ಬೆಂಗಳೂರು 

ಪತಿಯನ್ನು ಹುಡುಕಿಕೊಡಿ ಇಲ್ಲದಿದ್ದರೆ ಠಾಣೆ ಮುಂದೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮಹಿಳೆಯೊಬ್ಬರು ಪೊಲೀಸರಿಗೆ ಬೆದರಿಕೆ ಹಾಕಿರುವ ಘಟನೆ ಎಚ್‍ಎಸ್‍ಆರ್ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ
ಎಚ್‍ಎಸ್‍ಆರ್ ಲೇಔಟ್ ನಿವಾಸಿಯಾಗಿರುವ ಜಿನಿಷಾ ತನ್ನ ಪತಿ ಜೈಯನ್ನು ಹುಡುಕಿಕೊಡುವಂತೆ ಪೊಲೀಸರಿಗೆ ದೂರು ನೀಡಿದ್ದರು. ಆದರೆ ಪತಿ ಜೈ ಬಗ್ಗೆ ಎಲ್ಲೂ ಮಾಹಿತಿ ಸಿಗದ ಕಾರಣ ಜಿನಿಷಾ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ.
ಜೈ ಹಾಗೂ ಜಿನಿಷಾ ಎರಡು ವರ್ಷಗಳ ಹಿಂದೆ ಮದುವೆ ಆಗಿದ್ದರು. ಮದುವೆ ಆಗಿ ಇಬ್ಬರು ಬೆಂಗಳೂರಿನ ಎಚ್‍ಎಸ್‍ಆರ್ ಲೇಔಟ್ ನಲ್ಲಿ ವಾಸವಾಗಿದ್ದರು. ಕಳೆದ ಆರು ತಿಂಗಳ ಹಿಂದೆ ಜೈ ಮನೆಯಿಂದ ಹೊರಗೆ ಹೋಗಿದ್ದು, ಮತ್ತೆ ಹಿಂದಿರುಗಿ ಬಂದಿಲ್ಲ. ಆಗ ಜಿನಿಷಾ ತನ್ನ ಪತಿಯನ್ನು ಹುಡುಕಿಕೊಂಡುವಂತೆ ಎಚ್‍ಎಸ್‍ಆರ್ ಲೇಔಟ್ ಪೊಲೀಸರಿಗೆ ದೂರು ನೀಡಿದ್ದರು.
ಪತಿ ಜೈ ಬಗ್ಗೆ ಎಲ್ಲೂ ಮಾಹಿತಿ ಸಿಗದ ಕಾರಣ ಜಿನಿಷಾ ನನ್ನ ಪತಿಯನ್ನು ಹುಡುಕಿಕೊಡುವುದರಲ್ಲಿ ಪೊಲೀಸರು ವಿಫಲರಾಗಿದ್ದಾರೆ. ಹೀಗಾಗಿ ನಾನು ಆತ್ಮಹತ್ಯೆ ಮಾಡಿಕೊಂಡರೆ ಒಂದು ವರ್ಷದ ಮಗುವಿಗೆ ಪೊಲೀಸರೇ ಜವಾಬ್ದಾರಿ ಎಂದು ಬೆಂಗಳೂರು ಪೊಲೀಸರ ಫೇಸ್‍ಬುಕ್ ಪೇಜ್‍ನಲ್ಲಿ ಬರೆದು ಆತ್ಮಹತ್ಯೆ ಬೆದರಿಕೆ ಹಾಕಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








