ಲಿಂಗತಾರತಮ್ಯ, ಭ್ರೂಣಹತ್ಯೆಗೆ ಹೆಣ್ಣೇ ಕಾರಣ : ಶಿವಮೂರ್ತಿ ಸ್ವಾಮೀಜಿ

ಚಿತ್ರದುರ್ಗ :

    ಹೆಣ್ಣುಶಿಶು ಹತ್ಯೆಗೆ ಮತು ಲಿಂಗ ಅಸಮಾನತೆಗೆ ಇಂದು ಹೆಣ್ಣೇ ಕಾರಣವಾಗುತ್ತಿದ್ದಾಳೆ ಎಂದು ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು.ನಗರದ ಬಸವಕೇಂದ್ರ ಶ್ರೀಮುರುಘಾಮಠದಲ್ಲಿ ಎಸ್.ಜೆ.ಎಂ. ಶಾಂತಿ ಮತ್ತು ಪ್ರಗತಿ ಫೌಂಡೇಶನ್ (ರಿ) ಚಿತ್ರದುರ್ಗ ಇವರ ಸಹಯೋಗದಲ್ಲಿ ನಡೆದ ಇಪ್ಪತ್ತೊಂಬತ್ತನೇ ವರ್ಷದ ಹನ್ನೆರಡನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶ್ರೀಗಳು ಮಾತನಾಡಿದರು.

    20 ವರ್ಷಗಳ ಹಿಂದೆ ವರನನ್ನು ಹುಡುಕಿಕೊಂಡು ವಧುವಿನ ಕಡೆಯವರು ಬರುತ್ತಿದ್ದರು. ಆದರೆ ಇಂದು ವಧುವನ್ನು ಹುಡುಕಿಕೊಂಡು ವರ ಬರುವಂತಾಗಿದೆ. ಇಂದು ಸಮಾಜದಲ್ಲಿ ಲಿಂಗಾನುಪಾತ ವ್ಯತ್ಯಾಸಗೊಳ್ಳುತ್ತಿದೆ. ಯುವತಿಯರ ಸಂಖ್ಯೆ ಕಡಿಮೆಯಾಗಲು ಹೆಣ್ಣುಶಿಶು ಜನನ ಸಂಖ್ಯೆಯಲ್ಲಿ ಕಡಿಮೆಯಾಗಿರುವುದು. ಮಹಿಳೆಯಿಂದಲೇ ಮಹಿಳೆಯರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದರು

    ವೈಜ್ಞಾನಿಕವಾಗಿ ಹಾಗು ಇನ್ನು ಕೆಲವು ಕಡೆ ಹುಟ್ಟಿದ ಹೆಣ್ಣುಮಗುವಿನ ಹತ್ಯೆ ಮಾಡುವ ಕೃತ್ಯಗಳು ಇಂದಿಗೂ ನಡೆಯುತ್ತಿರುವುದು ನಿಜವಾಗಿಯೂ ತಲೆ ತಗ್ಗಿಸವಂತಹದು. ಹೆಣ್ಣುಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿ ವಿದ್ಯಾವಂತರನ್ನಾಗಿ ಮಾಡಿ. ಪುರುಷರು ಮಾಡುವ ಕೆಲಸಗಳನ್ನು ಅವರೂ ಮಾಡಲು ಸಮರ್ಥರಿದ್ದಾರೆ. ಸಿದ್ಧರಿದ್ದಾರೆ. ಹಾಗಾಗಿ ಲಿಂಗ ತಾರತಮ್ಯ ಮಾಡಬೇಡಿ. ಎಲ್ಲರೂ ಒಂದೇ ಎಂದು ತಿಳಿಯಿರಿ. ಇಲ್ಲದೇ ಹೋದಲ್ಲಿ ಗಂಡುಮಕ್ಕಳು ಮುಂದಿನ ದಿನಗಳಲ್ಲಿ ವಧುಗಾಗಿ ಪರಿತಪಿಸಬೇಕಾಗುವುದು ಎಂದು ಹೇಳಿದರು.

    ವಡ್ಡನಹಾಳ್‍ನ ವಿಶ್ವಕರ್ಮ ಸಂಸ್ಥಾನ ಸಾವಿತ್ರಿ ಪೀಠದ ಶ್ರೀ ಶಂಕರಾತ್ಮಾನಂದ ಸರಸ್ವತೀ ಸ್ವಾಮಿಗಳು ಮಾತನಾಡಿ, ಜಾತಿ ಸಮುದಾಯಗಳನ್ನು ಮೀರಿ ಎಲ್ಲರನ್ನು ಒಂದುಗೂಡಿಸುತ್ತ ಬಂದಿರುವ ಶಿವಮೂರ್ತಿ ಮುರುಘಾ ಶರಣರು ದುಷ್ಟ ವಿಚಾರಗಳ ಕುರಿತು ಬದಲಾವಣೆ ತರುತ್ತ ಈ ಕಾರ್ಯಕ್ರಮವನ್ನು ಆಯೋಜಿಸಿರುವುದು ನಿಜವಾಗಿಯೂ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು
ಪತಿ-ಪತ್ನಿ ಇಬ್ಬರೂ ಕಷ್ಟಸುಖಗಳಲ್ಲಿ ಸಮಾನರಾಗಿ ಪಾಲ್ಗೊಂಡು ಪರಸ್ಪರ ಅರಿತು ಗೌರವಿಸುತ್ತ ಜೀವನ ನಡೆಸಿರಿ. ಒಳ್ಳೆಯ ಸಂಸ್ಕøತಿ ಸಂಸ್ಕಾರ ಈ ದಿನದಿಂದ ಈ ಮಠದಿಂದ ನಿಮ್ಮಲ್ಲಿ ಆರಂಭವಾಗಬೇಕು ಎಂದು ತಿಳಿಹೇಳಿದರು.

    ಮುಖ್ಯಅತಿಥಿ ಕುವೆಂಪು ವಿವಿ ಕುಲಸಚಿವ ಎಸ್.ಎಸ್. ಪಾಟೀಲ್ ಮಾತನಾಡಿ, ಮದುವೆಯ ಹೆಸರಿನಲ್ಲಿ ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂ ಎಂಬಂತೆ ಸಾಲ ಮಾಡಿಯಾದರೂ ಹಣವನ್ನು ವ್ಯಯ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ಮುರುಘಾ ಶರಣರು ನಡೆಸುತ್ತಿರುವ ಈ ಕಾರ್ಯಕ್ರಮ ಸಾಲದ ಬಾಧೆಯಿಂದ ನರಳದಂತೆ ಮಾಡುತ್ತದೆ. ಸಮಾನತೆ ಸಾರುತ್ತದೆ ಎಂದರು 12ನೇ ಶತಮಾನದಲ್ಲಿ ಅಂತರ್ಜಾತಿ ವಿವಾಹ ಆರಂಭವಾದವು. ಕಾರ್ಯಾತ್ಮಕವಾಗಿ ಕ್ರಿಯಾತ್ಮಕವಾಗಿ ಸಾಮಾಜಿಕ ಸಮಸ್ಯೆಗಳನ್ನು ಬಗೆಹರಿಸುವ ಕಾರ್ಯವನ್ನು ಶ್ರೀಗಳು ಮಾಡುತ್ತಿದ್ದಾರೆ. ಇಂದು ಸಂಬಂಧಗಳ ಗಾಢತೆ ಹಾದಿ ತಪ್ಪುತ್ತಿದೆಯೇನೋ ಎಂಬಂತಿದೆ.

       ಹಿಂದೆ ವಿವಾಹ ವಿಚ್ಛೇದನಸಂಖ್ಯೆ ಅತ್ಯಂತ ನಗಣ್ಯ. ಆದರೆ ಇಂದು ಇವುಗಳ ಸಂಖ್ಯೆ ಅಧಿಕವಾಗುತ್ತಿವೆ. ಶಾಲಾಕಾಲೇಜು, ವಿಶ್ವವಿದ್ಯಾಲಯಗಳು ನಮ್ಮ ಮೌಲ್ಯಗಳನ್ನು ಮತ್ತಷ್ಟು ಗಟ್ಟಿಗೊಳಿಸಬೇಕಾಗಿದೆ. ಆ ಗಟ್ಟಿತನವನ್ನು ಮಠಗಳು ಮಾಡುತ್ತಿವೆ ಎನ್ನುವುದೇ ಸಮಾಧಾನದ ಸಂಗತಿಯಾಗಿದೆ ಎಂದರು.

       ಸಹ್ಯಾದ್ರಿ ಕಾಲೇಜಿನ ಸಹಪ್ರಾಧ್ಯಾಪಕ ಡಾ.ಎಂ.ಹೆಚ್. ಪ್ರಹ್ಲಾದಪ್ಪ ಮಾತನಾಡಿ, ಶ್ರೀಮಠದಲ್ಲಿ ಯಾವುದೇ ಮೌಢ್ಯಗಳಿಗೆ ಅವಕಾಶ ನೀಡದೆ ಸಮಾನತೆಯ ಒತ್ತಾಸೆಯೊಂದಿಗೆ ಕಳೆದ 29 ವರ್ಷಗಳಿಂದ ಶ್ರೀಗಳು ನಡೆಸುತ್ತಿರುವ ಈ ಸರಳ ಸಾಮೂಹಿಕ ಕಲ್ಯಾಣ ಮಹೋತ್ಸವ ಸಮಾಜಕ್ಕೆ ಮಾದರಿಯಾಗಿದೆ. ಅನಾಥ ಮಕ್ಕಳ ಆರೈಕೆ, ಪೋಷಣೆಯೊಂದಿಗೆ ಪರಿಸರದ ಬಗ್ಗೆ ಅಪಾರ ಕಾಳಜಿಯನ್ನು ಹೊಂದಿರುವ ಮುರುಘಾ ಶರಣರು ಸಮಾಜದ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತಿದ್ದಾರೆ ಎಂದು ನುಡಿದರು.

      ದಾಸೋಹಿಗಳಾದ ಎಸ್. ರುದ್ರಮುನಿಯಪ್ಪ, ಜಿ. ದೇವರಾಜು ವೇದಿಕೆಯಲ್ಲಿದ್ದರು. ಶ್ರೀ ತಿಪ್ಪೇರುದ್ರಸ್ವಾಮಿಗಳು, ಅಕ್ಕಿಮಠದ ಶ್ರೀ ಗುರುಲಿಂಗ ಸ್ವಾಮಿಗಳು, ಶ್ರೀ ಬಸವನಾಗಿದೇವ ಸ್ವಾಮಿಗಳು, ಕುಂಬಾರ ಗುರುಪೀಠದ ಸ್ವಾಮಿಗಳು ಉಪಸ್ಥಿತರಿದ್ದರು. ಎ.ಎಂ. ಸೇತುರಾಂ, ಕೆಇಬಿ ಷಣ್ಮುಖಪ್ಪ, ಪೈಲ್ವಾನ್ ತಿಪ್ಪೇಸ್ವಾಮಿ, ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ. ಪರಮಶಿವಯ್ಯ, ಕಾರ್ಯನಿರ್ವಹಣಾಧಿಕಾರಿ ಎಂ.ಜಿ. ದೊರೆಸ್ವಾಮಿ ಹಾಜರಿದ್ದರು.

       ಪ್ರಾರಂಭದಲ್ಲಿ ಜಮುರಾ ಕಲಾವಿದರು ವಚನ ಪ್ರಾರ್ಥನೆ ಮಾಡಿದರು. ಪ್ರೊ. ಸಿ.ಎಂ. ಚಂದ್ರಪ್ಪ ಸ್ವಾಗತಿಸಿದರು. ಜ್ಞಾನಮೂರ್ತಿ ಶರಣುಸಮರ್ಪಣೆ ಮಾಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap