ಹರಿಹರ
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಹಿಳೆಯರಿಗಾಗಿ ನೀಡುತ್ತಿರುವ ಸೌಲಭ್ಯಗಳನ್ನು ಪಡೆಯುವುದರೊಂದಿಗೆ ಅಭಿವೃದ್ದಿಯತ್ತ ಸಾಗಲು ಮಹಿಳೆಯರು ಮುಂದಾಗಬೇಕು. ದೇಶದಲ್ಲಿ ಮಹಿಳಿಯರಿಗೆ ನ್ಯಾಯಯುತವಾಗಿ ಸಿಗಬೇಕಾಗಿರುವ ಸೌಲಭ್ಯಗಳನ್ನು ಪಡೆಯುವುದಕ್ಕಾಗಿ ಕರ್ನಾಟಕ ರಕ್ಷಣಾ ವೇದಿಕೆಗೆ ಮಹಿಳಿಯರು ಸಂಘಟಿತರಾಬೇಕೆಂದು ಶಾಸಕ ಎಸ್‍ರಾಮಪ್ಪ ಹೇಳಿದರು.
ನಗರದ ಪ್ರವಾಸಿ ಮಂದಿರದ ಸಮೀಪ ನಡೆದ ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಜಾಗೃತಿ ಜಿಲ್ಲಾ ಘಟಕದ ನೂತನ ಅಧ್ಯಕ್ಷೆ ಹಾಗೂ ಕಾರ್ಯಾಧ್ಯಕ್ಷೆ ಅಧಿಕಾರ ಸ್ವೀಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ತೊಟ್ಟಿಲ ತೂಗುವ ಕೈ ದೇಶವನ್ನೆ ತೂಗುತ್ತದೆ ಎಂಬ ಮಾತನ್ನು ದಿವಂಗತ ಪ್ರಧಾನಿ ಇಂದಿರಾಗಾಂಧಿಯವರು ಜಗತ್ತಿಗೆ ತೋರಿಸಿಕೂಟ್ಟಿದ್ದಾರೆ ಎಂದರು.
ಇಂದಿನ ದಿನಮಾನಗಳಲ್ಲಿ ಸರ್ಕಾರ ಮಹಿಳೆಯರಿಗೆ ಎಲ್ಲಾ ಕ್ಷೇತ್ರಗಳಲ್ಲಿ ಹೆಚ್ಚಿನ ಸ್ಥಾನಮಾನ ನೀಡಿದೆ. ಅದನ್ನೆಲ್ಲಾ ಸದುಪಯೋಗ ಪಡಿಸಿಕೊಂಡು ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಜಾಗೃತಿ ಕಾರ್ಯಕರ್ತರು ಶ್ರಮೀಸಬೇಕು ಜೋತೆಗೆ ಸಂಘಟನೆಗಳು ಜನರನ್ನು ವಂಚಿಸದೆ ಜನಪರ ಕೆಲಸಗಳಿಗೆ ನಮ್ಮ ಬೆಂಬಲ ಸದಾ ಇರುತ್ತದೆ ಎಂದು ಹೇಳಿದರು.
ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಜಾಗೃತಿದಾವಣಗೇರೆ ಜಿಲ್ಲಾನೂತನ ಅಧ್ಯಕ್ಷೆ ಕವಿತಾ ಮಲ್ಲಿಕಾರ್ಜುನಎಸ್.ಕೆ, ಕಾಯಾದ್ಯಕ್ಷೆ ಸುನೀತಾ ಧನ್‍ರಾಜ್ ಇವರುಗಳಗೆ ಇದೆ ಸಂದರ್ಭದಲಿ ್ಲಅಧಿಕಾರ ಹಸ್ತಾಂತರಿಸಲಾಯಿತು. ನಗರಸಭಾ ಮಾಜಿ ಅಧ್ಯಕ್ಷ ಶಂಕರ ಕಟಾವಕರ, ರಾಜ್ಯ ಮಾನವ ಹಕ್ಕುಗಳ ಜಿಲ್ಲಾ ಅಧ್ಯಕ್ಷ ಪ್ರಭುಗೌಡ ಎಂ.ಎನ್, ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷೆ ಗಂಗಮ್ಮ, ತಾಲ್ಲೂಕ್ ಪಂಚಾಯಿತ್ ಮಾಜಿ ಅಧ್ಯಕ್ಷ ಕೊಟ್ರೇಶಪ್ಪ, ಕರವೇ ಮಹಿಳಾ ಜಾಗೃತಿ ಬೆಂಬಲಿಗರಾದ ಗಂಗಾಧರ, ಕಾಂಗ್ರೇಸ್ ಮುಖಂಡ ಖಾನ್‍ಸಾಬ್, ಹಿರಿಯ ನಾಗರೀಕರಾದ ಶಿವಾನಂದ ಶೀತಿಮನೆ, ಧನರಾಜ್ ಕಡರನಾಯಕನಹಳ್ಳಿ, ಜಿ.ಎಂ.ನಾಗರತ್ನಾ, ಲಕ್ಷ್ಮಿಎಸ್.ಕೆ, ನಾಗರತ್ನಾ ಹುಲ್ಲತ್ತಿ, ರಂಗಮ್ಮ ಹೆಚ್, ಗೀತಾ ಹರಿಹರ, ಶಾರದಮ್ಮ ಹೆಚ್‍ಆರ್‍ಆರ್, ಗೀತಾಆರ್ ಎಂ, ಸುನಿತಾ ಬೆಳ್ಳೂಡಿ, ಅನುರಾದ ಹೆಚ್.ಟಿ, ಸರೋಜಮ್ಮ ಜಿ.ಆರ್, ನೀಲಮ್ಮಜಿ.ಎಸ್, ದ್ರಾಕ್ಷಾಯಿಣಿ ಕೆ.ಎನ್‍ಹಳ್ಳಿ ಉಪಸ್ಥಿತರಿದ್ದರು.
ನಮ್ಮದೇಶದಲ್ಲಿ ಮಹಿಳೆಗೆ ಹೆಚ್ಚಿನ ಸ್ಥಾನಮಾನವಿದೆ ನಿಜ ಆದರೆ, ಪುರುಷ ಪ್ರಧಾನವಾದ ಈ ದೇಶದಲ್ಲಿ ಮಹಿಳೆ ತನಗಾಗಿರುವ ಸ್ಥಾನಮಾನವನ್ನು ಪಡೆಯುವುದಕ್ಕಾಗಿ ಹೋರಾಟ ನಡೆಸುವುದು ಅನಿವಾರ್ಯವಾಗಿದೆ.ಸಮಾಜದ ಮುಖ್ಯ ವಾಹಿನಿಯಲ್ಲಿ ಮಹಿಳೆಯರು ಸಕ್ರಿಯವಾಗಿ ಮುಂದೆ ಬರಬೇಕಿದೆ.ಆದ್ದರಿಂದ ಪ್ರತಿ ಹಂತದಲ್ಲಿಯೂ ಮಹಿಳೆಯರು ಸಂಘಟಿತರಾಗುವುದು ಇಂದಿನ ಅಗತ್ಯ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








