ದೆಹಲಿಯಲ್ಲಿ ನಾಪತ್ತೆಯಾದ ಮಹಿಳೆ ಬೆಂಗಳೂರಿನಲ್ಲಿ ಪತ್ತೆ

ಬೆಂಗಳೂರು

    ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಡೆತ್‍ನೋಟ್ ಬರೆದಿಟ್ಟು ನವದೆಹಲಿಯಿಂದ ನಾಪತ್ತೆಯಾಗಿದ್ದ ಮಹಿಳೆಯೊಬ್ಬರು ಬೆಂಗಳೂರಿನಲ್ಲಿ ಪತ್ತೆಯಾಗಿದ್ದಾರೆ.

      ನಾಪತ್ತೆಯಾಗಿದ್ದ ಅನಿಲ್ ಅವರ ಪುತ್ರಿ ಕೋಮಲ್ ನಗರದಲ್ಲಿ ಪತ್ತೆಯಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ. ಕಳೆದ ಶುಕ್ರವಾರ ರಂದು ಸಂಜೆ ನಾಪತ್ತೆಯಾಗಿದ್ದ ಕೋಮಲ್ ತನ್ನ ಸ್ಕಾರ್ಫಿಯೋ ಕಾರನ್ನು ಗಾಜಿಯಾಬಾದ್‍ನ ಕಾಲುವೆ ಬಳಿ ನಿಲ್ಲಿಸಿ ನಾಪತ್ತೆಯಾಗಿದ್ದರು.

     ಮರುದಿನ ಅನುಮಾನಾಸ್ಪದವಾಗಿ ಕಾರು ನಿಂತಿದ್ದ ಸ್ಥಳಕ್ಕೆ ಬಂದ ಪೆÇಲೀಸರು ಪರಿಶೀಲಿಸಿದಾಗ ಕಾರಿನಲ್ಲಿ ಡೆತ್ ನೋಟ್ ಪತ್ತೆಯಾಗಿದ್ದು, ಅದರಲ್ಲಿ ನಾನು ನೊಯ್ಡಾ ನಿವಾಸಿಯಾಗಿದ್ದು, ತಂದೆ ಭಾರತೀಯ ರೈತ ಸಂಘದಲ್ಲಿ ರಾಷ್ಟ್ರೀಯ ಕಾರ್ಯದರ್ಶಿ ಯಾಗಿದ್ದಾರೆ. ನನ್ನ ಪತಿಯ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಉಲ್ಲೇಖಿಸಿದ್ದರು.

       ಇದನ್ನು ಆಧರಿಸಿ ಮೂರು ದಿನಗಳ ಕಾಲ ಗಾಜಿಯಾಬಾದ್‍ನ ಕಾಲುವೆಯಲ್ಲಿ ಹುಡುಕಾಟ ನಡೆಸಿದ್ದರೂ, ಕೋಮಲ್ ಪತ್ತೆಯಾಗಿರಲಿಲ್ಲ. ಕೋಮಲ್ ನಾಪತ್ತೆ ಸಂಬಂಧ ಅವರ ಪತಿ ಅಭಿಷೇಕ್, ಸ್ಥಳೀಯ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

      ಕೋಮಲ್ ಅವರ ತಂದೆ ಅನಿಲ್ ಕೂಡ ದೂರು ದಾಖಲಿಸಿ ದೆಹಲಿಯ ಪಾಂಡವ ನಗರದಲ್ಲಿನ ಪೆÇಲೀಸ್ ಅಧಿಕಾರಿಯೊಬ್ಬರ ಪುತ್ರ ಅಭಿಷೇಕ್‍ಗೆ ನನ್ನ ಪುತ್ರಿಯನ್ನು ಕೊಟ್ಟು, 1.5 ಕೋಟಿ ರೂ. ಖರ್ಚುಮಾಡಿ ವಿವಾಹ ಮಾಡಿಕೊಟ್ಟಿದ್ದೆ. ಇತ್ತೀಚೆಗೆ ಅಭಿಷೇಕ್, ಮತ್ತವನ ಕುಟುಂಬದವರು ಮಗಳಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ತಿಳಿಸಿದರು. ಇದರ ಬೆನ್ನಲ್ಲೇ ಕೋಮಲ್ ಪತ್ತೆಯಾಗಿದ್ದಾರೆ. ಆಕೆ ಎಂಬಿಎ ಪದವಿ ಮುಗಿಸಿ ವಿಮಾ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link