ಗುಬ್ಬಿ
ಸ್ಥಳೀಯ ಬ್ಯಾಂಕ್ ಮತ್ತು ಕೈ ಸಾಲ ತೀರಿಸಲು ಸಾಧ್ಯವಾಗದ ಮತ್ತು ಜಮೀನು ವ್ಯಾಜ್ಯ ಬಗೆಹರಿಯದ ಹಿನ್ನೆಲೆಯಲ್ಲಿ ಮನ ನೊಂದು ಮಹಿಳೆ ಗ್ರಾಮದ ಕಟ್ಟಿಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುಬ್ಬಿ ತಾಲೂಕಿನ ಸಿ.ಎಸ್.ಪುರ ಹೋಬಳಿಯ ಕೆ.ಹರಿವೇಸಂದ್ರ ಗ್ರಾಮದಲ್ಲಿ ತಡರಾತ್ರಿ ನೆಡೆದಿದೆ.
ಗ್ರಾಮದ ನಂಜಪ್ಪನವರ ಪತ್ನಿ ಜಯಲಕ್ಷ್ಮಮ್ಮ 45 ಮೃತ ದುರ್ದೈವಿಯಾಗಿದ್ದು. ಆತ್ಮಹತ್ಯೆಯ ಹಿಂದಿನ ದಿನ ತನ್ನ ಯಾಜಮಾನರಾದ ನಂಜಪ್ಪನಿಗೆ ಊಟ ಬಡಿಸಿ ಹೊರಗೆ ಹೋಗಿ ಬರುವುದಾಗಿ ಹೋದವರು ಪುನಃ ಮನೆಗೆ ಬರಲ್ಲಿಲ್ಲ ನಾವು ಎಲ್ಲ ಕಡೆ ವಿಚಾರಿಸಿದರು ಸಹ ನಮಗೆ ಪತ್ತೆಯಾಗಲ್ಲಿಲ್ಲ ಕೊನೆಗೆ ಗ್ರಾಮದ ಕಟ್ಟೆಯಲ್ಲಿ ಯಾವುದೋ ಹೆಂಗಸಿನ ದೇಹ ವಿರುವುದಾಗಿ ತಿಳಿದು ಹೋಗಿ ನೋಡಿದ್ಧಾಗ ನಮಗೆ ತಿಳಿದಿದ್ದು ನಮ್ಮ ತಾಯಿಯ ದೇಹ ಎಂದು ಮೃತರ ಮಗ ಶಿವಕುಮಾರ್ ತಿಳಿಸಿದರು.ಸ್ಥಳಕ್ಕೆ ಸಿ.ಎಸ್.ಪುರ ಪೊಲೀಸರು ಭೇಟಿ ನೀಡಿ ಸ್ಥಳ ಪರೀಶೀಲನೆ ನೆಡೆಸಿ ಪ್ರಕರಣ ದಾಖಲು ಮಾಡಿರುತ್ತಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
