ಶಿರಾ:
ಮಹಿಳೆಯರು ದಿನ ಕಳೆದಂತೆ ಸ್ವಾಭಿಮಾನದಿಂದ ದುಡಿಯುವ ವಾತಾವರಣ ಸೃಷ್ಠಿಯಾಗಿದ್ದು ಮಹಿಳೆಯರನ್ನು ಸಬಲೀಕರಣಗೊಳಸಿಸುವ ಕೆಲಸವನ್ನು ಮಾಡಬೇಕಿದೆ ಎಂದು ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ಗೀತಾ ಕುಂಬಾರ ತಿಳಿಸಿದರು.
ನಗರದ ಸರ್ಕಾರಿ ಬಾಲಕಿಯರ ಪ.ಪೂ. ಕಾಲೇಜಿನಲ್ಲಿ ಕಾನೂನು ಸೇವಾ ಸಮಿತಿ, ತಾ|| ವಕೀಲರ ಸಂಘ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ನಡೆದ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸಮಾಜದಲ್ಲಿ ಹೆಣ್ಣನ್ನು ನಿಕೃಷ್ಟವಾಗಿ ಕಾಣುವ ಪರಿಪಾಠ ದೂರಗೊಳ್ಳಬೇಕು. ಮಹಿಳೆಯರಲ್ಲಿ ಇಂದು ಸ್ವಯಂ ಉದ್ಯೋಗದ ಶಕ್ತಿ ಮೂಡುತ್ತಿದೆ. ಲಿಂಗತಾರತಮ್ಯ ದೂರಗೊಳ್ಳದಿದ್ದರೆ ಸಮಾಜದ ಅಭಿವೃದ್ಧಿ ಸಾದ್ಯವಿಲ್ಲ. ಭ್ರೂಣ ಹತ್ಯೆ, ಶಿಶು ಹತ್ಯೆಯಂತಹ ಕಾರ್ಯಗಳು ದೂರಗೊಳ್ಳುವ ಕೆಲಸ ಮೊದಲಾಗಬೇಕು ಎಂದು ಶ್ರೀಮತಿ ಗೀತಾ ಕುಂಬಾರ ತಿಳಿಸಿದರು
ಸಮಾರೆಂಭದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಬಿ.ಪಿ.ಪಾಂಡುರಂಗಯ್ಯ ಮಾತನಾಡಿ ವಿದ್ಯಾರ್ಥಿಗಳು ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ ವಿದ್ಯಾಭ್ಯಾಸದತ್ತ ಗಮನ ನೀಡಬೇಕು. ಮಕ್ಕಳಲ್ಲಿ ಒಂದು ನಿಶ್ಚಿತ ಗುರಿ ಇದ್ದಾಗ ಮಾತ್ರಾ ಸಾಧಕರಾಗಲು ಸಾದ್ಯ ಎಂದರು.
ವಕೀಲರಾದ ರಂಗನಾಥ್, ಶ್ರೀಮತಿ ಸರಸ್ವತಿ ಮಹಿಳಾ ಸಬಲೀಕರಣ ಕುರಿತು ಉಪನ್ಯಾಸ ನೀಡಿದರು. ತಾ||ವಕೀಲರ ಸಂಘದ ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷ ಚಂದ್ರಣ್ಣ, ನರಸಿಂಹಾಚಾರ್, ಗೋವಿಂದಯ್ಯ, ಶ್ರೀನಿವಾಸ, ನಾಗರಾಜು, ಆರ್.ಪರಮೇಶ್ವರ್ ಮುಂತಾದವರು ಹಾಜರಿದ್ದರು.