ್ಸ್ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರ ನಿರ್ಲಕ್ಷದಿಂದ ಮಹಿಳೆ ಸಾವನ್ನಪ್ಪಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ನಗರದ ರಾಜಲಕ್ಷ್ಮೀ ನರ್ಸಿಂಗ್ ಹೊಂ ನಲ್ಲಿ ಘಟನೆ ನಡೆದಿದ್ದು ನೆಲಮಂಗಲ ತಾಲ್ಲೂಕಿನ ಹಳೆ ನಿಜಗಲ್ ಗ್ರಾಮದ ವಸಂತ (32)ಮೃತ ಪಟ್ಟಿದ್ದಾಳೆ.

            ಅಪೇಂಡಿಕ್ಸ್ ನಿಂದ ಬಳಲುತ್ತಿದ್ದ ವಸಂತ 21 ರಂದು ರಾಜಲಕ್ಷ್ಮೀ ನರ್ಸಿಂಗ್ ಹೊಂಗೆ ದಾಖಲಾಗಿದ್ದಳು. ನೆನ್ನೆ ಮದ್ಯಾಹ್ನ ಡಾ.ನರೇಂದ್ರ ಅಪೇಂಡಿಕ್ಸ್ ಶಸ್ತ್ರಚಿಕಿತ್ಸೆ ಮಾಡಿದ್ದರು.ಆಸ್ಪತ್ರೆಯಲ್ಲಿ ಐಸಿಯು ಇಲ್ಲದ ಕಾರಣ ಜನರಲ್ ವಾರ್ಡ್ ಗೆ ಶಿಫ್ಟ್ ಮಾಡಲಾಗಿತ್ತು. ಸಂಜೆ ವೇಳೆಗೆ ಉಸಿರಾಟದ ಸಮಸ್ಯೆ ಯಾಗಿದ್ದು ಚಿಕಿತ್ಸೆ ನೀಡದೇ ಟಿ ಎಚ್ ಎಸ್ ಆಸ್ಪತ್ರೆಗೆ ವರ್ಗಾಯಿಸಿ ಕೈ ತೊಳೆದುಕೊಂಡಿದ್ದಾರೆ. ಟಿ ಹೆಚ್ ಆಸ್ಪತ್ರೆಗೆ ತೆರಳುತ್ತಿದ್ದಂತೆ ವಸಂತ ಮೃತಪಟ್ಟಿದ್ದಾಳೆ. ಆಸ್ಪತ್ರೆ ಯಲ್ಲಿನ ಅವ್ಯವಸ್ಥೆ, ವೈಧ್ಯರ ನಿರ್ಲಕ್ಷದಿಂದ ವಸಂತಾ ಸಾವನ್ನಪ್ಪಿದ್ದಾಳೆ ಎಂದು ಪೋಷಕರು ಆರೋಪಿಸಿದ್ದಾರೆ.

             ವಸಂತ ಬಡವರಾಗಿದ್ದು ವೈದ್ಯರ ಎಡವಟ್ಟಿನಿಂದ ಇಬ್ಬರು ಮಕ್ಕಳು ಅನಾಥವಾಗಿದ್ದಾರೆ. ಪೋಷಕರು ಮಕ್ಕಳ ಜೀವನೊಪಾಯಕ್ಕಾಗಿ ಪರಿಹಾರ ನೀಡುವಂತೆ ಆಸ್ಪತ್ರೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ರು. ಮುಂಜಾಗ್ರತಾ ಕ್ರಮವಾಗಿ ಪೋಲಿಸರು ಎರಡು ಆಸ್ಪತ್ರೆಗಳಿಗೆ ಬಿಗಿ ಪೋಲಿಸ್ ಬಂದೋಬಸ್ತ್ ಏರ್ಪಡಿಸಿದ್ದರು .ರಾಜಕೀಯ ಮುಖಂಡರು,ಪೋಲಿಸರು ಹಾಗೂ ವೈದ್ಯರ ರಿಂದ ಪೋಷಕರನ್ನ ಮನವೊಲಿಸಿ ಸಂದಾನ ಯತ್ನ ನಡೆಸಿದ್ರು. ಹೊಸ ಬಡಾವಣೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap