ತವರಿನಿಂದ ಗಂಡನ ಮನೆಗೆಂದು ಹೊರಟವರು ನಾಪತ್ತೆ

ತುರುವೇಕೆರೆ

   ಗಂಡನ ಮನೆಗೆ ಹೋಗುವುದಾಗಿ ಹೇಳಿ ತವರು ಮನೆಯಿಂದ ಹೊರ ಹೋದವರು ಗಂಡನ ಮನೆಗೂ ಹೋಗದೆ ನಾಪತ್ತೆಯಾಗಿರುವ ಘಟನೆ ಸೋಮವಾರ ಮಧ್ಯಾಹ್ನ ಪಟ್ಟಣದಲ್ಲಿ ನಡೆದಿದೆ.

        ಪಟ್ಟಣದ ಬಸವೇಶ್ವರ ನಗರದ ಪೂರ್ಣಿಮಾ (20) ಎಂಬುವರು ತವರು ಮನೆಯಿಂದ ಮೇ 6 ರ ಸೋಮವಾರ ಮಧ್ಯಾಹ್ನ, ಮುನಿಯೂರು ವಿವೇಕಾನಂದ ನಗರದಲ್ಲಿ ವಾಸವಿರುವ ತನ್ನ ಗಂಡ ರಂಗನಾಥ್ ಮನೆಗೆ ಹೋಗುವುದಾಗಿ ತವರುಮನೆಯಲ್ಲಿ ತಿಳಿಸಿ ಬಂದವರು ಗಂಡನ ಮನೆಗೂ ಬರದೆ ನಾಪತ್ತೆಯಾಗಿದ್ದಾರೆ. ಗಂಡ ರಂಗನಾಥ್ ಸಂಬಂಧಿಕರ ಮನೆಗಳಲ್ಲಿ ವಿಚಾರಿಸಿ ಪೂರ್ಣಿಮಾಳ ಸುಳಿವು ಸಿಗದ ಹಿನ್ನೆಲೆಯಲ್ಲಿ ತುರುವೇಕೆರೆ ಪಟ್ಟಣದ ಪೋಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಯಾರಿಗಾದರೂ ಸುಳಿವು ಸಿಕ್ಕಲ್ಲಿ ಪೋಲೀಸ್ ಠಾಣೆ ದೂರವಾಣಿ ಸಂಖ್ಯೆ: 08139 287334 ಅಥವಾ 9591692799 ನಂಬರಿಗೆ ತಿಳಿಸಲು ಕೋರಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link