ಮಧುಗಿರಿ:
ವಿದ್ಯುತ್ ಸ್ಪರ್ಶಿಸಿ ಚಿಂದಿ ಹಾಯುವ ಮಹಿಳೆಯೊಬ್ಬಳು ಮೃತಪಟ್ಟಿರುವ ಘಟನೆ ಗುರುವಾರ ನಡೆದಿದೆ.ತಾಲ್ಲೂಕಿನ ಕಸಬ ಹೋಬಳಿಯ ಶೆಟ್ಟಿಹಳ್ಳಿ ಮಾರಮ್ಮನ ದೇವಾಲಯದ ಸಮೀಪವಿರುವ ನೀರಿನ ಟ್ಯಾಂಕ್ ಸಮೀಪ ಚಿಂದಿ ಹಾಯುವಾಗ ವಿದ್ಯುತ್ ಸ್ಪರ್ಶಿಸಿ ಮಧುಗಿರಿ ಪಟ್ಟಣದ ವಾಲ್ಮೀಕಿ ಬಡಾವಣೆಯ ವಾಸಿ ಲಕ್ಷ್ಮೀ (25) ಮೃತಪಟ್ಟಿದ್ದಾಳೆ.
ಸ್ಥಳಕ್ಕೆ ಮಧುಗಿರಿ ಪೋಲೀಸರು ಭೇಟಿ ನೀಡಿ ಮುಂದಿನ ಕ್ರಮ ಕೈಕೊಂಡಿದ್ದಾರೆ. ಮೃತ ಲಕ್ಷ್ಮೀ ದಿನ ನಿತ್ಯ ಚಿಂದಿ ಹಾಯುವ ಮೂಲಕ ಜೀವನ ಸಾಗಿಸುತ್ತಿದ್ದಳು ಈಕೆಗೆ ಗೀತಾ (08) ಅಂಜಿನಪ್ಪ (06) ಎಂಬಾ ಮಕ್ಕಳಿದ್ದು ಮೃತಳ ಪತಿ ನಾಗರಾಜು ಆನಾರೋಗ್ಯ ಪೀಡಿತನಾಗಿದ್ದಾನೆ. ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಬೆಸ್ಕಾಂ ನವರಾಗಲಿ ಅಥವಾ ಸರಕಾರದಿಂದಾಗಲಿ ಯಾವೂದಾದರೊಂದು ಯೋಜನೆಯಡಿಯಲ್ಲಿ ಪರಿಹಾರ ದೊರಕಿಸಿ ಕೊಡುವಂತೆ ಕುಟುಂಬಸ್ಥರು ಮನವಿ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
